ಕೆರೆಕಾಡು ಇಂಟರ್‌ಲಾಕ್ ಉದ್ಘಾಟನೆ

ಕಿನ್ನಿಗೋಳಿ : ಕಿಲ್ಪಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆರೆಕಾಡು ಗಣೇಶ್ ಕಟ್ಟೆಯ ವಠಾರದಲ್ಲಿ ಗ್ರಾಮ ಪಂಚಾಯತ್ ಅನುದಾನದಲ್ಲಿ ಆಳವಡಿಸಿದ ಇಂಟರ್‌ಲಾಕ್ ರಸ್ತೆಯನ್ನು ದ.ಕ. ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಕಸ್ತೂರಿ ಪಂಜ ಭಾನುವಾರ ಉದ್ಘಾಟಿಸಿದರು. ಈ ಸಂದರ್ಭ ರಾಮಕೃಷ್ಣ ಮಿಷನ್ ಅವರ ಸಹಭಾಗಿತ್ವದಲ್ಲಿ ನಡೆದ ಸ್ವಚ್ಚ ಭಾರತ್ ಅಭಿಯಾನಕ್ಕೆ ದ.ಕ. ಜಿಲ್ಲಾ ಪಂಚಾಯಿತಿ ಸದಸ್ಯ ವಿನೋದ್ ಕುಮಾರ್ ಬೊಳ್ಳೂರು ಚಾಲನೆ ನೀಡಿದರು. ಗ್ರಾಮ ಪಂಚಾಯಿತಿ ಅಧ್ಯಕ್ಷ ಶ್ರೀಕಾಂತ್ ರಾವ್ ಅಧ್ಯಕ್ಷತೆ ವಹಿಸಿದ್ದರು. ಮಂಗಳೂರು ತಾಲೂಕು ಪಂಚಾಯಿತಿ ಸದಸ್ಯ ಶರತ್ ಕುಬೆವೂರು, ಗ್ರಾಮ ಪಂಚಾಯಿತಿ ಸದಸ್ಯರಾದ ಸುನೀತಾ ಆಚಾರ್ಯ, ದಮಯಂತಿ ಶೆಟ್ಟಿಗಾರ್, ನಾಗರಾಜ ಕುಲಾಲ್, ಅಬ್ದುಲ್ ಶರೀಫ್, ಜಿ. ಪಂ. ಮಾಜಿ ಸದಸ್ಯ ಈಶ್ವರ್ ಕಟೀಲು, ದಿನೇಶ್ ಶೆಟ್ಟಿ , ಭಾಸ್ಕರ ಶೆಟ್ಟಿಗಾರ್, ಚೇತನ್ ಕೆರೆಕಾಡು ಮತ್ತಿತರರು ಉಪಸ್ಥಿತರಿದ್ದರು.
Kinnigoli-27111706

Comments

comments

Comments are closed.

Read previous post:
Kinnigoli-27111705
ಮೆನ್ನಬೆಟ್ಟು ಸ್ವಚ್ಚ ಭಾರತ್ ಅಭಿಯಾನ

ಕಿನ್ನಿಗೋಳಿ : ಮಂಗಳೂರು ರಾಮಕೃಷ್ಣ ಮಿಷನ್ , ದ. ಕ. ಜಿಲ್ಲಾ ಪಂಚಾಯಿತಿ, ಮೆನ್ನಬೆಟ್ಟು ಗ್ರಾಮ ಪಂಚಾಯಿತಿ ಸಹಯೋಗದಲ್ಲಿ ಸ್ವಚ್ಚ ಭಾರತ್ ಅಭಿಯಾನ ಕಾರ್ಯಕ್ರಮ ಮೆನ್ನಬೆಟ್ಟು ಗ್ರಾಮ ಪಂಚಾಯಿತಿ...

Close