ಕಿನ್ನಿಗೋಳಿ ಎಂಬ್ರೊಡರಿ ತರಗತಿ ಉದ್ಘಾಟನೆ

ಕಿನ್ನಿಗೋಳಿ: ಮಹಿಳೆಯರಿಗೆ ಕರಕುಶಲತೆಯ ತರಬೇತಿಗಳನ್ನು ನಡೆಸಿ ಆರ್ಥಿಕವಾಗಿ ಸಬಲರನ್ನಾಗಿ ಮಾಡುವ ಸಂಘ ಹಾಗೂ ಸರಕಾರದ ಕಾರ್ಯ ಶ್ಲಾಘನೀಯ ಎಂದು ಯುಗಪುರುಷದ ಕೊಡೆತ್ತೂರು ಭುವನಾಭಿರಾಮ ಉಡುಪ ಹೇಳಿದರು.
ಭಾರತ ಸರಕಾರ ಯುವ ಕಾರ್ಯ ಹಾಗೂ ಕ್ರೀಡಾ ಇಲಾಖೆ, ನೆಹರು ಯುವ ಕೇಂದ್ರ ಮಂಗಳೂರು ಮತ್ತು ಭ್ರಾಮರೀ ಮಹಿಳಾ ಸಮಾಜ (ರಿ.) ಮೆನ್ನಬೆಟ್ಟು – ಕಿನ್ನಿಗೋಳಿ ಇವರ ಸಂಯುಕ್ತ ಆಶ್ರಯದಲ್ಲಿ ಶನಿವಾರ ಭ್ರಾಮರೀ ಮಹಿಳಾ ಸಮಾಜದಲ್ಲಿ ನಡೆದ ಮೂರು ತಿಂಗಳ ಕಾಲ ಜರಗುವ ಎಂಬ್ರೊಡರಿ ತರಗತಿಯನ್ನು ಉದ್ಘಾಟಿಸಿ ಮಾತನಾಡಿದರು.
ಮೆನ್ನಬೆಟ್ಟು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸರೋಜಿನಿ ಎಸ್. ಗುಜರನ್ ವಹಿಸಿದ್ದರು ಅಧ್ಯಕ್ಷತೆ ವಹಿಸಿದ್ದರು.
ಎಂಬ್ರೊಡರಿ ತರಗತಿಯ ತರಬೇತುದಾರರಾದ ಕಿನ್ನಿಗೋಳಿ ಗ್ರಾಮ ಪಂಚಾಯಿತಿ ಸದಸ್ಯೆ ವಾಣಿ ಗುತ್ತಕಾಡು, ಭ್ರಾಮರೀ ಮಹಿಳಾ ಸಮಾಜದ ಗೌರವಾಧ್ಯಕ್ಷೆ ಸಾವಿತ್ರಿ ಶೆಟ್ಟಿ ಉಪಸ್ಥಿತರಿದ್ದರು.
ಅಧ್ಯಕ್ಷೆ ರೇವತಿ ಪುರುಷೋತ್ತಮ್ ಸ್ವಾಗತಿಸಿದರು. ಉಪಾಧ್ಯಕ್ಷೆ ಮೀರಾ ರಾಮಚಂದ್ರ ವಂದಿಸಿದರು. ಕಾರ್ಯದರ್ಶಿ ಅನುಷಾ ಕರ್ಕೇರ ಕಾರ್ಯಕ್ರಮ ನಿರೂಪಿಸಿದರು.

Kinnigoli-25111708

Comments

comments

Comments are closed.

Read previous post:
Kinnigoli-25111707
ಪಾವಂಜೆ : ಚಂಪಾ ಷಷ್ಟಿ ಮಹೋತ್ಸವ

ಕಿನ್ನಿಗೋಳಿ: ಹಳೆಯಂಗಡಿ ಸಮೀಪದ ಪಾವಂಜೆ ಶ್ರೀ ಜ್ಞಾನ ಶಕ್ತಿ ಸುಬ್ರಮಣ್ಯ ಸ್ವಾಮಿ ದೇವಳದಲ್ಲಿ ಚಂಪಾ ಷಷ್ಟಿ ಮಹೋತ್ಸವದ ಅಂಗವಾಗಿ ಶುಕ್ರವಾರ ಮಹಾಪೂಜೆ ಉತ್ಸವ ಬಲಿ, ಪಲ್ಲಪೂಜೆ ಮಹಾಅನ್ನಸಂತರ್ಪಣೆ ನಡೆಯಿತು.

Close