ಅಂಗನವಾಡಿ ಕೇಂದ್ರದಿಂದ ಮಕ್ಕಳ ವಿಕಸನ

ಕಿನ್ನಿಗೋಳಿ : ಅಂಗನವಾಡಿ ಕೇಂದ್ರದಿಂದಲೇ ಮಕ್ಕಳ ವಿಕಸನ ಪರ್ವ ಆರಂಭವಾಗುತ್ತದೆ. ಮಕ್ಕಳನ್ನು ಉತ್ತಮ ವಾತಾವರಣದಲ್ಲಿ ಬೆಳೆಸಿದಲ್ಲಿ ಅವರು ಭಾರತದ ಯುವ ಶಕ್ತಿಯಾಗುತ್ತಾರೆ. ಎಂದು ಮಂಗಳೂರು ತಾಲೂಕು ಪಂಚಾಯಿತಿ ಸದಸ್ಯ ಜೀವನ್‌ಪ್ರಕಾಶ್ ಕಾಮೆರೊಟ್ಟು ಹೇಳಿದರು.
ಹಳೆಯಂಗಡಿ ಅಂಗನವಾಡಿ ಕೇಂದ್ರದಲ್ಲಿ ನಡೆದ ಮಕ್ಕಳ ಸಂಭ್ರಮ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಮಂಗಳೂರು ಹಿಂದೂಜಾ ಗ್ಲೋಬಲ್ ಸೊಲ್ಯೂಷನ್ ಸಂಸ್ಥೆಯ ಸುದರ್ಶನ್ ಹಾಗೂ ಶ್ರೀನಾಥ್ ಅವರ ತಂಡ ಮಕ್ಕಳಿಗೆ ವಿವಿಧ ಆಟೋಟ ಸ್ಪರ್ಧೆ ನಡೆಸಿ ಬಹುಮಾನಗಳನ್ನು ವಿತರಿಸಿದರು. ಹಳೆಯಂಗಡಿ ವ್ಯಾಪ್ತಿಯ ನಾಲ್ಕು ಅಂಗನವಾಡಿ ಕೇಂದ್ರದಿಂದ ಒಟ್ಟು 47 ಮಕ್ಕಳು ಭಾಗವಹಿಸಿದ್ದರು.
ಯುಬಿಎಂಸಿ ಶಾಲೆಯ ಮುಖ್ಯ ಶಿಕ್ಷಕಿ ಐರಿನ್ ಕ್ರಿಸ್ಟಲ್, ಕೇಂದ್ರದ ಬಾಲವಿಕಾಸ ಸಮಿತಿ, ನವೋದಯ, ಶ್ರೀದುರ್ಗಾ, ಸ್ವರ್ಣಜ್ಯೋತಿ, ಆತ್ಮಸಾಕ್ಷಿ ಸ್ವಸಹಾಯ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಅಂಗನವಾಡಿ ಕೇಂದ್ರದ ನಳಿನಾಕ್ಷಿ ಸ್ವಾಗತಿಸಿದರು, ಜ್ಯೋತಿ ವಂದಿಸಿದರು, ಗೀತಾ ನಿರೂಪಿಸಿದರು.

Kinnigoli-01121702

Comments

comments

Comments are closed.

Read previous post:
Kinnigoli-01121701
ಕಲಾವಿದರಿಗೆ ವೇದಿಕೆ ನೀಡಿ ಪ್ರೋತ್ಸಾಹಿಸಿ

ಕಿನ್ನಿಗೋಳಿ : ಯುವ ಕಲಾವಿದರಿಗೆ ಸೂಕ್ತವಾದ ವೇದಿಕೆ ನೀಡಿ, ಪ್ರೋತ್ಸಾಹಿಸಬೇಕು. ಗ್ರಾಮೀಣ ಭಾಗದ ಕಲಾವಿದರಿಗೆ ಮುಂದೆ ತಮ್ಮ ವೃತ್ತಿ ಜೀವನವನ್ನು ಕಲಾವಿದರಾಗಿಯೇ ಮುಂದುವರಿಯಲು ಸಹಕಾರ ನೀಡಬೇಕು. ಧಾರ್ಮಿಕ ಕ್ಷೇತ್ರಗಳಲ್ಲಿ...

Close