ಕಲಾವಿದರಿಗೆ ವೇದಿಕೆ ನೀಡಿ ಪ್ರೋತ್ಸಾಹಿಸಿ

ಕಿನ್ನಿಗೋಳಿ : ಯುವ ಕಲಾವಿದರಿಗೆ ಸೂಕ್ತವಾದ ವೇದಿಕೆ ನೀಡಿ, ಪ್ರೋತ್ಸಾಹಿಸಬೇಕು. ಗ್ರಾಮೀಣ ಭಾಗದ ಕಲಾವಿದರಿಗೆ ಮುಂದೆ ತಮ್ಮ ವೃತ್ತಿ ಜೀವನವನ್ನು ಕಲಾವಿದರಾಗಿಯೇ ಮುಂದುವರಿಯಲು ಸಹಕಾರ ನೀಡಬೇಕು. ಧಾರ್ಮಿಕ ಕ್ಷೇತ್ರಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಿರಂತರವಾಗಿ ನಡೆಯಬೇಕು ಎಂದು ಮುಂಬೈಯ ಹಿರಿಯ ಪತ್ರಕರ್ತ ರಮೇಶ್ ಅಮೀನ್ ಹೇಳಿದರು.
ತೋಕೂರು ಶ್ರಿ ಸುಬ್ರಹ್ಮಣ್ಯ ದೇವಳದ ಸ್ಕಂದ ಮಂಟಪದಲ್ಲಿ ಬಾಲ ಕಲಾವಿದೆ ಕೀರ್ತಿ ದೇವಾಡಿಗ ಅವರ ರಂಗಪ್ರವೇಶದ ಪ್ರಥಮ ಸ್ಯಾಕ್ಸೊಪೋನ್ ಕಚೇರಿಗೆ ಚಾಲನೆ ನೀಡಿ ಮಾತನಾಡಿದರು.
ಮುಂಬೈಯ ತಿಲಕ್‌ನಗರದ ಪೆಸ್ತಾಮ್ ಸಾಗರ ಕರ್ನಾಟಕ ಸಂಘದ ಅಧ್ಯಕ್ಷ ರಾಮಣ್ಣ
ದೇವಾಡಿಗ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಕ್ಕಳ ಭವಿಷ್ಯವು ಕೇವಲ ಆಟ, ಪಾಠದಲ್ಲಿ ಮಾತ್ರವಲ್ಲ ಕಲೆಯಲ್ಲಿಯೂ ಅರಳಬಹುದು ಅವರಿಷ್ಟದ ಕ್ಷೇತ್ರದಲ್ಲಿ ಬೆಳೆಯಲು ಅವಕಾಶ ನೀಡಿ ಎಂದರು.
ಪಡುಪಣಂಬೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಮೋಹನ್‌ದಾಸ್ ಶುಭಹಾರೈಸಿದರು.
ತೋಕೂರು ಶ್ರೀ ಸುಬ್ರಹ್ಮಣ್ಯ ಮಹಾಗಣಪತಿ ಸ್ಪೋಟ್ಸ್ ಕ್ಲಬ್‌ನಿಂದ ಕೀರ್ತಿ ದೇವಾಡಿಗ ಅವರನ್ನು ವಿಶೇಷವಾಗಿ ಸನ್ಮಾನಿಸಲಾಯಿತು.
ಕಲಾವಿದೆಯ ಗುರುಗಳಾದ ಅಲೆವೂರು ಸುಂದರ ದೇವಾಡಿಗರಿಗೆ ಶಿಷ್ಯೆಯಿಂದ ಗುರುವಂದನೆ ನಡೆಯಿತು. ಪೋಷಕರಾದ ಉಡುಪಿ ದಿನಕರ ದೇವಾಡಿಗ, ಸುನಂದ ದೇವಾಡಿಗ ತೋಕೂರು, ಪವಿಲ್‌ನಲ್ಲಿ ಶಂಕರ ಶಿವಪುರ, ಕೀಬೋರ್ಡ್‌ನಲ್ಲಿ ಅರುಣ್ ಪಾವಂಜೆ, ರಿದಂಪ್ಯಾಡ್‌ನಲ್ಲಿ ಸಂತೋಷ್ ಪಾವಂಜೆ, ತಾಳದಲ್ಲಿ ಸುರೇಶ್ ಅಲೆವೂರು ಸಹಕರಿಸಿದರು.
ಸ್ಪೋರ್ಟ್ಸ್ ಕ್ಲಬ್‌ನ ಅಧ್ಯಕ್ಷ ರತನ್ ಶೆಟ್ಟಿ, ಕಾರ್ಯದರ್ಶಿ ಪದ್ಮನಾಭ ಶೆಟ್ಟಿ, ಕೇಶವ ದೇವಾಡಿಗ, ಲೋಹಿತ್ ದೇವಾಡಿಗ, ವಸಂತ್ ದೇವಾಡಿಗ, ವೀಕ್ಷಿತ್ ದೇವಾಡಿಗ, ಸುರೇಶ್ ಶೆಟ್ಟಿ, ಸಂತೋಷ್ ದೇವಾಡಿಗ, ಸಂತೋಷ್ ಕುಮಾರ್, ಭಾಸ್ಕರ್ ದೇವಾಡಿಗ, ಗಣೇಶ್ ದೇವಾಡಿಗ ಉಪಸ್ಥಿತರಿದ್ದರು.
ಗಣೇಶ್ ಕುಮಾರ್ ಬೆಂಗಳೂರು ಸ್ವಾಗತಿಸಿದರು, ದೀಪಕ್ ಸುವರ್ಣ ವಂದಿಸಿದರು. ಸಂಪತ್ ದೇವಾಡಿಗ ನಿರೂಪಿಸಿದರು.

Kinnigoli-01121701

Comments

comments

Comments are closed.

Read previous post:
Kinnigoli-30111704
ಮನೆ ಮನೆ ಕಾಂಗ್ರೇಸ್ ಬೇಟಿ

ಕಿನ್ನಿಗೋಳಿ: ಕಿನ್ನಿಗೋಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗುತ್ತಕಾಡು ತಾಳಿಪಾಡಿ ಪರಿಸರದಲ್ಲಿ ಮೂಲ್ಕಿ ಬ್ಲಾಕ್ ಕಾಂಗ್ರೇಸ್ ವತಿಯಿಂದ ಕಿನ್ನಿಗೋಳಿ ಕಾಂಗ್ರೆಸ್ ವಲಯದ ಮನೆ ಮನೆ ಭೇಟಿ ಕಾರ್ಯಕ್ರಮ ನಡೆಯಿತು....

Close