ಯೌವನಸ್ಥರ ಜೀವನ ಸಮಾಜಕ್ಕೆಗೌರವ ತರಲಿ

ಕಿನ್ನಿಗೋಳಿ : ಯೌವನಸ್ಥರ ಜೀವನ ದೇವರಿಗೆ ಮತ್ತು ಸಮಾಜಕ್ಕೆ ಗೌರವ ತರಲಿ ಎಂದು ಹಳೆಯಂಗಡಿ ಸಿ.ಎಸ್.ಐ. ಅಮ್ಮನ್ ಮೆಮೋರಿಯಲ್‌ಚರ್ಚ್ ಸಭಾಪಾಲಕರಾದ ರೆವೆರೆಂಡ್ ಸೆಬೆಸ್ಟಿನ್ ಜತ್ತನ್ನ ಹೇಳಿದರು.
ಹಳೆಯಂಗಡಿ ಚರ್ಚ್ ನಲ್ಲಿ ಪ್ರೊಟೆಸ್ಟೆಂಟ್ ಕ್ರೈಸ್ತರ ಪವಿತ್ರರಾತ್ರಿ ಭೋಜನ ಸಂಸ್ಕಾರದ ಪೂರಕವಾದ ದೃಢೀಕರಣದ ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಿ ಮಾತನಾಡಿದರು.
ಮಡಿಕೇರಿ ಗುಡ್ಡೆ ಸಿಎಸ್‌ಐ ಸುಶಾಂತಿ ಚರ್ಚ್‌ನ ಸಭಾಪಾಲಕರಾದ ರೆವೆರೆಂಡ್ ಪ್ರವೀಣ್ ಮೊಬೆನ್ ದೇವರ ಸಂದೇಶ ನೀಡಿದರು.
ಸಭೆಯ ಒಟ್ಟು 5 ಯೌವನಸ್ಥರಿಗೆ ದೃಢೀಕರಣದ ಸಂಸ್ಕಾರ ಕಾರ್ಯಕ್ರಮ ನಡೆಯಿತು.
ಈ ಸಂದರ್ಭ ಸಭಾಪರಿಪಾಲನಾ ಸಮಿತಿಯ ವಿಜಯ ಪ್ರಕಾಶ್ ಕರ್ಕಡ, ಜೋಫ್ರಿ ಕೋಟ್ಯಾನ್, ಮೊಸಿಸ್ ಪಿ.ಅಮ್ಮಣ್ಣ, ಎಲಿಜಬೆತ್ ಆಂಡ್ರೊ, ಜ್ಯೋತಿ ಸಿಡ್ನಿ ಕರ್ಕಡ, ರೆನಿಟಾ ಕರ್ಕಡ ಮತ್ತಿತರರು ಉಪಸ್ಥಿತರಿದ್ದರು.

Kinnigoli-14121703

Comments

comments

Comments are closed.

Read previous post:
Kinnigoli-14121702
ಕರ್ನಾಟಕ ಸಂಗೀತ ಕಾರ್ಯಕ್ರಮ

ಕಿನ್ನಿಗೋಳಿ : ಪಾವಂಜೆ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯಸ್ವಾಮಿ ದೇವಳದಲ್ಲಿ ಕು.ದಿಶಾ ಅಸ್ರಣ್ಣ, ಕು. ದೀಕ್ಷಾ ಅಸ್ರಣ್ಣ ಮತ್ತು ಬಳಗದವರು ಗುರುವಾರ ಕರ್ನಾಟಕ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು.

Close