ಪ್ರತಿಭಾ ಸೌರಭ-2017

ಮೂಲ್ಕಿ : ಬದುಕನ್ನು ಸುಂದರವಾಗಿ ಆಸ್ವಾದಿಸಲು ಕಲಾಪ್ರಾಕಾರಗಳು ಸಹಕಾರಿಯಾಗಿವೆ ಎಂದು ಸಾಹಿತಿ ಹಾಗೂ ಉಡುಪಿ ಮಹಾತ್ಮಗಾಂಧಿ ಸ್ಮಾರಕ ಕಾಲೇಜಿನ ಉಪನ್ಯಾಸಕಿ ಕಾತ್ಯಾಯಿನಿ ಕುಂಜಿಬೆಟ್ಟು ಹೇಳಿದರು.
ಮೂಲ್ಕಿ ವಿಜಯಾಕಾಲೇಜಿನ ಬಯಲು ರಂಗಮಂಟಪದಲ್ಲಿ ಪುನರೂರು ಪ್ರತಿಷ್ಠಾನ ಮತ್ತು ಮೂಲ್ಕಿ ಜನ ವಿಕಾಸ ಸಮಿತಿ ವತಿಯಿಂದ ಮೂಲ್ಕಿ ಹೋಬಳಿ ಮಟ್ಟದ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ನಡೆಸಿದ ಪ್ರತಿಭಾ ಸೌರಭ-2017ನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪರಿಪೂರ್ಣತೆಯ ಗಳಿಕೆ ಕಷ್ಟ.ಆದರೆ ಜೀವನ ಪೂರ್ತಿ ಪರಿಶ್ರಮದ ಕಲಿಕೆ ಇದ್ದರೆ ಪರಿಪೂರ್ಣತೆಯತ್ತ ಸಾಗಲು ಸಾಧ್ಯವಿದೆ.ಶೃಜನಶೀಲಕಲ್ಪನೆ ಮತ್ತು ಪ್ರಾಮಾಣಿಕ ಪರಿಶ್ರಮದ ಮೂಲಕ ಸಾಧಕ ಕಲಾಕಾರರಾಗಲು ಸಾಧ್ಯವಿದೆ ಎಂದರು.
ಸಮಾರಂಭದ ಮುಖ್ಯ ಅತಿಥಿ ಹಾಗೂ ಮೂಲ್ಕಿ ವಿಜಯಾ ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಸುಹಾಸ್ ಹೆಗ್ಡೆ ನಂದಳಿಕೆ ಮಾತನಾಡಿ,ಪ್ರತಿಭಾನ್ವೇಷಣೆಗಳಂತಹ ಸ್ಪರ್ಧೆಗಳಲ್ಲಿ ನಿರಂತರ ಭಾಗವಹಿಸುವುದರ ಜತೆಗೆ ಗೆಲುವಿಗಾಗಿ ಸ್ಪರ್ಧಿಸಬೇಕು ಸೋಲು ಅವಮಾನಕರವಲ್ಲ ಗೆಲುವಿನ ಮೆಟ್ಟಿಲು ಎಂದು ಅರಿತು ಸಾಧನೆ ಮಾಡಬೇಕು ಎಂದರು.
ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ದೇವಳದ ಅನುವಂಶಿಕ ಹಾಗೂ ಆಡಳಿತ ಮೊಕ್ತೇಸರ ಎನ್.ಎಸ್.ಮನೋಹರ ಶೆಟ್ಟಿ ಸಮಾರಂಭದ ಅಧ್ಯಕ್ಷತೆ ವಹಿಸಿ ಶುಭ ಹಾರೈಸಿದರು.
ವಿಜಯಾ ಕಾಲೇಜು ಪ್ರಾಂಶುಪಾಲ ಡಾ.ಕೆ.ನಾರಾಯಣ ಪೂಜಾರಿ,ಕರ್ನಾಟಕ ಬ್ಯಾಂಕ್ ಮೂಲ್ಕಿ ಶಾಖಾ ಪ್ರಬಂಧಕ ಮಂಜುನಾಥ,ಪುನರೂರು ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಶ್ರೇಯಾ ಪುನರೂರು,ಜನ ವಿಕಾಸ ಸಮಿತಿಯ ಅಧ್ಯಕ್ಷ ಪಿ.ಎಸ್.ಸುರೇಶ್ ರಾವ್ ನೀರಳಿಕೆ ಮುಖ್ಯ ಅತಿಥಿಗಳಾಗಿದ್ದರು.
ಪ್ರತಿಷ್ಠಾನದ ಅಧ್ಯಕ್ಷ ದೇವಪ್ರಸಾದ್ ಪುನರೂರು ಸ್ವಾಗತಿಸಿ ಪ್ರಸ್ತಾವಿಸಿದರು.ಸುಚಿತ್ರಾ ಕಾರ್ಯಕ್ರಮ ನಿರ್ವಹಿಸಿದರು.ಭಾಗ್ಯ ರಾಜೇಶ್ ವಂದಿಸಿದರು.
ಮೂಲ್ಕಿ ಹೋಬಳಿಯ 25 ಪ್ರೌಢ ಶಾಲೆಯ 495 ವಿದ್ಯಾರ್ಥಿಗಳು ಪ್ರಬಂಧ,ಭಾಷಣ,ಚಿತ್ರಕಲೆ,ಕಸದಿಂದ ರಸ ಇತ್ಯಾದಿ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದರು.

Mulki-05121702

Comments

comments

Comments are closed.

Read previous post:
Mulki-05121701
ಮುಲ್ಕಿ ಅತಿಥಿ ಗೃಹ ಉದ್ಘಾಟನೆ

ಮುಲ್ಕಿ : ಸಮಾಜದ ಒಳಿತಿಗಾಗಿ ಮಾಡುವ ಸೇವಾ ಕಾರ್ಯಗಳು ಭಗವಂತನ ಕ್ರಪೆಗೆ ಪಾತ್ರವಾಗುತ್ತದೆ ಎಂದು ಶ್ರೀ ಕಾಶೀ ಮಠಾದೀಶ ಶ್ರೀಮದ್ ಸಂಯಮೀಂದ್ರ ತೀರ್ಥ ಸ್ವಾಮೀಜಿಯವರು ಹೇಳಿದರು. ಮುಲ್ಕಿ  ಶ್ರೀ ವೆಂಕಟರಮಣ...

Close