ಪಡುಪಣಂಬೂರು ಮಕ್ಕಳ ಗ್ರಾಮ ಸಭೆ

ಕಿನ್ನಿಗೋಳಿ : ಮಕ್ಕಳ ಗ್ರಾಮ ಸಭೆಗೆ ಸರಕಾರಿ ಅಧಿಕಾರಿಗಳು ಯಾಕೆ ಬರುವುದಿಲ್ಲ ಸಾರ್? ಎಂದು ಪಡುಪಣಂಬೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ತೋಕೂರು ಹಿಂದೂಸ್ಥಾನಿ ಸರಕಾರಿ ಶಾಲೆಯಲ್ಲಿ ಮಂಗಳವಾರ ಮಕ್ಕಳ ಗ್ರಾಮ ಸಭೆಯಲ್ಲಿ ಕೇಳಿದರು.
ಡಾ.ರಾಮಣ್ಣ ಶೆಟ್ಟಿ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಹರ್ಷಿತಾ ಪ್ರಶ್ನಿಸಿ ಇಲಾಖೆಯ ಬಗ್ಗೆ ಮಾಹಿತಿ ಪಡೆಯುವುದು ಮಕ್ಕಳ ಹಕ್ಕಾದರೆ ಅದರ ಪೂರಕ ಮಾಹಿತಿ ನೀಡಬೇಕಾದವರೇ ಸಭೆಗೆ ಗೈರುಹಾಜಾರಾಗುವುದು ಸರಿಯೇ ಎಂದರು. ಇದಕ್ಕೆ ಶಿಕ್ಷಕಿ ರತಿ ಎಕ್ಕಾರು ಧ್ವನಿಗೂಡಿಸಿದರು.
ಪ್ರತಿಕ್ರಿಯಿಸಿದ ಪಿಡಿಒ ಇಲಾಖೆಗೆ ಮಾಹಿತಿ ನೀಡಿದ್ದೇವೆ ಸಮನ್ವಯದ ಕೊರತೆ ಇದ್ದು ಇದನ್ನು ಮುಂದಿನ ದಿನದಲ್ಲಿ ಸರಿ ಪಡಿಸುತ್ತೇವೆ. ಮಕ್ಕಳು ವಿವಿಧ ಇಲಾಖೆಗೆ ಸಂಬಂಧಿಸಿದ ಮಾಹಿತಿ ನೀಡಿದಲ್ಲಿ ಅದನ್ನು ಇಲಾಖೆಗೆ ತಲುಪಿಸುವ ಜವಬ್ದಾರಿ ನಮ್ಮದು ಎಂದರು.
ತೋಕೂರು ಡಾ. ರಾಮಣ್ಣ ಶೆಟ್ಟಿ ಶಾಲೆಯ ಬಳಿ ಬಸ್‌ನಿಲ್ದಾಣ ಹಾಗೂ ಹಂಪ್ಸ್ ಅಗತ್ಯವಿದೆ ಎಂದು ಧನ್ಯ ಮತ್ತು ಪಲ್ಲವಿ ಅಗ್ರಹಿಸಿದರು.
ಹೆದ್ದಾರಿಯಲ್ಲಿ ಮೀನು ಲಾರಿಗಳಿಂದ ಕೆಟ್ಟ ವಾಸನೆ, ಮೂಡುತೋಟದಿಂದ ಹೆದ್ದಾರಿಯನ್ನು ದಾಟುವಾಗ ಹೆದರಿಕೆ ಆಗುತ್ತದೆ, ಮಳೆನೀರು ರಸ್ತೆಯಲ್ಲಿ ಹರಿಯುತ್ತದೆ, ವಿಷಜಂತುಗಳಿದೆ, ಚರಂಡಿಯಲ್ಲಿ ಮಣ್ಣು ತುಂಬಿದೆ ಎಂದು ದೀಕ್ಷಿತಾ, ಗ್ರೀಷ್ಮಾ, ಆಕರ್ಷ್, ಆಕಾಶ್ ಪ್ರಶ್ನಿಸಿದರು.
