ನ. 29 ರಿಂದ ಡಿ. 6 ಶ್ರೀಮದ್ಭಾಗವತ ಸಪ್ತಾಹ

ಕಿನ್ನಿಗೋಳಿ: ಪುನರೂರು ಶ್ರೀ ವಿಶ್ವನಾಥ ದೇವಳದಲ್ಲಿ ನ. 29 ರಿಂದ ಡಿ. 6 ರತನಕ ಶ್ರೀಮದ್ಭಾಗವತ ಸಪ್ತಾಹ ನಡೆಯಲಿದೆ.
ನ. 29 ರಂದು ಬೆಳಿಗ್ಗೆ ನಾಂದೀ ಸಮಾರಾಧನೆ, ಕಂಕಣ ಬಂಧನ , ಯತ್ವಿಕ್‌ವರಣ, ಭಾಗವತ ಪ್ರತಿಷ್ಠೆ, ಚತುರ್ವೇದ ಪಾರಾಯಣ, ಭಾಗವತ ಪಾರಾಯಣ, ಪ್ರತಿದಿನ ಬೆಳಿಗ್ಗೆ 8.30 ರಿಂದ 10 ರವರಗೆ, 10.30 ರಿಂದ 12 ರತನಕ ಭಾಗವತ ಪ್ರವಚನ, ಮಧ್ಯಾಹ್ನ ಪೂಜೆ, ಸುವಾಸಿನಿ ಆರಾಧನೆ ಅನ್ನ ಸಂತರ್ಪಣೆ, 2.30 ರಿಂದ 6 ರತನಕ ಭಾಗವತ ಪ್ರವಚನ ನಡೆಯಲಿದೆ.
ಡಿ. 6 ರಂದು ಭಾಗವತ ಸಪ್ತಾಹ ಮಂಗಲ, ಬೆಳಿಗ್ಗೆ ಶ್ರೀ ವಿಶ್ವನಾಥ ದೇವರಿಗೆ ಮಹಾರುದ್ರಯಾಗ, ಗೋಪಾಲಕಷ್ಣ ದೇವರಿಗೆ ಪ್ರೀತ್ಯರ್ಥವಾಗಿ ವಿಷ್ಣು ಸಹಸ್ರನಾಮ ಹೋಮ, ಬಳಿಕ ಮಂಗಳ ಪ್ರವಚನ ನಡೆಯಲಿದೆ, ಕಳತ್ತೂರು ಕರುಣಾಕರ ತಂತ್ರಿ ಅವರಿಂದ ಪ್ರತಿದಿನ ಸಂಹಿತಾಕಲಶಾಭಿಷೇಕ ಪುರಸ್ಟರ ವಿಶೇಷ ಪೂಜೆ ನಡೆಯಲಿದೆ ಹಾಗೂ ಉಡುಪಿ ಅನಂತಕೃಷ್ಣಾಚಾರ್ಯ ಪ್ರವಚನ ನಡೆಸಿಕೊಡಲಿರುವರು. ಎಂದು ದೇವಳದ ಆಡಳಿತ ಮೊPಸರ ಪಠೇಲ್ ವೆಂಕಟೇಶ್ ರಾವ್ ತಿಳಿಸಿದ್ದಾರೆ.

Comments

comments

Comments are closed.

Read previous post:
Kinnigoli-25111705
ಅಭಿವೃದ್ದಿಯಲ್ಲಿ ಯಾವುದೇ ರಾಜಕೀಯ ಸಲ್ಲದು

ಕಿನ್ನಿಗೋಳಿ: ಗ್ರಾಮೀಣ ಪ್ರದೇಶದ ರಸ್ತೆಗಳನ್ನು ಹಂತ ಹಂತವಾಗಿ ಕಾಂಕ್ರೀಟೀಕರಣಗೊಳಿಸಲಾಗುದು ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ವಿನೋದ್ ಕುಮಾರ್ ಬೊಳ್ಳೂರು ಹೇಳಿದರು ಹಳೆಯಂಗಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪಾವಂಜೆ ಕೊಳುವೈಲುನಲ್ಲಿ...

Close