ಕಿನ್ನಿಗೋಳಿ : ಪದ್ಮನಾಭ ಶೆಟ್ಟಿಗಾರ್ ಸನ್ಮಾನ

ಕಿನ್ನಿಗೋಳಿ: ದೇಶ ಸೇವೆಯೊಂದಿಗೆ ಉತ್ತಮ ಹವ್ಯಾಸ ಹಾಗೂ ಸಮಾಜ ಮುಖಿ ಚಿಂತನೆಗಳ ಕೆಲಸ ಕಾರ್ಯಗಳನ್ನು ಮಾಡಿದಾಗ ನಮ್ಮ ಜೀವನ ಸಾರ್ಥಕಗೊಳ್ಳುವುದು ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಡಿ.ಜಿ.ಎಂ. ಸುಕುಮಾರ್ ವಿ.ಕೆ ಹೇಳಿದರು.
ಕಿನ್ನಿಗೋಳಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಗ್ರಾಹಕ ಹಾಗೂ ಗಿನ್ನೆಸ್ ದಾಖಲೆ ಬರೆದ ಆರ್ಮಿ ಸರ್ವಿಸ್ ಕಾರ್ಪ್ಸ್ (ಟೊರ್ನೆಡೊಸ್) ತಂಡದ ಸದಸ್ಯ ಪದ್ಮನಾಭ ಶೆಟ್ಟಿಗಾರ್ (58 ಜನರು ಒಂದು 500ಸಿಸಿ. ರೋಯಲ್ ಎನ್‌ಫೀಲ್ಡ್ ಬೈಕ್) ಅವರನ್ನು ಸೋಮವಾರ ಕಿನ್ನಿಗೋಳಿ ಸ್ಟೇಟ್ ಬ್ಯಾಂಕ್‌ನಲ್ಲಿ ಸನ್ಮಾನಿಸಿ ಮಾತನಾಡಿದರು
ಎ.ಜಿ.ಎಂ. ಕಿಶೋರ್ ಕುಮಾರ್ ಮಾತನಾಡಿ ಸಮಾಜದ ಎಲ್ಲಾ ವಲಯದಲ್ಲಿ ನಾವು ಯುವ ಜನರಿಗೆ ಆಸಕ್ತಿ ಪ್ರೋತ್ಸಾಹ ತರಬೇತಿ ನೀಡಿದಾಗ ಅವರು ಭವಿಷ್ಯದಲ್ಲಿ ಉತ್ತಮ ಸಾಧನೆಗೈದು ದೇಶವನ್ನು ಪ್ರಗತಿಯತ್ತ ಕೊಂಡೊಯ್ಯುತ್ತಾರೆ ಎಂದರು.
ಕಿನ್ನಿಗೋಳಿ ಸ್ಟೇಟ್ ಬ್ಯಾಂಕ್ ಮೆನೇಜರ್ ಇಶಾನಿ ಚಟ್ಟೋರಾಜ್, ಡೆಪ್ಯೂಟಿ ಮೆನೇಜರ್ ಸೌಭಾಗ್ಯ ಲಕ್ಷ್ಮೀ, ಮರ್ಸಿ ಬ್ರಿಟ್ಟೋ, ಕೃಷ್ಣ ಬಂಗೇರ, ಯಶೋದಾ ವಿ. ಲಕ್ಷ್ಮೀನಾರಾಯಣ ಯು.ಆರ್., ಶೇಖರ್ ಬಿ., ಸುಮಂಗಲ, ಅನಿತಾಶ್ರೀ ಶೆಟ್ಟಿಗಾರ್ ಮತ್ತಿತರರು ಉಪಸ್ಥಿತರಿದ್ದರು.

Kinnigoli-30111701

Comments

comments

Comments are closed.

Read previous post:
Kinnigoli-29111701
ಕಟೀಲು ಯಕ್ಷಗಾನ ಕಲಾವಿದರ ಪ್ರತಿಕ್ರಿಯೆ

ಯಕ್ಷಗಾನ ಎಂಬುದು ಶ್ರೀಮಂತ ಕಲೆ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಯಕ್ಷಗಾನ ಕಲಾವಿದರ ಬದುಕು ಯಾರಿಗೂ ಬೇಡ ಎಂಬ ಸ್ಥಿತಿ ಇತ್ತು. ಕಲೆಯ ಮೇಲಿನ ಪ್ರೀತಿಯಿಂದಲೋ ಬದುಕು...

Close