ಕಟೀಲಿನಲ್ಲಿ ಡಿ. 31 ಪಂಚೋತ್ಸವ

ಕಿನ್ನಿಗೋಳಿ : ಕಿನ್ನಿಗೋಳಿ ಸ್ವಾಮೀ ವಿವೇಕಾನಂದ ಸೇವಾ ಸಂಸ್ಥೆ ಕಳೆದ ಐದು ವರ್ಷಗಳಿಂದ ಸಾಮಾಜಿಕ, ಸಾಹಿತ್ಯಿಕ, ಶೈಕ್ಷಣಿಕ, ಕ್ರೀಡಾ, ಧಾರ್ಮಿಕ ಹಾಗೂ ಸೇವಾ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದು ಇದೀಗ ಡಿಸೆಂಬರ್ 31 ರಂದು ಕಟೀಲು ಸರಸ್ವತೀ ಸದನದಲ್ಲಿ ಪಂಚೋತ್ಸವ ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದು ಸಂಸ್ಥೆಯ ಅಧ್ಯಕ್ಷ ನಿಡ್ಡೋಡಿ ಚಾವಡಿ ಮನೆ ಜಗನ್ನಾಥ ಶೆಟ್ಟಿ ಕಿನ್ನಿಗೋಳಿಯ ಸಂಸ್ಥೆಯ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು
ಕಳೆದ ಐದು ವರ್ಷದಲ್ಲಿ 124 ವಿವಿಧ ವೈದ್ಯಕೀಯ ಶಿಬಿರಗಳನ್ನು ನಡೆಸಿದ್ದೇವೆ. ಸುಮಾರು ಉಚಿತ 12000 ಕನ್ನಡಕಗಳು, 364ಮಂದಿಗೆ ಕಣ್ಣಿನ ಶಸ್ತ್ರಚಿಕಿತ್ಸೆ, ಹಾಗೂ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ 300 ಕ್ಕೂ ಮಿಕ್ಕಿ ಶ್ರಮಿಕರನ್ನು ಗುರುತಿಸಿ ಗೌರವಿಸಿದೆ. ಡಿ.31 ರಂದು ನಡೆಯುವ ಪಂಚೋತ್ಸವದಲ್ಲಿ ತಾಳಮದ್ದಳೆ, ಹರಿಕಥೆ, ದೇವಿಗೆ ಚಿನ್ನದ ರಥದ ಸೇವೆ ಕಟೀಲು ದೇವಿಯ ಕೃತಿ ಬಿಡುಗಡೆ ಹಾಗೂ ಆಸ್ರಣ್ಣ ಬಂಧುಗಳನ್ನು ಗೌರವಿಸುವ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು. ಸಂಸ್ಥೆಯ ಪಿಆರ್‌ಓ ಸೀತಾರಾಮ ಶೆಟ್ಟಿ ಉಪಸ್ಥಿತರಿದ್ದರು.

Comments

comments

Comments are closed.

Read previous post:
Kinnigoli-15121703
ಮೂರುಕಾವೇರಿ ರಿಕ್ಷಾ ಪಾರ್ಕ್ ಉದ್ಘಾಟನೆ

ಕಿನ್ನಿಗೋಳಿ : ರಿಕ್ಷಾಚಾಲಕರು ಊರಿನ ರಾಯಬಾರಿಗಳು. ಪ್ರಾಮಾಣಿಕತೆಯ ದುಡಿಮೆ ಭವಿಷ್ಯದಲ್ಲಿ ಉತ್ತಮ ಫಲ ನೀಡುವುದು. ಸರಕಾರದ ಯೋಜನೆಗಳನ್ನು ಸದ್ವಿನಿಯೋಗಪಡಿಸಿ ತಮ್ಮ ಜೀವನದ ಭದ್ರತೆ ಮಾಡಿಕೊಳಬಹುದು. ಎಂದು ಕರ್ನಾಟಕ ವಿಧಾನ...

Close