ಮೂಲ್ಕಿ: ರೋಟರಿ ದತ್ತಿ ನಿಧಿ

ಮೂಲ್ಕಿ: ಕೌಟುಂಬಿಕ ಸಾಮರಸ್ಯ ಹಾಗೂ ದೀನ ವರ್ಗದ ಸೇವೆ ರೋಟರಿಯ ಬಹು ಮುಖ್ಯ ಧ್ಯೇಯವಾಗಿದೆ ಎಂದು ರೋಟರಿ ಜಿಲ್ಲೆ 3181 ಗವರ್ನರ್ ಎಂ.ಎಂ.ಸುರೇಶ್ ಚೆಂಗಪ್ಪ ಹೇಳಿದರು.
ಮೂಲ್ಕಿ ರೋಟರಿಗೆ ತಮ್ಮ ಅಧೀಕೃತ ಭೇಟಿಯ ಸಂದರ್ಭ ರೋಟರಿ ಶತಾಬ್ಧಿ ಭವನದಲ್ಲಿ ನಡೆದ ಸಾರ್ವಜನಿಕ ಸಭಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಅಂತರಾಷ್ಟ್ರೀಯ ರೋಟರಿ ಸಂಸ್ಥೆಯು ತನ್ನ ಸೇವಾ ಫೌಂಡೇಶನ್ ಮೂಲಕವಾಗಿ ವಿಶ್ವದ ದೀನ ವರ್ಗದ ಸೇವೆ ಸಲ್ಲಿಸುವ ಮೂಲಕ ವಿಶ್ವ ಮನ್ನಣೆಯನ್ನು ಗಳಿಸಿದೆ ಪ್ರಪಂಚದಲ್ಲಿಯೇ ಪೋಲೀಯೋ ಮುಕ್ತ ಗೊಳಿಸಲು ವಾರ್ಷಿಕ 2 ಬಿಲಿಯ ಡಾಲರಿಗೂ ಅಧಿಕ ಹಣ ವ್ಯಯಿಸುವ ಮೂಲಕ ಯಶಸ್ಸು ಸಾಧಿಸಿದೆ. ಪ್ರಕೃತಿ ರಕ್ಷಣೆ ಆರೋಗ್ಯ ಶಿಕ್ಷಣ ಕ್ಷೇತ್ರದಲ್ಲಿ ಅಪಾರ ಸೇವೆ ನೀಡಿದ ಕಾರ್ಯಗಳಿಗಾಗಿ ರೋಟರಿ ವಿಶ್ವ ಮಾನ್ಯವಾಗಲು ಸಾಧ್ಯವಾಗಿದೆ. ಈ ಕಾರ್ಯಗಳನ್ನು ನಡೆಸಲು ಸದಸ್ಯರು ಟಿ.ಆರ್.ಎಫ್(ರೋಟರಿ ದತ್ತಿ ನಿಧಿ) ಯೋಜನೆಯ ಮೂಲಕ ನೀಡುವ ಹಣವನ್ನು ಸಮರ್ಪಕವಾಗಿ ಉಪಯೋಗಿಸಿದೆ ಎಂದರು.
ಈ ಸಂದರ್ಭ ರೋಟರೀ ದತ್ತಿ ನಿಧಿಗೆ ಗವರ್ನರ್ ಮೂಲಕ ರೂ ೨ಲಕ್ಷ ಹಣವನ್ನು ಮೂಲ್ಕಿ ರೋಟರಿಯ ವತಿಯಿಂದ ನೀಡಲಾಯಿತು.
ಸಹಾಯಕ ಗವರ್ನರ್ ಜೊಸ್ಸಿ ಪಿಂಟೋ ಮತ್ತು ಜೋನಲ್ ಲೆಪ್ಟಿನೆಂಟ್ ಬಾಲಚಂದ್ರ ಸನಿಲ್ ಶುಭ ಹಾರೈಸಿದರು.
ರೈಮಂಡ್ ರೆಬೆಲ್ಲೋ ಸ್ವಾಗತಿಸಿದರು. ಕಾರ್ಯದರ್ಶಿ ಜೋಯಲ್ ಹೆರಾಲ್ಡ್ ಡಿಸೋಜ ವರದಿ ಮಂಡಿಸಿದರು, ಅಶೋಕ್ ಕುಮಾರ್ ಶೆಟ್ಟಿ ಮತ್ತು ವೈ.ಎನ್.ಸಾಲ್ಯಾನ್ ನಿರೂಪಿಸಿದರು. ಪ್ರೊ ವಿಷ್ಣುಮೂರ್ತಿ ವಂದಿಸಿದರು.

Kinnigoli-28111705

Comments

comments

Comments are closed.