ಪದ್ಮನೂರು : ಮನೆ ಮನೆ ಕಾಂಗ್ರೆಸ್ ಬೇಟಿ

ಕಿನ್ನಿಗೋಳಿ: ಸಿದ್ದರಾಮಯ್ಯ ಸರಕಾರದ ಸಾಧನೆ ಯೋಜನೆಗಳು, ಶೈಕ್ಷಣಿಕ ಹಾಗೂ ಪಂಚಾಯಿತಿ ಮಟ್ಟದಲ್ಲಿ ಜನರಿಗೆ ಸಿಗುವ ಸೌಲಭ್ಯ ಯೋಜನೆಗಳನ್ನು ತಳ ಮಟ್ಟದ ಕಾರ್ಯಕರ್ತರು ಮಾಡಬೇಕು ಎಂದು ದ.ಕ. ಜಿಲ್ಲಾ ಯುವ ಕಾಂಗ್ರೇಸ್ ಅಧ್ಯಕ್ಷ ಮಿಥುನ್ ರೈ ಹೇಳಿದರು.
ಕೆಮ್ರಾಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪದ್ಮನೂರು ಮುಲ್ಲಟ್ಟ ಪರಿಸರದಲ್ಲಿ ಮೂಲ್ಕಿ ಬ್ಲಾಕ್ ಕಾಂಗ್ರೇಸ್ ವತಿಯಿಂದ ಕಿನ್ನಿಗೋಳಿ ಪರಿಸರದಲ್ಲಿ ಮನೆ-ಮನೆ ಭೇಟಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮೂಲ್ಕಿ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಧನಂಜಯ ಮಟ್ಟು ಮಾತನಾಡಿ ತಳಮಟ್ಟದ ಕಾರ್ಯಕರ್ತರೆ ನಮ್ಮ ಪಕ್ಷದ ಬೆನ್ನೆಲುಬು. ಪಕ್ಷ ಕಟ್ಟುವ ಹಾಗೂ ಮುಂದಿನ ಚುನಾವಣೆ ಗೆಲ್ಲಿಸುವಲ್ಲಿ ಹೊಣೆಗಾರಿಕೆ ಕಾರ್ಯಕರ್ತರ ಮೇಲಿದೆ ಎಂದು ಹೇಳಿದರು.
ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯೆ ಶೈಲಾ ಸಿಕ್ವೇರ, ಕೆಮ್ರಾಲ್ ಘಟಕದ ಅಧ್ಯಕ್ಷ ಪ್ರವೀಣ್ ಕುಮಾರ್ ಬೊಳ್ಳೂರು, ಕೆಪಿಸಿಸಿ ಸದಸ್ಯ ವಸಂತ್ ಬೆರ್ನಾಡ್, ಅಬ್ದುಲ್ ಹಕೀಂ ಕಾರ್ನಾಡ್, ಗ್ರಾ. ಪಂ. ಮಾಜಿ ಸದಸ್ಯ ಕೆ. ಅಬ್ದುಲ್ ಕಾದರ್, ಮಯ್ಯದ್ದಿ, ದೀಪಕ್ ಕೋಟ್ಯಾನ್, ಸುರೇಶ್ ಪಂಜ, ರೇವತಿ ಶೆಟ್ಟಿಗಾರ್, ಅನಿತಾ ಅರಾಹ್ನ, ಕಿರಣ್ ಬೊಳ್ಳೂರು, ಅಬ್ದುಲ್ ರಜಾಕ್, ಅಶ್ವಿನ್ ಆಳ್ವ, ಪ್ರಾನ್ಸಿಸ್, ಪ್ರಕಾಶ್ ಆಚಾರ್ ಮತ್ತಿತರರು ಉಪಸ್ಥಿತರಿದ್ದರು.

Kinnigoli-24111701

Comments

comments

Comments are closed.

Read previous post:
ಜಿ.ಪಂ. ಮತ್ತು ತಾ.ಪಂ. ಅನುದಾನ: ಶಾಸಕರ ಹಸ್ತಕ್ಷೇಪ.

ಕಿನ್ನಿಗೋಳಿ : ಮುಲ್ಕಿ ಮೂಡಬಿದಿರೆ ಕ್ಷೇತ್ರದ ಬಿಜೆಪಿ ಬೆಂಬಲಿತ ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಸದಸ್ಯರ ಅನುದಾನ ಹಾಗೂ ಕಾಮಗಾರಿಗಳಲ್ಲಿ ಶಾಸಕರು ಹಸ್ತಕ್ಷೇಪ ಮಾಡುತ್ತಿದ್ದು ದಬ್ಬಾಳಿಕೆಯ ಮಾರ್ಗ ಅನುಸರಿಸಿ...

Close