ಆಯುರ್ವೇದ ಚಿಕಿತ್ಸಾ ಪದ್ಧತಿ ಪರಿಣಾಮಕಾರಿ

ಕಿನ್ನಿಗೋಳಿ : ಆಯುರ್ವೇದ, ಯುನಾನಿ, ಹೋಮಿಯೋಪತಿ ಚಿಕಿತ್ಸಾ ಪದ್ಧತಿಗಳು ಪರಿಣಾಮಕಾರಿ ಔಷಧಿ ಪದ್ಧತಿಯಾಗಿದ್ದು ಯಾವುದೇ ಅಡ್ಡ ಪರಿಣಾಮ ಬೀರುವುದಿಲ್ಲ ಎಂದು ಆಯುಷ್ ಇಲಾಖೆಯ ವೈದ್ಯಾಧಿಕಾರಿ ಡಾ. ಅಶಾಕ್ ಹೇಳಿದರು.
ಹಳೆಯಂಗಡಿ ಜಾರಂದಾಯ ದೈವಸ್ಥಾನದ ಶ್ರೀನಿವಾಸ ಕಲಾಮಂದಿರದಲ್ಲಿ ದ.ಕ.ಜಿಲ್ಲಾ ಆಯುಷ್ ಇಲಾಖೆಯಿಂದ ಪ್ರಸ್ತುತ ವರ್ಷದ ಐ.ಇ.ಸಿ ಕಾರ್ಯಕ್ರಮಗಳ ಎಸ್.ಸಿ.ಪಿ ಯೋಜನೆಯಡಿಯಲ್ಲಿ ಹಳೆಯಂಗಡಿಯ ಶ್ರೀ ವಿದ್ಯಾವಿನಾಯಕ ಯುವಕ ಮಂಡಲ, ರಜತ ಸೇವಾ ಟ್ರಸ್ಟ್, ಯುವತಿ ಮತ್ತು ಮಹಿಳಾ ಮಂಡಲ, ಇಂದಿರಾ ನಗರದ ದಲಿತ ಸಂಘರ್ಷ ಸಮಿತಿ ಮತ್ತು ಹಿಂದೂ ಜಾಗರಣ ವೇದಿಕೆ ಇಂದಿರಾನಗರ ಇವರ ಜಂಟಿ ಆಶ್ರಯದಲ್ಲಿ ನಡೆದ ಉಚಿತ ಆಯುಷ್ ಚಿಕಿತ್ಸಾ ಶಿಬಿರದಲ್ಲಿ ಮಾತನಾಡಿದರು.
ದ.ಕ. ಜಿ.ಪಂ. ಸದಸ್ಯ ವಿನೋದ್ ಕುಮಾರ್ ಬೊಳ್ಳೂರು ಅಧ್ಯಕ್ಷತೆ ವಹಿಸಿ ಮಾತನಾಡಿ ಮಿತವ್ಯಯವಾದ ಆಯುಷ್ ಔಷಧಿಗಳು ಆರೋಗ್ಯ ರಕ್ಷಣೆಗೆ ಸಹಕಾರಿ, ಗ್ರಾಮೀಣ ಭಾಗದ ಜನರಲ್ಲಿ ಈ ಜಾಗೃತಿ ಮೂಡಿಸಲು ಸಂಘ ಸಂಸ್ಥೆಗಳು ಸಹಕಾರ ನೀಡಬೇಕು ಎಂದರು.
ಮಂಗಳೂರು ತಾ.ಪಂ. ಸದಸ್ಯ ಜೀವನ್ ಪ್ರಕಾಶ್ ಕಾಮೆರೊಟ್ಟು, ದಲಿತ ಸಂಘರ್ಷ ಸಮಿತಿಯ ಅಧ್ಯಕ್ಷ ಸದಾಶಿವ ಹಳೆಯಂಗಡಿ, ಹಳೆಯಂಗಡಿ ಮಹಿಳಾ ಮಂಡಲದ ಅಧ್ಯಕ್ಷೆ ಸುಜಾತಾ ವಾಸುದೇವ, ಅಯುಷ್ ಇಲಾಖೆಯ ವೈದ್ಯಾಧಿಕಾರಿಗಳಾದ
ಡಾ ಮುರಳೀ, ಡಾ ಮಣಿ ಕರ್ನಿಕಾ, ನ್ಯಾಯವಾದಿ ಮಹಾಬಲ ಅಂಚನ್, ಸಾಮಾಜಿಕ ಕಾರ್ಯಕರ್ತ ರಮೇಶ್ ಅಂಚನ್, ಕೆಮ್ರಾಲ್ ಗ್ರಾ.ಪಂ. ಅಧ್ಯಕ್ಷ ನಾಗೇಶ್, ಹಳೆಯಂಗಡಿ ಗ್ರಾ. ಪಂ. ಸದಸ್ಯ ವಿನೋದ್‌ಕುಮಾರ್ ಕೊಳುವೈಲು, ದಲಿತ ಸಂಘರ್ಷ ಸಮಿತಿಯ ಪದಾಧಿಕಾರಿ ಸುಧಾಕರ್, ಸುರತ್ಕಲ್ ಪತಂಜಲಿ ಚಿಕಿತ್ಸಾ ವಲಯದ ಸಂಚಾಲಕಿ ಶಾಂತ ರಮೇಶ್, ಶ್ರಾವ್ಯ ಹರ್ಷಿತ್, ಮೀರಾ ಮತ್ತಿತರರು ಉಪಸ್ಥಿತರಿದ್ದರು.
ಡಾ. ಯಶ್ವಿತಾ ಅನೂಪ್ ಸ್ವಾಗತಿಸಿದರು. ರಜತ ಸೇವಾ ಟ್ರಸ್ಟ್‌ನ ಟ್ರಸ್ಟಿ ಎಚ್. ರಾಮಚಂದ್ರ ಶೆಣೈ ಕಾರ್ಯಕ್ರಮ ನಿರೂಪಿಸಿದರು.

Kinnigoli-01121704

Comments

comments

Comments are closed.

Read previous post:
Kinnigoli-01121703
ಪಡುಪಣಂಬೂರು ಮಕ್ಕಳ ಗ್ರಾಮ ಸಭೆ

ಕಿನ್ನಿಗೋಳಿ : ಮಕ್ಕಳ ಗ್ರಾಮ ಸಭೆಗೆ ಸರಕಾರಿ ಅಧಿಕಾರಿಗಳು ಯಾಕೆ ಬರುವುದಿಲ್ಲ ಸಾರ್? ಎಂದು ಪಡುಪಣಂಬೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ತೋಕೂರು ಹಿಂದೂಸ್ಥಾನಿ ಸರಕಾರಿ ಶಾಲೆಯಲ್ಲಿ ಮಂಗಳವಾರ ಮಕ್ಕಳ ಗ್ರಾಮ...

Close