ಕಿನ್ನಿಗೊಳಿ : ಗೀತಾ ಜಯಂತಿ

ಕಿನ್ನಿಗೋಳಿ : ಮಕ್ಕಳಿಗೆ ಶಾಲಾ ಶಿಕ್ಷಣದೊಂದಿಗೆ ಸಂಸ್ಕೃತಿ ಸಂಸ್ಕಾರ ಆಚಾರ ವಿಚಾರಗಳ ಪರಿಚಯ ಹಾಗೂ ಧರ್ಮದ ಬಗ್ಗೆ ಅರಿವು ನೀಡಿ ಸುಸಂಸ್ಕೃತರನ್ನಾಗಿ ಮಾಡುವುದು ನಮ್ಮ ಆದ್ಯ ಕರ್ತವ್ಯ. ಶಿಕ್ಷಣದಲ್ಲಿ ಅಂಕ ಗಳಿಸುವುದು ಕೇವಲ ಹಣ ಗಳಿಸುವ ಉದ್ದೇಶವಾಗಿರಬಾರದು ಎಂದು ಯಕ್ಷ ಕವಿ ಸಾಹಿತಿ ಅರ್ಥಧಾರಿ ಶ್ರೀಧರ ಡಿ. ಎಸ್ ಹೇಳಿದರು.
ಕಿನ್ನಿಗೋಳಿ ಜಿ. ಎಸ್. ಬಿ ಮತ್ತು ಮಾತೃ ಮಂಡಳಿ ಆಶ್ರಯದಲ್ಲಿ ಕಿನ್ನಿಗೋಳಿ ರಾಮಮಂದಿರದ ಸಭಾಭವನದಲ್ಲಿ ಶನಿವಾರ ನಡೆದ ಗೀತಾ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕಿನ್ನಿಗೋಳಿ ಜಿಎಸ್‌ಬಿ ಎಸೋಸಿಯೇಶನ್ ಅಧ್ಯಕ್ಷ ಕೆ. ಅಚ್ಚುತ ಮಲ್ಯ ಅಧ್ಯಕ್ಷತೆ ವಹಿಸಿ ಮಾತನಾಡಿ ಶಿಬಿರದಲ್ಲಿ ನೀಡುವ ಮಹಾಭಾರತ ರಾಮಯಾಣದ ತತ್ವ ಆದರ್ಶಗಳ ಪಾಠ ಮಕ್ಕಳ ಮುಂದಿನ ಭವಿಷ್ಯಕ್ಕೆ ಸಹಕಾರಿಯಾಗಲಿದೆ ಎಂದು ಹೇಳಿದರು.
ಉಪನ್ಯಾಸಕ ಡಾ. ಸೋಂದಾ ಭಾಸ್ಕರ ಭಟ್, ಜಿಎಸ್‌ಬಿ ಕಾರ್ಯದರ್ಶಿ ಸುರೇಂದ್ರನಾಥ ಶೆಣೈ ಉಪಸ್ಥಿತರಿದ್ದರು.
ಈ ಸಂದರ್ಭ ಮಕ್ಕಳಿಗೆ ನಡೆದ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಯಿತು.
ಮಾತೃ ಮಂಡಳಿಯ ಅಧ್ಯಕ್ಷೆ ಭಾರತಿ ಶೆಣೈ ಸ್ವಾಗತಿಸಿದರು. ಕಾರ್ಯದರ್ಶಿ ರಂಜನಿ ರಾವ್ ವರದಿ ವಾಚಿಸಿದರು. ಸಂಧ್ಯಾ ಮಲ್ಯ ವಂದಿಸಿದರು. ರಾಧಾ ಶೆಣೈ ಕಾರ್ಯಕ್ರಮ ನಿರೂಪಿಸಿದರು.

Kinnigoli-05121703 Kinnigoli-05121704 Kinnigoli-05121705

Comments

comments

Comments are closed.

Read previous post:
Kinnigoli-02121707
ಕಿನ್ನಿಗೋಳಿ ಈದ್ ಮಿಲಾದ್ ಸೌಹಾರ್ದ ಸಮಾವೇಶ

ಕಿನ್ನಿಗೋಳಿ : ಪ್ರವಾದಿಯವರ ಸಂದೇಶ ನಮಗೆಲ್ಲರಿಗೂ ಮಾರ್ಗದರ್ಶಕ. ಅವರ ತತ್ವ ಸಿದ್ಧಾಂತಕ್ಕೆ ಬದ್ದರಾಗಿ ಬದುಕಿದರೆ ಜೀವನ ಪಾವನವಾಗುವುದು ಎಂದು ಪುನರೂರು ಮಸೀದಿಯ ಆಶ್ರಫ್ ರಝಾ ಅಂಜದಿ ಹೇಳಿದರು. ಕಿನ್ನಿಗೋಳಿ ಸಾರ್ವಜನಿಕ...

Close