ಕಟ್ಟಡ ಕಾರ್ಮಿಕರ ನೊಂದಾವಣೆ ಶಿಬಿರ

ಕಿನ್ನಿಗೋಳಿ: ಕಟ್ಟಡ ಕಾರ್ಮಿಕರು ಚಿಂತನಾ ಶೀಲತೆ ಮತ್ತು ಕಾರ್ಯತತ್ಪರತೆಯಿಂದ ದುಡಿದಾಗ ಭವಿಷ್ಯದ ಜೀವನದಲ್ಲಿ ಉತ್ತಮ ನೆಲೆ ಕಂಡುಕೊಳ್ಳಬಹುದು ಎಂದು ಕಿನ್ನಿಗೋಳಿ ಚರ್ಚ್ ಸಹಾಯಕ ಧರ್ಮಗುರು ಫಾ. ಅಶೋಕ್ ರಾಯನ್ ಕ್ರಾಸ್ತಾ ಹೇಳಿದರು.
ಕಿನ್ನಿಗೋಳಿಯ ಸಂಜೀವಿನಿ ಸಮಗ್ರ ಸಮುದಾಯ ಆರೋಗ್ಯ ಕೇಂದ್ರ ಹಾಗೂ ಕನ್ಸೆಟ್ಟಾ ಆಸ್ಪತ್ರೆಯ ಜಂಟೀ ಆಶ್ರಯದಲ್ಲಿ ಭಾನುವಾರ ನಡೆದ ಕಟ್ಟಡ ಕಾರ್ಮಿಕರ ಸೌಲಭ್ಯ ಹಾಗೂ ನೊಂದಾವಣೆ ಶಿಬಿರ ಉದ್ಘಾಟಿಸಿ ಮಾತನಾಡಿದರು.

ಐಕಳ ಗ್ರಾಮ ಪಂಚಾಯಿತಿ ಅಧ್ಯಕ್ಷ ದಿವಾಕರ ಚೌಟ ಮಾತನಾಡಿ ಸರಕಾರದ ಸೌಲಭ್ಯ ಯೋಜನೆಗಳನ್ನು ಕಾರ್ಮಿಕರು ಅರಿತು ಇತರರಿಗೂ ತಿಳಿ ಹೇಳಿ ಅದನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಹೇಳಿದರು.
ಜೀವನಧಾರ ಸಮಾಜ ಸೇವಾ ಪ್ರತಿಷ್ಠಾನದ ದೇವಿಕಾ, ಭಾರತಿ, ಆಶ್ವಿನಿ ಅವರು ಸಂಪನ್ಮೂಲ ವ್ಯಕ್ತಿಗಳಾಗಿ ಮಾಹಿತಿ ನೀಡಿದರು.
ಸಂಜೀವಿನಿ ಸಂಸ್ಥೆಯ ಸಂಚಾಲಕಿ ಭಗಿನಿ ಹೋಪ್ ಪ್ರಸ್ಥಾವನೆಗೈದು ಸ್ವಾಗತಿಸಿದರು. ದಿನೇಶ್ ವಂದಿಸಿದರು. ಆಶಾ ಕಾರ್ಯಕ್ರಮ ನಿರೂಪಿಸಿದರು.

Kinnigoli-20111706

Comments

comments

Comments are closed.

Read previous post:
Kinnigoli-20111701
ಕಿರೆಂ – ನವೀಕೃತ ಚರ್ಚ್ ಲೋಕಾರ್ಪಣೆ

ಕಿನ್ನಿಗೋಳಿ: ಸಮಾಜದಲ್ಲಿ ಸುಖ ಶಾಂತಿ ಮಾನಸಿಕ ನೆಮ್ಮದಿ ನೆಲೆಸಲು ಪ್ರೀತಿ ಮತ್ತು ಭಕ್ತಿಯಿಂದ ಪ್ರಾರ್ಥನೆ ಮಾಡುವ ಪ್ರಾರ್ಥನಾ ಮಂದಿರಗಳ ಬಗ್ಗೆ ಒಲವು ಕಾಳಜಿ ಇರಬೇಕು ಎಂದು ಮಂಗಳೂರು ಧರ್ಮಪ್ರಾಂತ್ಯದ...

Close