ಕಿರೆಂ – ನವೀಕೃತ ಚರ್ಚ್ ಲೋಕಾರ್ಪಣೆ

ಕಿನ್ನಿಗೋಳಿ: ಸಮಾಜದಲ್ಲಿ ಸುಖ ಶಾಂತಿ ಮಾನಸಿಕ ನೆಮ್ಮದಿ ನೆಲೆಸಲು ಪ್ರೀತಿ ಮತ್ತು ಭಕ್ತಿಯಿಂದ ಪ್ರಾರ್ಥನೆ ಮಾಡುವ ಪ್ರಾರ್ಥನಾ ಮಂದಿರಗಳ ಬಗ್ಗೆ ಒಲವು ಕಾಳಜಿ ಇರಬೇಕು ಎಂದು ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತೀ ವಂದನೀಯ ಡಾ. ಅಲೋಶಿಯಸ್ ಪಾವ್ಲ್ ಡಿಸೋಜಾ ಹೇಳಿದರು.
ದಾಮಸ್‌ಕಟ್ಟೆ ಕಿರೆಂ ರೆಮದಿ ಅಮ್ಮನವರ ನವೀಕೃತ ಚರ್ಚ್ ಉದ್ಘಾಟನೆ ಹಾಗೂ ಆಶೀರ್ವಚನ ನೀಡಿ ಮಾತನಾಡಿದರು.
ಗುಲ್ಬರ್ಗಾ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತೀ ವಂದನೀಯ ಡಾ. ರಾಬರ್ಟ್ ಮಿರಾಂದ ಚರ್ಚಿನ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಿ ಜಾತಿ, ಮತ, ಧರ್ಮಗಳ ಬೇಧವಿಲ್ಲದೆ ಸಮಾಜದ ಎಲ್ಲರೂ ಸ್ನೇಹ ಸೌಹಾರ್ಧದಿಂದ ಬೆರೆಯುವ ಮೂಲಕ ಸುದೃಡ ಸಮಾಜ ರೂಪಿಸಲು ಕಟೀ ಬದ್ದರಾಗಬೇಕು ಎಂದು ಹೇಳಿದರು.
ಮುಲ್ಕಿ ಮೂಡಬಿದ್ರೆ ಶಾಸಕ ಕೆ. ಅಭಯಚಂದ್ರ ಜೈನ್ ಹಾಗೂ ಮಂಗಳೂರು ದಕ್ಷಿಣ (ಹಿಂದುಳಿದ ವರ್ಗಗಳು ಮತ್ತು ಅಲ್ಪ ಸಂಖ್ಯಾತರ ಕಮಿಟಿ ಚೆಯರ್‌ಮನ್) ಶಾಸಕ ಜೆ. ಆರ್. ಲೋಬೊ ಶುಭಹಾರೈಸಿದರು.