ತೋಕೂರು ಸುಬ್ರಹ್ಮಣ್ಯ ಶಾಲೆಯ ಪರಿಸರದಲ್ಲಿ ಕಸದ ವಿಲೆವಾರಿ ಸರಿಯಿಲ್ಲ, ಹುಲ್ಲುಗಳು ಬೆಳೆದಿದೆ, ಹಂಪ್ಸ್ ಬೇಕು ಎಂದು ಮಾನ್ಯಶ್ರೀ, ವರುಣ್ ಆಗ್ರಹಿಸಿದರು.
ಕೆರೆಕಾಡಿನ ಶಾಲಾ ವಠಾರದಲ್ಲಿ ಗುಂಡಿ ಇದೆ ಮಣ್ಣು ಮುಚ್ಚಿ ಸಮತಟ್ಟು ಮಾಡಿ, ಆವರಣ ಗೋಡೆ ನಿರ್ಮಿಸಿ ಎಂದು ರಶ್ಮಿ, ಶಿಲ್ಪಾ, ಅವಿನಾಶ್ ಬೇಡಿಕೆ ಸಲ್ಲಿಸಿದರು.
ಹಿಂದೂಸ್ತಾನಿ ಶಾಲೆಯ ಮಕ್ಕಳಿಂದ ಪಂಚಾಯತ್‌ಗೆ ವಿವಿಧ ಬೇಡಿಕೆಯ ವಿಶೇಷ ಮನವಿಯನ್ನು ಅರ್ಪಿಸಲಾಯಿತು.
ಪಡುಪಣಂಬೂರು ಶಾಲಾ ವಿದ್ಯಾರ್ಥಿ ದರ್ಶನ್ ಅಧ್ಯಕ್ಷತೆ ವಹಿಸಿದ್ದರು.
ತೋಕೂರು ಡಾ.ರಾಮಣ್ಣ ಶೆಟ್ಟಿ ಶಾಲೆಯ ಯಶ್, ಸುಬ್ರಹ್ಮಣ್ಯ ತೋಕೂರು ಶಾಲೆಯ ವರುಣ್, ಹಿಂದೂಸ್ತಾನಿ ಶಾಲೆಯ ಸಾಕ್ಷಿ, ಕೆರೆಕಾಡು ಶಾಲೆಯ ಖರ್ಷಿತಾ, ತಾ.ಪಂ. ಸದಸ್ಯ ಜೀವನ್‌ಪ್ರಕಾಶ್ ಕಾಮೆರೊಟ್ಟು, ಪಡುಪಣಂಬೂರು ಗ್ರಾ.ಪಂ. ಅಧ್ಯಕ್ಷ ಮೋಹನ್‌ದಾಸ್, ಸದಸ್ಯರಾದ ಹೇಮಂತ್ ಅಮಿನ್, ಲೀಲಾ ಬಂಜನ್, ಕುಸುಮಾವತಿ, ಸಂಪಾವತಿ, ಉಮೇಶ್ ಪೂಜಾರಿ, ಪುಷ್ಪಾವತಿ, ವನಜಾ, ಪಿಡಿಒ ಅರುಣ್ ಪ್ರದೀಪ್ ಡಿಸೋಜಾ, ಮಕ್ಕಳ ಕಲ್ಯಾಣ ಸಮಿತಿಯ ಸಮನ್ವಯಕಾರರಾದ ಪ್ರತಿಮಾ ಕೆ.ಎಲ್. ಉಪಸ್ಥಿತರಿದ್ದರು.
ತೋಕೂರು ಡಾ.ರಾಮಣ್ಣ ಶೆಟ್ಟಿ ಶಾಲೆಯ ಶ್ರಾವರಿ ಸ್ವಾಗತಿಸಿದರು, ಪಡುಪಣಂಬೂರು ಶಾಲೆಯ ಜಯಲಕ್ಷ್ಮೀ ವಂದಿಸಿದರು, ಪಡುಪಣಂಬೂರು ಶಾಲೆಯ ಅವಿನಾಶ್ ನಿರೂಪಿಸಿದರು.

