ವನಿತಾ ಯುವತಿ ಮಂಡಲ ವಾರ್ಷಿಕೋತ್ಸವ

ಕಿನ್ನಿಗೋಳಿ: ಮಹಿಳೆ ಕೀಳರಿಮೆಗಳನ್ನು ಬಿಟ್ಟು ಆರ್ಥಿಕ ಹಾಗೂ ಶೈಕ್ಷಣಿಕವಾಗಿ ಸದೃಡರಾಗಿ ಸಮಾಜದ ಮುಖ್ಯವಾಹಿನಿಗೆ ಬರಬೇಕು ಎಂದು ಮುಂಬಯಿ ಉದ್ಯಮಿ ಸಮಾಜ ಸೇವಕಿ ರತ್ನಾ ಎಸ್. ಕೋಟ್ಯಾನ್ ಹೇಳಿದರು
ಕಿನ್ನಿಗೋಳಿ ವನಿತಾ ಯುವತಿ ಮಂಡಲದ ಸಭಾಭವನದಲ್ಲಿ ಶನಿವಾರ ನಡೆದ ವನಿತಾ ಯುವತಿ ಮಂಡಲದ ವಾರ್ಷಿಕೋತ್ಸವ ಹಾಗೂ ಮಕ್ಕಳ ದಿನಾಚರಣೆ ಕಾರ್ಯಕ್ರಮದಲ್ಲಿ ಹೇಳಿದರು.
ಈ ಸಂದರ್ಭ ಸಂಗೀತ ಕ್ಷೇತ್ರದಲ್ಲಿ ಸಾಧನೆಗೈದ ಬಾಲ ಪ್ರತಿಭೆ ಆಶ್ವಿಜಾ ಉಡುಪ, ಶೋಭಿತ ಭಟ್ ಹಾಗೂ ಶಿಕ್ಷಣPತ್ರದಲ್ಲಿ ಸಾಧನೆಗೈದ ಮಕ್ಕಳ ಹೆತ್ತವರಾದ ರೇಣುಕಾ ಶೆಟ್ಟಿ, ಲಕ್ಷ್ಮೀ ಆಚಾರ್ಯ ಅವರನ್ನು ಗೌರವಿಸಲಾಯಿತು. ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಶಿಕ್ಷಣಕ್ಕಾಗಿ ಸಹಾಯ ಹಸ್ತ ನೀಡಲಾಯಿತು.
ವನಿತಾ ಯುವತಿ ಮಂಡಲ ಅಧ್ಯಕ್ಷೆ ರೋಹಿಣಿ ನವೀನ್ ಅಧ್ಯಕ್ಷತೆ ವಹಿಸಿದ್ದರು.
ಸಾವಿತ್ರಿ ಶೆಟ್ಟಿ , ಕಿನ್ನಿಗೋಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಫಿಲೋಮಿನಾ ಸಿಕ್ವೇರಾ, ಸಾಹಿತಿ ಗಾಯತ್ರಿ ಎಸ್. ಉಡುಪ, ಸುಮತಿ ಶೆಟ್ಟಿ, ಪೂಜಾ ನಾಯಕ್, ನಿರ್ಮಲಾ ನಾಯಕ್, ರಾಧಾ ಶೆಣೈ, ಮಧುರಾ ಶೆಟ್ಟಿ , ವಿದ್ಯಾಶೆಟ್ಟಿ , ವಿನುತಾ ಭಟ್ ಮತ್ತಿತರರು ಉಪಸ್ಥಿತರಿದ್ದರು.
ಭಾರತೀ ಶೆಣೈ ಸ್ವಾಗತಿಸಿದರು. ಮಲತಾ ಶೆಟ್ಟಿ , ಸಂಧ್ಯಾ ಶೆಟ್ಟಿ , ಅರುಣಾ ಉಡುಪ ಪರಿಚಯಿಸಿದರು, ವಿಜಯಾ ಉಮೇಶ್ ವಂದಿಸಿದರು.

Kinnigoli-19111702

Comments

comments

Comments are closed.

Read previous post:
Kinnigoli-18111705
ವಿಶೇಷ ಕಲಾವಿದರಿಗೆ ಪ್ರೋತ್ಸಾಹ ಅಗತ್ಯ

ಮೂಲ್ಕಿ: ಕಲಾವಿದರ ಕಲಾ ಪ್ರತಿಭೆಗಳಿಗೆ ಸೂಕ್ತವಾದ ಪ್ರೋತ್ಸಾಹ ಅಗತ್ಯ, ದೇಹದ ನ್ಯೂನತೆಯನ್ನು ಲೆಕ್ಕಿಸದೇ ತಮ್ಮಲ್ಲಿರುವ ಸಾಂಸ್ಕೃತಿಕ ಕಲೆಗಳನ್ನು ಅನಾವರಣಗೊಳಿಸುವ ಸಾಮರ್ಥ್ಯವನ್ನು ಪ್ರತಿಭೆಗಳಿಂದಲೇ ಬೆಳಗಿಸುವ ಛಲವನ್ನು ಹೊಂದಿರುವವರಿಗೆ ಸಮಾಜವು...

Close