ಕೃಷಿ ಬದುಕು ಹಸನಾಗಲು ಕಿಂಡಿಅಣೆಕಟ್ಟು ರಹದಾರಿ

ಕಿನ್ನಿಗೋಳಿ : ನಮ್ಮ ರಾಜ್ಯದಲ್ಲಿ ವಿದ್ಯಾವಂತರು ಕೃಷಿಯತ್ತ ಮನ ಮಾಡದೆ ವಿದೇಶದ ಕೆಲಸಗಳ ಬಗ್ಗೆ ಗಮನ ನೀಡುತ್ತಿದ್ದಾರೆ. ಹಿರಿಯರು ಯುವ ಜನಾಂಗಕ್ಕೆ ಕೃಷಿ ಬದುಕಿನ ಅರಿವು ಮೂಡಿಸಬೇಕು ಎಂದು ಮುಲ್ಕಿ ಮೂಡಬಿದಿರೆ ಶಾಸಕ ಕೆ. ಅಭಯಚಂದ್ರ ಜೈನ್ ಹೇಳಿದರು.
ಪಟ್ಟೆ ಕ್ರಾಸ್ ಬಳಿ ನಂದಿನಿ ನದಿಯ ಅಣೆಕಟ್ಟುವಿಗೆ ಹಲಗೆ ಹಾಕುವ ಕಾರ್ಯಕ್ರಮ ಹಾಗೂ ಎನ್‌ಎಸ್ ಎಸ್ ವಿದ್ಯಾರ್ಥಿಗಳಿಗೆ ಕೃಷಿ ಬದುಕಿನ ಅರಿವು ಮೂಡಿಸುವ ಕಾರ್ಯಕ್ರಮವನ್ನು ಭಾನುವಾರ ಉದ್ಘಾಟಿಸಿ ಮಾತನಾಡಿ ಸರಕಾರ ಪಶ್ಚಿಮ ವಾಹಿನಿ ಯೋಜನೆಯ ಮೂಲಕ ದಕ್ಷಿಣ ಕನ್ನಡ ಉಡುಪಿ ಜಿಲ್ಲೆಗಳಲ್ಲಿ ಜಲ ಮೂಲಗಳನ್ನು ಹೆಚ್ಚಿಸುವ ಹಲವಾರು ಕಿಂಡಿ ಅಣೆಕಟ್ಟು ನಿರ್ಮಾಣ ಯೋಜನೆಗಳನ್ನು ಮಾಡಿದೆ. ಇದರ ಸಂರಕ್ಷಣೆ ಕಾಲ ಕಾಲದಲ್ಲಿ ವ್ಯವಸ್ಥಿತವಾಗಿ ನೋಡಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯ ಎಂದು ಹೇಳಿದರು.
ಐಕಳ ಗ್ರಾಮ ಪಂಚಾಯಿತಿ ಸದಸ್ಯ ಕಿಂಡಿ ಅಣೆ ಕಟ್ಟು ಸಮಿತಿಯ ಸುಧಾಕರ ಸಾಲ್ಯಾನ್ ಮಾತನಾಡಿ ಅಣೆಕಟ್ಟುವಿಗೆ ಹಲಗೆ ಹಾಕಲು ಸುಮಾರು ೭೦ ಸಾವಿರ ಖರ್ಚು ತಗಲುತ್ತಿದೆ. ಆದರೆ ಸರಕಾರದಿಂದ ೨೪ ಸಾವಿರ ರೂ ಮಾತ್ರ ಬರುತ್ತದೆ. ಇಲ್ಲಿ ಅಣೆಕಟ್ಟುವಿನಲ್ಲಿ ನೀರು ಸಂಗ್ರಹವಾದರೇ ಪರಿಸರದ ಮೂರು ಕಿ. ಮೀ ವ್ಯಾಪ್ತಿಯ ಬಾವಿ ಕೆರೆಗಳ ಒರತೆ ಜಾಸ್ತಿಯಾಗಿ ಕುಡಿಯುವ ನೀರು ಹಾಗೂ ಭತ್ತದ ಕೃಷಿಗೆ ತೋಟಗಳಿಗೆ ನೀರುಣಿಸಲು ಸಹಕಾರಿಯಾಗುತ್ತದೆ ಎಂದು ಹೇಳಿದರು. ಐಕಳ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಸುಂದರಿ, ಸೈಂಟ್ ಅಲೋಶಿಯಸ್ ಕಾಲೇಜು ಎನ್‌ಎಸ್‌ಎಸ್ ಅಧಿಕಾರಿ ಪ್ರೇಮಲತಾ, ಏಳಿಂಜೆ ಯುವಕ ಮಂಡಲದ ಅಧ್ಯಕ್ಷ ದೇವಿ ಪ್ರಸಾದ್ ಶೆಟ್ಟಿ, ಸರ್ವೇಶ್ ಶೆಟ್ಟಿ, ನಾಯಕ ಸುಕೇಶ್ ಶೆಟ್ಟಿ ಉಪಸ್ಥಿತರಿದ್ದರು.
ಶರತ್ ಶೆಟ್ಟಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.
ಮಂಗಳೂರು ಸೈಂಟ್ ಅಲೋಶಿಯಸ್ ಕಾಲೇಜಿನ ಎನ್‌ಎಸ್‌ಎಸ್ ೫೦ ಕ್ಕೂ ಮಿಕ್ಕಿ ವಿದ್ಯಾರ್ಥಿಗಳು ಶ್ರಮದಾನದಲ್ಲಿ ಭಾಗವಹಿಸಿದ್ದರು.

4KinniKindi

Comments

comments

Comments are closed.

Read previous post:
4KinniHaggajaggata
ಹೊನಲು ಬೆಳಕಿನ ಹಗ್ಗ ಜಗ್ಗಾಟ ಪಂದ್ಯಾಟ

 ಕಿನ್ನಿಗೋಳಿ : ಸುಖಾನಂದ ಶೆಟ್ಟಿ ಅವರು ಸಮಾಜದ ಕಷ್ಟ ಸುಖಗಳಿಗೆ ಸದಾ ಸ್ಪಂದಿಸುವ ವ್ಯಕ್ತಿತ್ವ ಉಳ್ಳವರಾಗಿದ್ದು ಹಿಂದುತ್ವಕ್ಕೆ ಕಟಿಬದ್ದರಾಗಿ ತನ್ನ ಬದುಕನ್ನೆ ಮುಡಿಪಾಗಿಸಿದ ದಿವ್ಯ ಚೇತನ ಎಂದು ದ....

Close