ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ ಕಾರ್ಯಕ್ರಮ

ಮೂಲ್ಕಿ: ಪ್ರಪಂಚದ ಬಗ್ಗೆ ಜ್ಞಾನ ಬೆಳೆಸಿಕೊಳ್ಳಬೇಕಾದರೆ ಓದುವುದು ಅತೀ ಅಗತ್ಯವಾಗಿದ್ದು ಮಕ್ಕಳು ಓದುವ ಪರಿಪಾಠವನ್ನು ಹಾಗೂ ಶಾಲೆಯ ಸಂಚಿಕೆಗಳಲ್ಲಿ ಬರೆಯುವ ಹವ್ಯಾಸವನ್ನು ಬೆಳೆಸಿಕೊಳ್ಳಬೇಕು. ಸರ್ಕಾರವು ಮಕ್ಳಳ ಜ್ಞಾಣ ಭಂಡಾರ ಹೆಚ್ಚಿಸುವ ನಿಟ್ಟಿನಲ್ಲಿ ಶಾಲೆಗಳಲ್ಲಿ ಗ್ರಂಥಾಲಯಗಳನ್ನು ಹಾಗೂ ಪ್ರತಿ ಗ್ರಾಮಗಳಲ್ಲಿ ಸಾರ್ವಜನಿಕ ಗ್ರಂಥಾಲಯಗಳನ್ನು ಆರಂಭಿಸಿದೆಯೆಂದು ಶ್ರವಣಬೆಳಗೊಳ ಮಹಾಮಸ್ತಕಾಭಿಷೇಕ ಉತ್ಸವ ರಾಜ್ಯ ಸಮಿತಿ ಸಹ ಅಧ್ಯಕ್ಷ ,ಶಾಸಕ ಕೆ ಅಭಯಚಂದ್ರ ಜ್ಯೆನ್ ಹೇಳಿದರು.
ಸಾರ್ವಜನಿಕ ಗ್ರಂಥಾಲಯ ಇಲಾಖೆ, ದ.ಕ ಜಿಲ್ಲಾ ಕೇಂದ್ರ ಗ್ರಂಥಾಲಯ ಮತ್ತು ಮೂಲ್ಕಿ ಶಾಖಾ ಗ್ರಂಥಾಲಯ ವತಿಯಿಂದ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹದ ಅಂಗವಾಗಿ ಶನಿವಾರ ಮೂಲ್ಕಿ ಬಿಲ್ಲವ ಸಮಾಜ ಸೇವಾ ಸಂಘದ ಸಭಾಂಗಣದಲ್ಲಿ ನಡೆದ *ಪುಸ್ತಕ ಜ್ಞಾನದ ಜ್ಯೋತಿಯೆಡೆಗೆ ನಮ್ಮ ನಡಿಗೆ * ಸಭಾ ಕಾರ್ಯಕ್ರಮವನ್ನು ಹಾಗೂ ಪುಸ್ತಕ ಪ್ರದರ್ಶನ ಉದ್ಘಾಟನೆ ಮಾಡಿ ಮಾತನಾಡಿದ ಅವರು ಮೂಲ್ಕಿಯಲ್ಲಿ ಸಾರ್ವಜನಿಕ ಗ್ರಂಥಾಲಯಕ್ಕೆ ಸೂಕ್ತ ಜಾಗಕ್ಕಾಗಿ ಈಗಾಗಲೇ ಪ್ರಸ್ತಾವನೆ ಸಲ್ಲಿಸಲಾಗಿದ್ದು ಮುಂದಿನ ದಿನಗಳಲ್ಲಿ ಮೂಲ್ಕಿ ಪೂರ್ಣ ಪ್ರಮಾಣದ ಸುಸಜ್ಜಿತ ಗ್ರಂಥಾಲಯ ಸಾರ್ವಜನಿಕರಿಗೆ ದೊರೆಯಲಿದೆ.
ರಾಜ್ಯ ಸರ್ಕಾರವು ಗ್ರಂಥಪಾಲಕರಿಗೆ ಮಾಸಿಕ ವೇತನವನ್ನು ರೂ 5000 ದಿಂದ 7000 ಕ್ಕೆ ಹೆಚ್ಚಿಸಿದ್ದು ಗ್ರಂಥ ಪಾಲಕರಿಗೆ ಸೂಕ್ತ ವೇತನ ದೊರೆಯಲು ಪ್ರಯತ್ನಿಸುವುದಾಗಿ ತಿಳಿಸಿದರು. ಮೂಲ್ಕಿ ನಗರ ಪಂಚಾಯತ್ ಅಧ್ಯಕ್ಷ ಸುನೀಲ್ ಆಳ್ವ ಅಧ್ಯಕ್ಷತೆ ವಹಿಸಿದರು.
