ಅಭಿವೃದ್ದಿಯಲ್ಲಿ ಯಾವುದೇ ರಾಜಕೀಯ ಸಲ್ಲದು

ಕಿನ್ನಿಗೋಳಿ: ಗ್ರಾಮೀಣ ಪ್ರದೇಶದ ರಸ್ತೆಗಳನ್ನು ಹಂತ ಹಂತವಾಗಿ ಕಾಂಕ್ರೀಟೀಕರಣಗೊಳಿಸಲಾಗುದು ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ವಿನೋದ್ ಕುಮಾರ್ ಬೊಳ್ಳೂರು ಹೇಳಿದರು ಹಳೆಯಂಗಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪಾವಂಜೆ ಕೊಳುವೈಲುನಲ್ಲಿ ಜಿಲ್ಲಾ ಪಂಚಾಯಿತಿಯ 4.30 ಲಕ್ಷ ಹಾಗೂ ತಾಲೂಕು ಪಂಚಾಯಿತಿ ನ 1 ಲಕ್ಷ ಅನುದಾನಗಳಿಂದ ಕಾಂಕ್ರೀಟೀಕರಣಗೊಂಡ ರಸ್ತೆ ಲೋಕಾರ್ಪಣಾ ಸಮಾರಂಭದಲ್ಲಿ ಮಾತನಾಡಿದರು, ಮುಂದಿನ ದಿನದಲ್ಲಿ ನೀರು ಮತ್ತು ಇನ್ನಿತರ ಮೂಲಭೂತ ಸೌಕರ್ಯದ ಬಗ್ಗೆ ಗಮನ ನೀಡಲಾಗುವುದು. ಅಭಿವೃದ್ದಿಯಲ್ಲಿ ನಾವು ಯಾವುದೇ ರಾಜಕೀಯ ಮಾಡುವುದಿಲ್ಲ ಜನ ಬುದ್ದಿವಂತರಿದ್ದಾರೆ. ಯಾರ ಅನುದಾನ ಎಲ್ಲೆಲ್ಲಿದೆ ಎಂದು ಜನರಿಗೆ ಗೊತ್ತಾಗುತ್ತದೆ ಎಂದು ಹೇಳಿದರು.
ಸತೀಶ್ ರಾವ್ ರಸ್ತೆಯನ್ನು ಲೋಕಾರ್ಪಣೆಗೊಳಿಸಿದರು.
ಈ ಸಂದರ್ಭ ಮಂಗಳೂರು ತಾಲೂಕು ಪಂಚಾಯಿತಿ ಸದಸ್ಯ ಜೀವನ್ ಪ್ರಕಾಶ್ ಕಾಮರೊಟ್ಟು, ಸತೀಶ್ ಭಟ್ ಕೊಳುವೈಲು, ಭಾಜಪ ಗ್ರಾಮ ಸಮಿತಿ ಅಧ್ಯಕ್ಷ ನರೇಂದ್ರ ಫ್ರಭು ಶಕ್ತಿ ಕೇಂದ್ರದ ಅಧ್ಯಕ್ಷ ಸಂತೋಷ್ ಶೆಟ್ಟಿ, ಗ್ರಾಮ ಪಂಚಾಯತ್ ಸದಸ್ಯರಾದ ಚಿತ್ರಾ ಸುಕೇಶ್, ಸುಗಂಧಿ, ಬೇಬಿ ,ಸುಲೋಚನ, ವಿನೋದ್ ಕೊಳುವೈಲು, ಸುಕೇಶ್ ಪಾವಂಜೆ, ಜಯಂತ್, ಅಶೋಕ್ ಸಸಿಹಿತ್ಲು, ಸ್ಥಳೀಯರಾದ ನಾಗೇಶ್ ಬಂಗೇರ ಲಕ್ಷಣ ದೇವಾಡಿಗ, ಮನೋಜ್ ಕೆಲಸಿಬೆಟ್ಟು, ಯೋಗೀಶ್ ಪಾವಂಜೆ, ರಾಮಚಂದ್ರ ಶಣೈ, ಸುನೀಲ್ ಪಾವಂಜೆ, ಪ್ರೀತಮ್, ನಾಗರಾಜ್ ಹಳೆಯಂಗಡಿ, ಶಿವ ಸುಧಾಕರ್ ಪಾವಂಜೆ, ಅನೀಶ್ ಪಾವಂಜೆ, ಬಾಸ್ಕರ ದೇವಾಡಿಗ ತುಕರಾಮ ಹಳೆಯಂಗಡಿ, ರೈತ ಮೋರ್ಚಾದ ಶೇಖರ ದೇವಾಡಿಗ, ಸುಧೀರ್ ಕುಮಾರ್, ಶರತ್ ಕೊಳುವೈಲು, ಮಿಥುನ್ ಸುವರ್ಣ, ಗಣೇಶ್ ದೇವಾಡಿಗ ಪಾವಂಜೆ ಮತ್ತಿತರರು ಇದ್ದರು.

Kinnigoli-25111705

Comments

comments

Comments are closed.

Read previous post:
Kinnigoli-24111704
ತೋಕೂರು ಶ್ರೀ ಸುಬ್ರಹ್ಮಣ್ಯ ಷಷ್ಠಿ ಮಹೋತ್ಸವ

ಕಿನ್ನಿಗೋಳಿ: ತೋಕೂರು ಶ್ರೀ ಸುಬ್ರಹ್ಮಣ್ಯ ದೇವಳದಲ್ಲಿ ಷಷ್ಠಿ ಮಹೋತ್ಸವದ ಅಂಗವಾಗಿ ಶುಕ್ರವಾರ ಹಗಲು ರಥೋತ್ಸವ ನಡೆಯಿತು.

Close