ಈ ಸಂದರ್ಭ ಶತಮಾನಗಳ ಹಿಂದೆ ಟಿಪ್ಪು ಸುಲ್ತಾನ್ ಚರ್ಚ್ ಮೇಲೆ ದಾಳಿ ನಡೆಸಿದ ಸಂದರ್ಭ ಸ್ಥಳೀಯ ಮೂರು ಬಂಟ ಮನೆತನಗಳು ಚರ್ಚನ್ನು ರಕ್ಷಿಸಿದ ಪ್ರತೀಕವಾಗಿ ಐಕಳಬಾವ, ತಾಳಿಪಾಡಿಗುತ್ತು, ಹಾಗೂ ಏಳಿಂಜೆ ಅಂಗಡಿಗುತ್ತು ಮನೆತನದವರಿಗೆ ಸಂಪ್ರದಾಯದಂತೆ ಅಡಿಕೆ, ವೀಳ್ಯ ಹಾಗೂ ಬಾಳೆಗೊನೆ ನೀಡಲಾಯಿತು. ಐಕಳಬಾವ ರಘುಚಂದ್ರ ಶೆಟ್ಟಿ, ಜಯಪಾಲ ಶೆಟ್ಟಿ, ತಾಳಿಪಾಡಿಗುತ್ತು ದಿನೇಶ್ ಶೆಟ್ಟಿ, ಸುಕುಮಾರ್ ಶೆಟ್ಟಿ, ಹಾಗೂ ಏಳಿಂಜೆ ಅಂಗಡಿಗುತ್ತು ಗುತ್ತಿನಾರ್ ಬಾಲಕೃಷ್ಣ ಶೆಟ್ಟಿ, ಶಂಭು ಶೆಟ್ಟಿ ಗೌರವ ಸ್ವೀಕರಿಸಿದರು.
ಕಿರೆಂ ಚರ್ಚ್ ಪ್ರಧಾನ ಧರ್ಮಗುರು ರೆ.ಫಾ. ವಿಕ್ಟರ್ ಡಿಮೆಲ್ಲೊ ಅವರನ್ನು ಸನ್ಮಾನಿಸಲಾಯಿತು. ಚರ್ಚ್ ನವೀಕರಣದಲ್ಲಿ ಧನ ಸಹಾಯ ನೀಡಿದ ಧಾನಿಗಳನ್ನು, ಗುತ್ತಿಗೆದಾರರನ್ನು ಗೌರವಿಸಲಾಯಿತು.

ರೆ.ಫಾ. ಮರ್ವಿನ್ ನೊರೊನ್ಹಾ, ಭಗಿನಿ ಕ್ರಿಸ್ಟೆಲ್ಲಾ, ಸಹಾಯಕ ಧರ್ಮಗುರು ಫಾ. ಜಯಪ್ರಕಾಶ್ ಡಿಸೋಜ, ಐಕಳ ಗ್ರಾಮ ಪಂಚಾಯಿತಿ ಅಧ್ಯಕ್ಷ ದಿವಾಕರ ಚೌಟ, ಚರ್ಚ್ ಪಾಲನಾ ಮಂಡಳಿ ಉಪಾಧ್ಯಕ್ಷ ಬರ್ಟನ್ ಸಿಕ್ವೇರಾ, ಕಾರ್ಯದರ್ಶಿ ಅನಿತಾ ಡಿ’ಸೋಜ, ಮತ್ತಿತರರು ಉಪಸ್ಥಿತರಿದ್ದರು.

ಕಿರೆಂ ಚರ್ಚ್ ಪ್ರಧಾನ ಧರ್ಮಗುರು ರೆ. ಫಾ. ವಿಕ್ಟರ್ ಡಿಮೆಲ್ಲೊ ಸ್ವಾಗತಿಸಿ ಪ್ರಸಾವನೆಗೈದರು. ಪೊಂಪೈ ಕಾಲೇಜು ಪ್ರಿನ್ಸಿಪಾಲ್ ಡಾ. ಜೋನ್ ಕ್ಲಾರೆನ್ಸ್ ಮಿರಾಂದ ಕಾರ್ಯಕ್ರಮ ನಿರೂಪಿಸಿದರು.

Kinnigoli-20111701 Kinnigoli-20111702 Kinnigoli-20111703 Kinnigoli-20111704 Kinnigoli-20111705

 

Comments

comments

Comments are closed.

Read previous post:
Kinnigoli-19111705
ಕಿನ್ನಿಗೋಳಿ ರಕ್ತದಾನ ಶಿಬಿರ

ಕಿನ್ನಿಗೋಳಿ : ರಕ್ತದಾನದ ಮೂಲಕ ಜೀವ ಉಳಿಸಿ ನಮ್ಮ ಜೀವನದಲ್ಲಿ ಸಾರ್ಥಕತೆ ಧನ್ಯತೆ ಕಂಡುಕೊಳ್ಳಬಹುದು ಎಂದು ಕಿನ್ನಿಗೋಳಿ ವಿಶ್ವಬ್ರಾಹ್ಮಣ ಸಮಾಜ ಸೇವಾ ಸಂಘದ ಕಟ್ಟಡ ಸಮಿತಿಯ ಅಧ್ಯಕ್ಷ ಎಂ....

Close