ಮುಲ್ಕಿ ಅತಿಥಿ ಗೃಹ ಉದ್ಘಾಟನೆ

ಮುಲ್ಕಿ : ಸಮಾಜದ ಒಳಿತಿಗಾಗಿ ಮಾಡುವ ಸೇವಾ ಕಾರ್ಯಗಳು ಭಗವಂತನ ಕ್ರಪೆಗೆ ಪಾತ್ರವಾಗುತ್ತದೆ ಎಂದು ಶ್ರೀ ಕಾಶೀ ಮಠಾದೀಶ ಶ್ರೀಮದ್ ಸಂಯಮೀಂದ್ರ ತೀರ್ಥ ಸ್ವಾಮೀಜಿಯವರು ಹೇಳಿದರು.
ಮುಲ್ಕಿ  ಶ್ರೀ ವೆಂಕಟರಮಣ ದೇವಳಕ್ಕೆ ಶುಕ್ರವಾರ ಮುಕ್ಕೋಟಿ ದ್ವಾದಶಿಯಂದು ಚಿತ್ತೈಸಿ ಶ್ರೀ ದೇವರ ಭೇಟಿ ಮಾಡಿ ಬಳಿಕ ದೇವಳದ ಭಕ್ತಾದಿಗಳ ವಾಸ್ತವ್ಯಕ್ಕಾಗಿ ನೂತನವಾಗಿ ನಿರ್ಮಿಸಿದ ಅತಿಥಿ ಗ್ರಹ ಮಾಧವ ನಿವಾಸವನ್ನು ಉದ್ಘಾಟಿಸಿ ಆಶೀರ್ವಚನ ನೀಡಿದರು.
ಕಾಶೀಮಠದ ಯತಿ ಪರಂಪರೆಯಿಂದ ಆನುಗ್ರಹಿತರಾಗಿರುವಮುಲ್ಕಿಯ ಪ್ರದೇಶ ಅಭಿವೃದ್ಧಿಗೊಳ್ಳಬೇಕು,ಕ್ಷೇತ್ರದಿಂದ ಹೆಚ್ಚಿನ ಸಮಾಜಮುಖಿ ಕಾರ್ಯಗಳು ನಡೆಯಬೇಕು. ಕ್ಷೇತ್ರದ ಎಲ್ಲಾ ಭಜಕವೃಂದಕ್ಕೆ ಶ್ರೀದೇವರು ಆಯುರಾರೋಗ್ಯ ಸಕಲ ಸೌಬಾಗ್ಯ ಕರುಣಿಸಲಿ ಎಂದು ಹಾರೈಸಿದರು.
ಈ ಸಂದರ್ಭ ಕ್ಷೇತ್ರದ ಅರ್ಚಕ ವರ್ಗ ಆಡಳಿತ ಮಂಡಳಿ, ದಾನಿಗಳು ಹಾಗೂ ಭಕ್ತವ್ರಂದ ಉಪಸ್ಥಿತರಿದ್ದರು.

Mulki-05121701

Comments

comments

Comments are closed.

Read previous post:
ಕಟೀಲು ಮೇಳಗಳ ಅಪಪ್ರಚಾರ ಬೇಡ.

ಕಲಾವಿದರ ಒಳಿತಿಗಾಗಿ ಅನೇಕ ವ್ಯವಸ್ಥೆ, ಬಿಟ್ಟ ಕಲಾವಿದರ ಸೇರ್ಪಡೆಗೆ ಸನ್ನಿವೇಶ ಸೃಷ್ಟಿಯಾಗಿಲ್ಲ ಕಟೀಲು : ಶ್ರೀ ದುರ್ಗಾಪರಮೇಶ್ವರೀ ದಶಾವತಾರ ಯಕ್ಷಗಾನ ಮಂಡಳಿಯ ಆಡಳಿತ ಬಗ್ಗೆ ಕೆಲ ಪತ್ರಿಕೆ...

Close