ಮೂಲ್ಕಿಯ ಸಾರ್ವಜನಿಕ ಗ್ರಂಥಾಲಯಕ್ಕೆ ಹಲವಾರು ವರ್ಷಗಳಿಂದ ಸ್ಥಳವಕಾಶ ನೀಡಿರುವ ಮೂಲ್ಕಿ ಬಿಲ್ಲವ ಸಂಘದ ಪರವಾಗಿ ಅಧ್ಯಕ್ಷ ಗೋಪಿನಾಥ ಪಡಂಗರನ್ನು ಸನ್ಮಾನಿಸಲಾಯಿತು.
ಗ್ರಂಥಪಾಲಕರಿಗೆ ಉತ್ತಮ ಸೇವೆ ನೀಡುತ್ತಿರುವ ಹಳೆಯಂಗಡಿ ಸಾರ್ವಜನಿಕ ಗ್ರಂಥಾಲಯದ ಗ್ರಂಥಪಾಲಕಿ ನಳಿನಿ ಡಿ ಶೆಣ್ಯೆ, ಕಡೇಶ್ವಾಲ್ಯದ ಗ್ರಂಥಪಾಲಕಿ ಯೋಗಿತಾ, ಇರಾದ ಗ್ರಂಥಪಾಲಕಿ ನಳಿನಾಕ್ಷಿ, ಅಡ್ಯಾರುವಿನ ಮಲ್ಲಿಕಾ ಹಾಗೂ ಅಳಿಕೆಯ ಗ್ರಂಥಪಾಲಕಿ ಉಷಾರನ್ನು ಗೌರವಿಸಲಾಯಿತು. ಮೂಲ್ಕಿ ನಗರ ಪಂಚಾಯತ್ .ಉಪಾಧ್ಯಕ್ಷೆ ರಾಧಿಕಾ ಯಾಧವ ಕೋಟ್ಯಾನ್, ಮುಖ್ಯಾಧಿಕಾರಿ ಇಂದು, ಸಾಹಿತಿಗಳಾದ ಶಕುಂತಳಾಭಟ್, ಹರಿಶ್ಚಂದ್ರ ಪಿ.ಸಾಲ್ಯಾನ್ ಮೂಲ್ಕಿ , ಸಾರ್ವಜನಿಕ ಗ್ರಂಥಾಲಯದ ಸಮಿತಿ ಉಪಾಧ್ಯಕ್ಷ ಬಾಹುಬಲಿ ಪ್ರಸಾದ್ ಮತ್ತಿತರರು ಉಪಸ್ಥಿತರಿದ್ದರು.
ಸಭಾ ಕಾರ್ಯಕ್ರಮಕ್ಕೆ ಮೊದಲು ಮೂಲ್ಕಿಯ ಕಾರ್ನಾಡಿನ ಗಾಂಧಿ ಮೈದಾನದಿಂದ ಹೊರಟು ಕಾರ್ನಾಡು ಸದಾಶಿವ ರಾವ್ ವೃತ್ತದ ಮೂಲಕ ಬಿಲ್ಲವ ಸಮಾಜ ಸೇವಾ ಸಂಘದವರೆಗೆ ಬಂದ ಜಾಥಾವನ್ನು ಶಾಸಕ ಕೆ ಅಭಯಚಂದ್ರ ಜ್ಯೆನ್ ಗಾಂಧಿ ಮ್ಯೆದಾನದಲ್ಲಿ ಉದ್ಘಾಟಿಸಿದರು. ಹೆಚ್ಚಿನ ಶಾಲೆಯ ಮಕ್ಕಳು ಜಾಥಾದಲ್ಲಿ ಭಾಗವಹಿಸಿದ್ದರು.
ಕೇಂದ್ರ ಗ್ರಂಥಾಲಯದ ಪ್ರಭಾರ ಮುಖ್ಯ ಗ್ರಂಥಾಲಯಾಧಿಕಾರಿ ಸವಿತಾ ಸ್ವಾಗತಿಸಿದರು, ಮೂಲ್ಕಿ ಶಾಖಾ ಗ್ರಂಥಾಲಯದ ಸಹವರ್ತಿ ಹರೀಶ್ ಸುವರ್ಣ ವಂದಿಸಿದರು, ನಮಿತಾ ನಿರೂಪಿಸಿದರು.

Mulki-24111701 Mulki-24111702

Comments

comments

Comments are closed.