ತೋಕೂರು : ಸ್ಪೋರ್ಟ್ಸ್ ಕ್ಲಬ್ ವಾರ್ಷಿಕೋತ್ಸವ

ಕಿನ್ನಿಗೋಳಿ: ಷಷ್ಠಿ ಮಹೋತ್ಸವದ ಅಂಗವಾಗಿ ಶ್ರೀ ಸುಬ್ರಮಣ್ಯ ಮಹಾಗಣಪತಿ ಸ್ಪೋರ್ಟ್ಸ್ ಕ್ಲಬ್ ತೋಕೂರು ಇದರ 21 ನೇ ವರ್ಷದ ಸಾಂಸ್ಕ್ರತಿಕ ಕಾರ್ಯಕ್ರಮದಲ್ಲಿ ಜಿಲ್ಲಾ ರಾಜೋತ್ಸವ ಪ್ರಶಸ್ತಿ ಪುರಸ್ಕೃತ ಏಳಿಂಜೆ ಕೃಷ್ಣ ಸಾಲಿಯಾನ್ ಅವರನ್ನು ಸನ್ಮಾನಿಸಲಾಯಿತು. ಈ ಸಂದರ್ಭ ಎಸ್.ಎಸ್.ಎಲ್.ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಶೇಕಡ 90 ಕ್ಕಿಂತ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಾದ ವೈಶಾಲಿ, ಶಿಬಾ, ಸುಶ್ಮಿತಾ ಬೇಕಲ್, ರಿತಿಕಾ ಎಚ್ ಪೂಜಾರಿ, ನಿಧಿ ವಿ ಅಂಚನ್, ಸೌಂದರ್ಯ ಎಸ್ ಅಮೀನ್ ಇವರನ್ನು ಪ್ರತಿಭಾ ಪುರಸ್ಕರ ನೀಡಿ ಗೌರವಿಸಲಾಯಿತು.
ಶಶಿಧರ್ ಮತ್ತು ಕಾರ್ತಿಕ್ ಕೋಟ್ಯಾನ್ ಅವರಿಗೆ ವೈದ್ಯಕೀಯ ಚಿಕಿತ್ಸೆಗೆ ನೆರವು ನೀಡಲಾಯಿತು.
2016-17 ಸಾಲಿನ ಗಾಂಧಿ ಗ್ರಾಮ ಪುರಸ್ಕಾರ ಪಡೆದ ಪಡು ಪಣಂಬೂರು ಗ್ರಾಮ ಪಂಚಾಯತ್ ನ ಅಧ್ಯಕ್ಷ ಮೋಹನ್ ದಾಸ್, ಪಂಚಾಯತ್ ಸದಸ್ಯರು ಮತ್ತು ಸಿಬ್ಬಂದಿ ವರ್ಗದವರನ್ನು ಸನ್ಮಾನಿಸಲಾಯಿತು.
ಉದ್ಯಮಿಗಳಾದ ರಾಮಣ್ಣ ದೇವಾಡಿಗ ಮುಂಬೈ, ನಿರ್ಮಲ ರಾಮಣ್ಣ ದೇವಾಡಿಗ, ಹರಿಪ್ರಸಾದ್ ಶೆಟ್ಟಿ , ರಹಮತುಲ್ಲ, ಯೋಗೀಶ್ ಕೋಟ್ಯಾನ್, ಸಂಘದ ಅಧ್ಯಕ್ಷ ರತನ್ ಶೆಟ್ಟಿ, ಕಾರ್ಯದರ್ಶಿ ಪದ್ಮನಾಭ ಶೆಟ್ಟಿ, ಜೊತೆ ಕಾರ್ಯದರ್ಶಿ ದೀಪಕ್ ಸುವರ್ಣ, ಕೋಶಾಧಿಕಾರಿ ಪ್ರಶಾಂತ್ ಕುಮಾರ್ ಬೇಕಲ್ ಮತ್ತು ಸಂಘದ ಸದಸ್ಯರು ಉಪಸ್ಥಿತರಿದದರು.

Kinnigoli-27111702

Comments

comments

Comments are closed.

Read previous post:
Kinnigoli-27111701
ಶಿಮಂತೂರು : ಶಾಲಾ ವಾರ್ಷಿಕೋತ್ಸವ

ಕಿನ್ನಿಗೋಳಿ: ಪ್ರಾಥಮಿಕ ಶಿಕ್ಷಣ ಭವಿಷ್ಯದ ಮೆಟ್ಟಿಲು. ನೈತಿಕ ಮತ್ತು ಮಾನವೀಯ ಮೌಲ್ಯಯುತವಾದ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಬೇಕು ಎಂದು ಶಿಮಂತೂರು ಶ್ರೀ ಶಾರದಾ ಸೊಸೈಟಿ ಅಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ...

Close