ಪಕ್ಷಿಕೆರೆ ಎಸಿಬಿ ದಾಳಿ : ದಾಖಲೆಗಳ ವಶ

ಕಿನ್ನಿಗೋಳಿ : ಹಲವು ಕಡೆಗಳಲ್ಲಿ ಎಸಿಬಿ ಬುಧವಾರ ಮುಂಜಾನೆ ಭ್ರಷ್ಟರ ಮನೆ ಕಛೇರಿಗಳಿಗೆ ದಾಳಿ ಮಾಡಿ ಬಿಸಿ ಮುಟ್ಟಿಸಿದೆ. ಬಂಟ್ವಾಳದ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಪಿ.ಎಫ್.ಮಿರಾಂದ ಅವರ ನಿವಾಸ ಮತ್ತು ಕಚೇರಿಯ ಮೇಲೆ ದಾಳಿ ನಡೆಸಿರುವ ಎಸಿಬಿ ಅಧಿಕಾರಿಗಳು ದಾಖಲೆಗಳನ್ನು ಪರಿಶೀಲನೆ ನಡೆಸಿದ್ದಾರೆ. ಬಂಟ್ವಾಳದ ನಿವಾಸ, ಕಿನ್ನಿಗೋಳಿ ಸಮೀಪದ ಪಕ್ಷಿಕೆರೆ ನಿವಾಸ, ಪಕ್ಷಿಕೆರೆ ಕೃಷಿ ಯಂತ್ರ ಧಾರ ಕಚೇರಿ ಮೇಲೆ ಎಸಿಬಿ ದಾಳಿ ನಡೆಸಿದೆ.
ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಪಿ.ಎಫ್.ಮಿರಾಂದ ಅವರು ಅಕ್ರಮ ಸಂಪತ್ತು ಹಾಗೂ ವಿವಿಧ ಯೋಜನೆಗಳಲ್ಲಿ ಭ್ರಷ್ಟಾಚಾರ ನಡೆಸಿದ್ದಾರೆ ಎಂಬ ಗುಮಾನಿಯ ಮೇಲೆ ಸಾರ್ವಜನಿಕರ ದೂರು ಕೇಳಿಬಂದಿತ್ತು ಎನ್ನಲಾಗಿದೆ.
ಬುಧವಾರ ಮುಂಜಾನೆಯ 6 ಗಂಟೆಯ ಸುಮಾರಿಗೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಮನೆಯವರನ್ನು ಹೊರಕ್ಕೆ ಹೋಗಲು ಬಿಡದೆ ತಪಾಸಣೆ ನಡೆಸಿದ್ದು ಎಂದು ತಿಳಿದುಬಂದಿದೆ.
ಎಸ್‌ಪಿ. ಶ್ರುತಿ, ಡಿವೈಎಸ್‌ಪಿ ಸುಧೀರ್ ಹೆಗ್ಡೆ ಇನ್ಸ್‌ಪೆಕ್ಟರ್ ಯೋಗೀಶ್ ಕುಮಾರ್ ಹಾಗೂ ಸಿಬ್ಬಂಧಿ ವರ್ಗದವರು ಕಾರ್ಯಚರಣೆಯಲ್ಲಿದ್ದರು.

Kinnigoli-13121701 Kinnigoli-13121702

 

Comments

comments

Comments are closed.

Read previous post:
Kinnigoli-0811201701
ಮಾನಸಿಕ ಶಾಂತಿಗಾಗಿ ಧ್ಯಾನ ಶಿಬಿರ

ಕಿನ್ನಿಗೋಳಿ : ಇಂದಿನ ಯಾಂತ್ರಿಕ ಯುಗದಲ್ಲಿ ಪ್ರತಿಯೊಬ್ಬರು ಒತ್ತಡದ ಜೀವನ ಸಾಗಿಸುತ್ತಿದ್ದು ಮಾನಸಿಕ ನೆಮ್ಮದಿ ಕಡಿಮೆಯಾಗುತ್ತಿದೆ. ಹಾಗಾಗಿ ಮನಸ್ಸಿನ ಒತ್ತಡ ಕಡೆಮೆ ಮಾಡುವ ಮಾನಸಿಕ ನೆಮ್ಮದಿ ಹೆಚ್ಚಿಸುವ ತರಬೇತಿಗಳು...

Close