ಕಿನ್ನಿಗೋಳಿ ಮಹಿಳಾ ಹಕ್ಕುಗಳ ಗ್ರಾಮಸಭೆ

ಕಿನ್ನಿಗೋಳಿ: ಕಿನ್ನಿಗೋಳಿ ಗ್ರಾಮ ಪಂಚಾಯಿತಿಯ ಸಭಾಭವನದಲ್ಲಿ ಮಹಿಳಾ ಹಕ್ಕುಗಳ ಗ್ರಾಮ ಸಭೆ ಸೋಮವಾರ ಕಿನ್ನಿಗೋಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಫಿಲೋಮಿನ ಸಿಕ್ವೇರಾ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ದ. ಕ ಜಿಲ್ಲೆಗೆ ಮೊದಲಿನಂತೆ ಗರ್ಭಿಣಿಯರಿಗೆ ಬೆಳೆಕಾಳು ನೀಡುವ ವ್ಯವಸ್ಥೆಯೇ ಸರಿಯಾಗಿದೆ. ಇದೀಗ ಗರ್ಬಿಣಿಯರಿಗೆ ಅಂಗನವಾಡಿಯಲ್ಲಿ ಊಟದ ವ್ಯವಸ್ಥೆ ಮಾಡಿದ ಯೋಜನೆ ಸರಿಯಲ್ಲ ಇದರಿಂದ ಗ್ರಾಮೀಣ ಪರಿಸರದ ಬಡ ವರ್ಗಕ್ಕೆ ಅನ್ಯಾಯ ಆಗಿದೆ ಎಂದು ಅನಿತಾ ಪಿಂಟೋ ಹೇಳಿದರು ಅದಕ್ಕೆ ಉತ್ತರಿಸಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ನಾಗರತ್ನ ಇದು ಸರಕಾರದಿಂದ ನಡೆಯುವ ಯೋಜನೆ ಇದು ನಮ್ಮ ಕೈಯಲಿಲ್ಲ ಎಂದರು.
ಏಳಿಂಜೆಯಲ್ಲಿ ಅಂಗವಿಕಲ ಮಹಿಳೆಗೆ ಯಾವ ಸವಲತ್ತು ದೊರೆಯುತ್ತಿಲ್ಲ ಯಾಕೆ ಎಂದು ಪದ್ಮಿನಿ ವಸಂತ ಕೇಳಿದಾಗ ಮಂಗಳೂರು ಕಚೇರಿಗೆ ಬಂದು ಬೇಟಿಯಾಗಿ ಅಧಿಕಾರಿ ನಾಗರತ್ನ ಹೇಳಿದರು.
ಮೂಡಬಿದಿರೆ ಆಳ್ವಾಸ್ ಕಾಲೇಜು ಉಪನ್ಯಾಸಕಿ ಸುಧಾರಾಣಿ ಶೆಟ್ಟಿ ಮಹಿಳೆಯ ಸಮಾಜದಲ್ಲಿ ಆಗುವ ತೊಂದರೆ ಕುಂದು ಕೊರತೆಗಳು ಅದನ್ನು ನಿಭಾಯಿಸುವ ಕುರಿತು ಉಪನ್ಯಾಸ ನೀಡಿದರು. ಸಮಾಜ ಸೇವಕಿ ನಂದಾ ಪಾಯಸ್ ಮಹಿಳಾ ಹಕ್ಕುಗಳ ಬಗ್ಗೆ ಮಾಹಿತಿ ನೀಡಿದರು.
ಆರೋಗ್ಯ ಸಹಾಯಕಿ ಪೂರ್ಣಿಮಾ, ಆಶಾ ಕಾರ್ಯಕರ್ತರು, ಕಿನ್ನಿಗೋಳಿ ಗ್ರಮ ಪಂಚಾಯಿತಿ ಉಪಾಧ್ಯಕ್ಷೆ ಸುಜಾತಾ ಪೂಜಾರಿ, ಪಿಡಿಒ ಅರುಣ್ ಪ್ರದೀಪ್ ಡಿಸೋಜ ಉಪಸ್ಥಿತರಿದ್ದರು.

Kinnigoli-30111702

Comments

comments

Comments are closed.

Read previous post:
Kinnigoli-30111701
ಕಿನ್ನಿಗೋಳಿ : ಪದ್ಮನಾಭ ಶೆಟ್ಟಿಗಾರ್ ಸನ್ಮಾನ

ಕಿನ್ನಿಗೋಳಿ: ದೇಶ ಸೇವೆಯೊಂದಿಗೆ ಉತ್ತಮ ಹವ್ಯಾಸ ಹಾಗೂ ಸಮಾಜ ಮುಖಿ ಚಿಂತನೆಗಳ ಕೆಲಸ ಕಾರ್ಯಗಳನ್ನು ಮಾಡಿದಾಗ ನಮ್ಮ ಜೀವನ ಸಾರ್ಥಕಗೊಳ್ಳುವುದು ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಡಿ.ಜಿ.ಎಂ....

Close