ಕಿನ್ನಿಗೋಳಿ ಈದ್ ಮಿಲಾದ್ ಸೌಹಾರ್ದ ಸಮಾವೇಶ

ಕಿನ್ನಿಗೋಳಿ : ಪ್ರವಾದಿಯವರ ಸಂದೇಶ ನಮಗೆಲ್ಲರಿಗೂ ಮಾರ್ಗದರ್ಶಕ. ಅವರ ತತ್ವ ಸಿದ್ಧಾಂತಕ್ಕೆ ಬದ್ದರಾಗಿ ಬದುಕಿದರೆ ಜೀವನ ಪಾವನವಾಗುವುದು ಎಂದು ಪುನರೂರು ಮಸೀದಿಯ ಆಶ್ರಫ್ ರಝಾ ಅಂಜದಿ ಹೇಳಿದರು.
ಕಿನ್ನಿಗೋಳಿ ಸಾರ್ವಜನಿಕ ಗಣೇಶೋತ್ಸವ ಮಂಟಪದಲ್ಲಿ ಶುಕ್ರವಾರ ನಡೆದ ಕಿನ್ನಿಗೋಳಿ ಈದ್ ಮಿಲಾದ್ ಸೌಹಾರ್ದ ಸಮಿತಿಯ ಆಶ್ರಯದಲ್ಲಿ ಈದ್ ಮಿಲಾದ್ ಸೌಹಾರ್ದ ಸಮಾವೇಶ ಹಾಗೂ ಮಿಲಾದ್ ರ‍್ಯಾಲಿಯಲ್ಲಿ ಮಾತನಾಡಿದರು.
ಉದ್ಯಮಿ ಜೊಸ್ಸಿ ಪಿಂಟೋ ಮಾತನಾಡಿ ಎಲ್ಲಾ ಧರ್ಮಗಳ ಸಾರ ಒಂದೇ ಆಗಿದ್ದು ಸ್ನೇಹ ಸೌಹಾರ್ಧತೆಯಿಂದ ಸಮಾಜದಲ್ಲಿ ಶಾಂತಿ ನೆಮ್ಮದಿ ನೆಲಸಲು ಸಾಧ್ಯ ಎಂದು ಹೇಳಿದರು.
ಕಿನ್ನಿಗೋಳಿ ಈದ್ ಮಿಲಾದ್ ಸೌಹಾರ್ದ ಸಮಿತಿಯ ಅಧ್ಯಕ್ಷ ಟಿ. ಕೆ. ಅಬ್ದುಲ್ ಖಾದರ್ ಅಧ್ಯಕ್ಷತೆ ವಹಿಸಿದ್ದರು.
ಉದ್ಯಮಿ ಪಿ. ಸತೀಶ್ ರಾವ್, ಕುಳೂರು ಮಸೀದಿಯ ಕೆ. ಎ. ಬಶೀರ್ ಮದನಿ ಖಾಮಿಲ್ ಸಖಾಫಿ, ಕಲ್ಕರೆ ವಿದ್ಯಾಸಂಸ್ಥೆಯ ಪ್ರಿನ್ಸಿಪಾಲ್ ಪಿ. ಎ. ಅಬ್ದುಲ್ಲ್ ಮದನಿ, ಕಿನ್ನಿಗೋಳಿ ಮಸೀದಿಯ ಅಬ್ದುಲ್ ಲತೀಫ್ ಸಖಾಫಿ, ಶಾಂತಿನಗರದ ಕೆ. ಎ. ಇಬ್ರಾಹಿಂ ರಝ್ವಿ , ಪಕ್ಷಿಕೆರೆ ಮಸೀದಿಯ ಅಬ್ದುಲ್ ಕಾದರ್ ಮದನಿ, ಎಸ್. ಕೋಡಿ ಮಸೀದಿಯ ಅಬ್ದುಲ್ ಹಮೀದ್ ಸಅದಿ, ಕಿನ್ನಿಗೋಳಿ ಮಸೀದಿಯ ಅಧ್ಯಕ್ಷ ಅಬ್ದುಲ್ ರಜಾಕ್, ಶಾಂತಿನಗರ ಮಸೀದಿಯ ಅಧ್ಯಕ್ಷ ಅಬ್ದುಲ್ ರಹ್‌ಮಾನ್ ಪುನರೂರು, ಕೆ. ಪಕ್ಷಿಕೆರೆ ಮಸೀದಿಯ ಯು. ಮಹಮ್ಮದ್ ನೊರಾನಿಯಾ , ಸಿದ್ದೀಕ್ ಪುನರೂರು, ಎಸ್‌ಕೋಡಿ ಮಸೀದಿಯ ಕೆ. ಎ. ಖಾದರ್ ಉಪಸ್ಥಿತರಿದ್ದರು. ಕೆ. ಎ. ಅಬ್ದುಲ್ಲಾ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

Kinnigoli-02121707

Comments

comments

Comments are closed.

Read previous post:
Kinnigoli-02121705
ಕಿಲೆಂಜೂರು : ಶ್ರಮಾದಾನ

ಕಿನ್ನಿಗೋಳಿ : ಕಿಲೆಂಜೂರು ಸರಳ ಧೂಮಾವತಿ ದೈವಸ್ಥಾನದ ವಾರ್ಷಿಕ ನೇಮೋತ್ಸವದ ಪೂರ್ವಬಾವಿಯಾಗಿ ಗ್ರಾಮಸ್ಥರಿಂದ ಶ್ರಮಾದಾನ ನಡೆಯಿತು.

Close