ಮೂಲ್ಕಿ ಸೀಮೆ ಅರಸು ಕಂಬಳ

ಪಡುಪಣಂಬೂರು: ಇತಿಹಾಸ ಪ್ರಸಿದ್ಧ ಹಾಗೂ ಸಾಂಪ್ರದಾಯಿಕಕ್ಕೆ ವಿಶೇಷ ಮಹತ್ವ ಇರುವ ಮೂಲ್ಕಿ ಸೀಮೆಯ ಅರಸು ಕಂಬಳಕ್ಕೆ ಸೀಮೆಯ ಜನರು ಸಜ್ಜಾಗಬೇಕು. ಕಳೆದ ವರ್ಷ ನ್ಯಾಯಾಲಯದ ತೀರ್ಮಾನಕ್ಕೆ ಬದ್ಧರಾಗಿ ಸಾಂಪ್ರದಾಯಿಕವಾಗಿ ಮಾತ್ರ ಅಚರಿಸಲಾಗಿತ್ತು. ಕಂಬಳ ನಡೆಯುವ ಕರೆಗಳು, ಸುತ್ತಮುತ್ತಲೂ ಸ್ವಯಂ ಸೇವಕರು ಶ್ರಮದಾನ ನಡೆಸಿ ಕಂಬಳಕ್ಕೆ ಸಜ್ಜಾಗಬೇಕಾಗಿದೆ ಎಂದು ಮೂಲ್ಕಿ ಸೀಮೆಯ ಎಂ.ದುಗ್ಗಣ್ಣ ಸಾವಂತರು ಹೇಳಿದರು.
ಪಡುಪಣಂಬೂರಿನ ಮೂಲ್ಕಿ ಅರಮನೆಯಲ್ಲಿ ನಡೆದ ಕಂಬಳದ ಪೂರ್ವಭಾವಿ ಸಭೆಯಲ್ಲಿ ಅವರು ಮಾರ್ಗದರ್ಶನ ನೀಡಿದರು.
ವಿವಿಧ ಕಾಲೇಜಿನ ಎನ್‌ಎಸ್‌ಎಸ್ ವಿದ್ಯಾರ್ಥಿಗಳು, ಸ್ಥಳೀಯ ಎಲ್ಲಾ ಸಂಘ ಸಂಸ್ಥೆಗಳು, ಸ್ವಯಂ ಸೇವಾ ಸಂಸ್ಥೆ ಹಾಗೂ ಸ್ವಸಹಾಯ ಸಂಘಗಳ ಸದಸ್ಯರ ಸಹಕಾರದಲ್ಲಿ ಶ್ರಮದಾನ ನಡೆಸುವುದು, ಪಡುಪಣಂಬೂರು ಗ್ರಾಮ ಪಂಚಾಯತ್ ಮೂಲಕ ಸ್ವಚ್ಚತೆಯನ್ನು ನಡೆಸಲು ಹಾಗೂ ಕಂಬಳದ ಎಲ್ಲಾ ಪೂರ್ವ ತಯಾರಿಯನ್ನು ಹಿಂದಿನಂತೆಯೇ ಮುಂಬಯಿ ಸಮಿತಿಯ ಮೂಲಕ ನಡೆಸುವುದೆಂದು ಸಭೆಯಲ್ಲಿ ತೀರ್ಮಾನಿಸಲಾಯಿತು.
ಸಭೆಯಲ್ಲಿ ಮೂಲ್ಕಿ ಅರಮನೆಯ ಗೌತಮ್ ಜೈನ್, ಪಡುಪಣಂಬೂರು ಗ್ರಾಮ ಪಂಚಾಯತ್ ಸದಸ್ಯರಾದ ವಿನೋದ್ ಸಾಲ್ಯಾನ್ ಬೆಳ್ಳಾಯರು, ಉಮೇಶ್ ಪೂಜಾರಿ, ಮಾಜಿ ಅಧ್ಯಕ್ಷ ವಸಂತ ಶೇಡಿಕಟ್ಟ, ಕಂಬಳ ಸಮಿತಿಯ ಅಧ್ಯಕ್ಷ ಕೊಲ್ನಾಡುಗುತ್ತು ರಾಮಚಂದ್ರ ನಾಯಕ್, ಕೊಶಾಽಕಾರಿ ವಿಜಯ್ ಶೆಟ್ಟಿ, ಸಹ ಕೋಶಾಽಕಾರಿ ಮನ್ಸೂರ್ ಹೆಚ್., ನ್ಯಾಯವಾದಿ ಚಂದ್ರಶೇಖರ್, ಶ್ಯಾಂಕುಮಾರ್, ಸುಭ್ರತ್ ದೇವಾಡಿಗ, ಕಿರಣ್‌ಕುಮಾರ್, ರಮೇಶ್ ಸುವರ್ಣ, ದಿನೇಶ್ ಸುವರ್ಣ ಮತ್ತಿತರರು ಉಪಸ್ಥಿತರಿದ್ದರು.
ಸಮಿತಿಯ ಪ್ರಧಾನ ಕಾರ್ಯದರ್ಶಿ ನವೀನ್‌ಕುಮಾರ್ ಶೆಟ್ಟಿ ಎಡ್ಮೆಮಾರ್ ಸ್ವಾಗತಿಸಿ, ನಿರೂಪಿಸಿದರು.

Kinnigoli-20111708

Comments

comments

Comments are closed.

Read previous post:
Kinnigoli-20111707
ಮೂಲ್ಕಿ: ಸೌ.ಕೆ.ಫೋ.ಎ. ಪ್ರಕಾಶ್ ಕೊಡ್ಮನ್ ಆಯ್ಕೆ

ಮೂಲ್ಕಿ: ಸೌತ್ ಕೆನರಾ ಫೋಟೋಗ್ರಾಫರ‍್ಸ್ ಎಸೋಸಿಯೇಶನ್ ಮೂಲ್ಕಿ ವಲಯದ 2017-19ನೇ ಸಾಲಿನ ಅಧ್ಯಕ್ಷರಾಗಿ ಪ್ರಕಾಶ್ ಕೊಡ್ಮನ್ ಆಯ್ಕೆಯಾಗಿದ್ದಾರೆ. ಸ್ಥಾಪಕಾಧ್ಯಕ್ಷರು ಸೇಸಪ್ಪ ಸಾಲ್ಯಾನ್ ಉಪಾಧ್ಯಕ್ಷರು ನಾಗೇಶ್ ರಾವ್ ಪ್ರಧಾನ...

Close