ಯಕ್ಷರಾಧನೆ ಭಕ್ತಿ ಹಾಗೂ ಕಲೆಯ ಸಮ್ಮಿಲನವಾಗಿದೆ

ಕಿನ್ನಿಗೋಳಿ: ಯಕ್ಷರಾಧನೆ ಭಕ್ತಿ ಹಾಗೂ ಕಲೆಯ ಸಮ್ಮಿಲನವಾಗಿದೆ ಇದು ನಿರಂತರವಾಗಿ ನಡೆಯಬೇಕು ಎಂದು ಸಂಸದ ನಳಿನ್ ಕುಮಾರ್ ಕಟೀಲು ಹೇಳಿದರು.
ಕಿನ್ನಿಗೋಳಿ ಬಸ್ ನಿಲ್ದಾಣ ಸಾರ್ವಜನಿಕ ಯಕ್ಷಗಾನ ಬಯಲಾಟ ಸಮಿತಿಯ ಆಶ್ರಯದಲ್ಲಿ ೫೦ ವರ್ಷದ ಬಯಲಾಟದ ಸಂದರ್ಭ ಗುರುವಾರ ನಡೆದ ಧಾರ್ಮಿಕ ಸಭೆಯಲ್ಲಿ ಮಾತನಾಡಿದರು.
ಕಳೆದ ೫೦ ವರ್ಷದಿಂದ ಬಯಲಾಟ ಸಮಿತಿಯನ್ನು ಮುನ್ನಡೆಸಿದ ಶ್ರೀಧರ ಸುವರ್ಣ ಅವರನ್ನು ಸನ್ಮಾನಿಸಲಾಯಿತು.
ಕಟೀಲು ದೇವಳ ಅರ್ಚಕರಾದ ಲಕ್ಷ್ಮೀನಾರಾಯಣ ಆಸ್ರಣ್ಣ, ಹರಿನಾರಾಯಣದಾಸ ಆಸ್ರಣ್ಣ, ಕಟೀಲು ದೇವಳ ಆಡಳಿತ ಮೊಕ್ತೇಸರ ಕೊಡೆತ್ತೂರುಗುತ್ತು ಸನತ್ ಕುಮಾರ್ ಶೆಟ್ಟಿ, ದ.ಕ.ಜಿಲ್ಲಾ ಪಂಚಾಯಿತಿ ಸದಸ್ಯ ವಿನೋದ್ ಕುಮಾರ್ ಬೊಳ್ಳೂರು, ಮಂಗಳೂರು ತಾಲೂಕು ಪಂಚಾಯಿತಿ ಸದಸ್ಯ ದಿವಾಕರ ಕರ್ಕೇರ , ಕಿನ್ನಿಗೋಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಫಿಲೋಮಿನಾ ಸಿಕ್ವೇರಾ, ಕಿನ್ನಿಗೋಳಿ ವಲಯ ಬಸ್ಸು ಮಾಲಕರ ಸಂಘದ ಅಧ್ಯಕ್ಷ ದುರ್ಗಾಪ್ರಸಾದ್ ಹೆಗ್ಡೆ, ಶಂಕರ ಬಿ. ಕೋಟ್ಯಾನ್, ಕೆ. ಬಿ. ಸುರೇಶ್, ಅಶೋಕ ದೇವಾಡಿಗ, ಸಂತೋಷ್, ಸುನಿಲ್ ಭಟ್, ತಾರಾನಾಥ ಶೆಟ್ಟಿ, ಕೇಶವ ಕೋಟ್ಯಾನ್, ಸುಕುಮಾರ್, ಸಂತೋಷ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ಕೆ. ಭುವನಾಭಿರಾಮ ಉಡುಪ ಪ್ರಸ್ತಾವನೆಗೈದು ಸ್ವಾಗತಿಸಿದರು. ಶರತ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Kinnigoli-24111702

Comments

comments

Comments are closed.

Read previous post:
Kinnigoli-24111701
ಪದ್ಮನೂರು : ಮನೆ ಮನೆ ಕಾಂಗ್ರೆಸ್ ಬೇಟಿ

ಕಿನ್ನಿಗೋಳಿ: ಸಿದ್ದರಾಮಯ್ಯ ಸರಕಾರದ ಸಾಧನೆ ಯೋಜನೆಗಳು, ಶೈಕ್ಷಣಿಕ ಹಾಗೂ ಪಂಚಾಯಿತಿ ಮಟ್ಟದಲ್ಲಿ ಜನರಿಗೆ ಸಿಗುವ ಸೌಲಭ್ಯ ಯೋಜನೆಗಳನ್ನು ತಳ ಮಟ್ಟದ ಕಾರ್ಯಕರ್ತರು ಮಾಡಬೇಕು ಎಂದು ದ.ಕ. ಜಿಲ್ಲಾ ಯುವ...

Close