ಕಿನ್ನಿಗೋಳಿ: ಪ್ರಾಥಮಿಕ ಶಿಕ್ಷಣ ಭವಿಷ್ಯದ ಮೆಟ್ಟಿಲು. ನೈತಿಕ ಮತ್ತು ಮಾನವೀಯ ಮೌಲ್ಯಯುತವಾದ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಬೇಕು ಎಂದು ಶಿಮಂತೂರು ಶ್ರೀ ಶಾರದಾ ಸೊಸೈಟಿ ಅಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು ಹೇಳಿದರು. ಶಿಮಂತೂರು ಶ್ರೀ ಶಾರದಾ ಮೋಡಲ್ ಸೆಕೆಂಡರಿ ಸ್ಕೂಲ್, ಅನುದಾನಿತ ಶ್ರೀ ಶಾರದಾ ಹಿರಿಯ ಪ್ರಾಥಮಿಕ ಶಾಲೆ, ಶಿಮಂತೂರು ಮತ್ತು ಅಂಗನವಾಡಿ ಕೇಂದ್ರ ಶಿಮಂತೂರು ಸಂಸ್ಥೆಗಳ ವಾರ್ಷಿಕೋತ್ಸವದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಈ ಸಂದರ್ಭ ಕರಾಟೆಯಲ್ಲಿ ಸಾಧನೆಗೈದ ಶಾಲಾ ವಿದ್ಯಾರ್ಥಿಗಳಾದ ಸಂಹಿತ್ ನಾಯರ್ ಹಾಗೂ ಮಾನಿಷ್ ಕುಲಾಲ್ ಅವರನ್ನು ಸನ್ಮಾನಿಸಲಾಯಿತು.
ದ.ಕ. ಜಿಲ್ಲಾ ಪಂಚಾಯಿತಿ ಸದಸ್ಯ ವಿನೋದ್ಕುಮಾರ್ ಬೊಳ್ಳೂರು, ಮಂಗಳೂರು. ತಾಲೂಕು ಪಂಚಾಯಿತಿ ಸದಸ್ಯ ದಿವಾಕರ ಕರ್ಕೇರಾ, ಶಾಲಾ ಸಮಿತಿಯ ಕಾರ್ಯದರ್ಶಿ ಧರ್ಮಾನಂದ ಕೆ. ಕುಂದರ್, ಕೋಶಾಧಿಕಾರಿ ಕೆ. ಭುವನಾಭಿರಾಮ ಉಡುಪ, ಸಮಿತಿಯ ಕರುಣಾಕರ ಆಳ್ವ , ಪುಷ್ಪರಾಜ್, ವಿದ್ಯಾರ್ಥಿ ನಾಯಕ ಕೀರ್ತನ್ ಆರ್ ಕೋಟ್ಯಾನ್, ವಿದ್ಯಾರ್ಥಿ ನಾಯಕಿ ಸ್ವರ್ಣ ಉಪಸ್ಥಿತರಿದ್ದರು.
ಆಂಗ್ಲಮಾಧ್ಯಮ ಶಾಲೆಯ ಮುಖ್ಯ ಶಿಕ್ಷಕಿ ಗೀತಾ ಎಸ್. ಎಮ್ ಸ್ವಾಗತಿಸಿದರು. ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕ ಎಂ. ಜಿ. ಶಿವರುದ್ರಪ್ಪ, ಅಂಗನವಾಡಿ ಕಾರ್ಯಕರ್ತೆ ಜೂಲಿಯಾನ ವರದಿ ವಾಚಿಸಿದರು.