ಪೊಂಪೈ: ರಾ.ಸೇ.ಯೋ. ವಾರ್ಷಿಕ ವಿಶೇಷ ಶಿಬಿರ

ಕಿನ್ನಿಗೋಳಿ: ಐಕಳ ಪೊಂಪೈ ಕಾಲೇಜು ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರ ಇತ್ತೀಚೆಗೆ ದ.ಕ. ಜಿ.ಪಂ. ಮಾ.ಸ.ಹಿ.ಪ್ರಾ. ಶಾಲೆ, ಕಡಂದಲೆ ಮೈನ್ ನಲ್ಲಿ ನಡೆಯಿತು. ಉದ್ಘಾಟನೆ:
ದ.ಕ.ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯ ಸುಚರಿತ ಶೆಟ್ಟಿ ಶಿಬಿರ ಉದ್ಘಾಟಿಸಿ ವಿದ್ಯಾರ್ಥಿಗಳು ಎನ್.ಎಸ್.ಎಸ್. ಶಿಬಿರದ ಮುಖಾಂತರ ವ್ಯಕ್ತಿತ್ವ ವಿಕಸನ ಮಾಡಿಕೊಂಡು ನಾಯಕತ್ವ ಗುಣಗಳನ್ನು ಬೆಳೆಸಬೇಕು ಎಂದರು.
ಪ್ರಿನ್ಸಿಪಾಲ್ ಡಾ. ಜೋನ್ ಕ್ಲಾರೆನ್ಸ್ ಮಿರಾಂದ ಅಧ್ಯಕ್ಷತೆ ವಹಿಸಿ ಮಾತನಾಡಿ ವಿದ್ಯಾರ್ಥಿಗಳಲ್ಲಿ ಸೇವಾ ಮನೋಬಾವನೆಯ ಕೆಲಸಗಳಲ್ಲಿ ಆಸಕ್ತಿ ಮೂಡಿದಾಗ ಸಮಾಜದ ಅಭಿವೃದ್ದಿ ಸಾಧ್ಯ ಎಂದರು.
ಪಾಲಡ್ಕ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸವಿತ ಸುರೇಶ್ ಪೂಜಾರಿ, ಉಪಾಧ್ಯಕ್ಷ ಲೀಲಾಧರ್ ಪೂಜಾರಿ, ಕಡಂದಲೆ ಶಾಲಾ ಮುಖ್ಯ ಶಿಕ್ಷಕಿ ಲೀಡಿಯ ಸೆರಾವೊ, ಪಾಲಡ್ಕ ಪ್ರಾಥಮಿಕ ಆರೋಗ್ಯಕೇಂದ್ರದ ವೈದ್ಯಾಧಿಕಾರಿ ಡಾ.ಮನೀಷಾ ಸಿಕ್ವೇರ
ಗ್ರಾಮಪಂಚಾಯಿತಿ ಸದಸ್ಯರು ಉಪಸ್ಥಿತರಿದ್ದರು.
ಏಳು ದಿನಗಳ ತನಕ ನಡೆದ ಶಿಬಿರದಲ್ಲಿ ಶಾಲಾ ಆವರಣ ಶುಚಿತ್ವ, ಕೈತೋಟನಿರ್ಮಾಣ, ರಸ್ತೆ ದುರಸ್ತಿ, ಪಾಲಡ್ಕ ಸಾಂಪ್ರದಾಯಿಕ ನೀರಾವರಿಕಾಲುವೆಯ ಹೂಳೆತ್ತುವಿಕೆ, ಶ್ರೀ ಸುಬ್ರಹ್ಮಣ್ಯದೇವಸ್ಥಾನದ ಪರಿಸರದ ಶುಚಿತ್ವ; ಆರೋಗ್ಯ ಮಾಹಿತಿ, ಕೃಷಿ ಬದುಕು, ನೀರಿನ ಸಂರಕ್ಷಣೆ, ರಾಷ್ಟ್ರೀಯ ಭಾವೈಕ್ಯದಂತಹ ಚಟುವಟಿಕೆಗಳಿಗೆ ಆದ್ಯತೆಯನ್ನು ನೀಡಲಾಯಿತು.
ಶಿಬಿರದಲ್ಲಿ ನುರಿತ ತಜ್ಞರಿಂದ ವಿವಿಧ ಉಪನ್ಯಾಸ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಯಿತು.
ಶಿಬಿರದ ಸಮಾರೋಪ ಸಮಾರಂಭದಲ್ಲಿ ಮೂಡಬಿದ್ರೆ ರೋಟರಿ ಕ್ಲಬ್ ಅಧ್ಯಕ್ಷ ಶ್ರೀಕಾಂತ್ ಕಾಮತ್, ಪೊಂಪೈ ಕಾಲೇಜು ಕಛೇರಿ ಮೆನೇಜರ್ ರೋಕಿ ಜಿ. ಲೋಬೊ, ಶಿಬಿರಾಧಿಕಾರಿ ಡಾ.ವಿಕ್ಟರ್ ವಾಜ್ ಇ, ಸಿಲ್ವಿಯ ಪಾಯ್ಸ್, ಯೋಗೀಂದ್ರ ಬಿ., ವಿನಯ್ ಸಿಕ್ವೇರಾ, ಘಟಕದ ನಾಯಕರಾದ ವಿಶಾಲ್ ಬಿ. ಕುಲಾಲ್ ಹಾಗು ನಾಯಕಿ ವರ್ಷಿಣಿ ಉಪಸ್ಥಿತರಿದ್ದರು.

Kinnigoli-28111702Kinnigoli-28111703 Kinnigoli-28111704

Comments

comments

Comments are closed.

Read previous post:
Kinnigoli-28111701
ಉಳೆಪಾಡಿ : ಬಾಲಾಲಯ ಪ್ರತಿಷ್ಠಾಪನೆ

ಕಿನ್ನಿಗೋಳಿ : ಉಳೆಪಾಡಿ ಶ್ರೀ ಉಮಾಮಹೇಶ್ವರಿ ಮಹಾಗಣಪತಿ ದೇವಳದ ಜೀರ್ಣೋದ್ಧಾರ ಹಾಗೂ ಬ್ರಹ್ಮಕಲಶೋತ್ಸವದ ಪ್ರಯುಕ್ತ ಇತ್ತೀಚೆಗೆ ಶ್ರೀ ದೇವರನ್ನು ಬಾಲಾಲಯದಲ್ಲಿ ಪ್ರತಿಷ್ಠಾಪಿಸಲಾಯಿತು. ಈ ಸಂದರ್ಭ ಜೀರ್ಣೋದ್ಧಾರ ಸಮಿತಿಯ ಸದಸ್ಯರು...

Close