ಪ್ರೋತ್ಸಾಹ ಧನ ಬಂದಿಲ್ಲ
ಸರಕಾರವು ನೀಡುವ 2016ನೇ ಸಾಲಿನ ಹೆಣ್ಣು ಮಕ್ಕಳ ಪ್ರೋತ್ಸಾಹ ಧನವು ಬಂದಿಲ್ಲ. ಈ ಬಗ್ಗೆ ನಮಗೆ ಮಾಹಿತಿ ಕೇಳಲು ಸಭೆಯಲ್ಲಿ ಅಧಿಕಾರಿಗಳೇ ಇಲ್ಲ.
ಸುರಯ್ಯಾ
ಪಡುಪಣಂಬೂರು ಸರಕಾರಿ ಶಾಲೆ.

ಗೌರವ ಧನದ ಸಹಕಾರ
ಶೋಷಣೆ, ಎಚ್‌ಐವಿ ಭಾದಿತ ಪೋಷಕರ ಮಕ್ಕಳಿಗೆ ಹಾಗೂ ಪೋಷಕರು ಕಾನೂನು ಚೌಕಟ್ಟಿನಲ್ಲಿ ಜೈಲು ಪಾಲಾಗಿದ್ದರೆ ಅಂತಹವರ ಮಕ್ಕಳಿಗೆ ಪ್ರಾಯೋಜಕತ್ವ ನೆರವಿನಲ್ಲಿ ಸರಕಾರವು ವಿಶೇಷವಾಗಿ ಮಾಸಿಕ ಒಂದು ಸಾವಿರ ರೂಪಾಯಿಗಳನ್ನು ಗೌರವ ಧನವಾಗಿ ನೀಡುತ್ತಿದೆ. ಸಣ್ಣ ವಯಸ್ಸಿನಲ್ಲಿಯೇ ತಪ್ಪು ಮಾಡಿದರೆ ಬಾಲ ನ್ಯಾಯ ಮಂಡಳಿಯ ಮೂಲಕ ಅವರ ಮನಸ್ಸನ್ನು ಪರಿವರ್ತನೆಗೊಳಿಸಲು ಪುನರ್ ವಸತಿ ಕೇಂದ್ರಕ್ಕೆ ಸೇರಿಸಲಾಗುತ್ತಿದೆ. ಮಕ್ಕಳ ಸಹಾಯವಾಣಿ ಬಹಳಷ್ಟು ಪರಿಣಾಮಕಾರಿಯಾಗಿ ಜಾರಿಯಾಗಿದೆ.
ಪ್ರತಿಮಾ ಕೆ.ಎಲ್.
ಸಂಯೋಜಕರು : ಮಕ್ಕಳ ಕಲ್ಯಾಣ ಸಮಿತಿ, ಮಂಗಳೂರು.

ಹಳೆಯಂಗಡಿ ಹೆದ್ದಾರಿಯಲ್ಲಿ ವಾಸನೆ
ಹಳೆಯಂಗಡಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಎರಡೂ ಕಡೆಗಳಲ್ಲಿ ಕಸ ಶೇಖರಣೆಯಾಗಿದೆ. ಹೆದ್ದಾರಿಯಲ್ಲಿಯೇ ಈ ರೀತಿ ಇದ್ದರೆ ಸ್ವಚ್ಚ ಭಾರತ ಆಗುವುದು ಯಾವಾಗ ಸರ್..
ಪಲ್ಲವಿ
ತೋಕೂರು, ಡಾ.ರಾಮಣ್ಣ ಶೆಟ್ಟಿ ಶಾಲೆ.

Kinnigoli-01121703

Comments

comments

Comments are closed.

Read previous post:
Kinnigoli-01121702
ಅಂಗನವಾಡಿ ಕೇಂದ್ರದಿಂದ ಮಕ್ಕಳ ವಿಕಸನ

ಕಿನ್ನಿಗೋಳಿ : ಅಂಗನವಾಡಿ ಕೇಂದ್ರದಿಂದಲೇ ಮಕ್ಕಳ ವಿಕಸನ ಪರ್ವ ಆರಂಭವಾಗುತ್ತದೆ. ಮಕ್ಕಳನ್ನು ಉತ್ತಮ ವಾತಾವರಣದಲ್ಲಿ ಬೆಳೆಸಿದಲ್ಲಿ ಅವರು ಭಾರತದ ಯುವ ಶಕ್ತಿಯಾಗುತ್ತಾರೆ. ಎಂದು ಮಂಗಳೂರು ತಾಲೂಕು ಪಂಚಾಯಿತಿ ಸದಸ್ಯ ಜೀವನ್‌ಪ್ರಕಾಶ್...

Close