ಹೊಸಕಾಡು ಭಜನಾ ಮಂಡಳಿ ಧಾರ್ಮಿಕ ಸಭೆ

ಕಿನ್ನಿಗೋಳಿ : ಕಲಿಯುಗದಲ್ಲಿ ಭಜನೆ ಮೂಲಕ ಭಗವಂತನನ್ನು ಒಲಿಸಿಕೊಳ್ಳಲು ಸುಲಭ ಸಾಧ್ಯ. ದಾಸ ಶ್ರೇಷ್ಠರು ಭಜನೆಯ ಮೂಲಕವಾಗಿಯೇ ಭಗವಂತನನ್ನು ಸಾಕ್ಷತ್ಕರಿಸಿಕೊಂಡವರು ಅವರ ಆದರ್ಶಗಳು ನಮಗೆ ದಾರಿದೀಪವಾಗಬೇಕು ಎಂದು ಕಟೀಲು ದೇವಳದ ಅರ್ಚಕ ಕಮಲಾದೇವಿ ಪ್ರಸಾದ್ ಆಸ್ರಣ್ಣ ಹೇಳಿದರು.
ಪಕ್ಷಿಕೆರೆ ಹೊಸಕಾಡು ಶ್ರೀ ನಾಗಬ್ರಹ್ಮ ಭಜನಾ ಮಂಡಳಿಯ ರಜತ ಮಹೋತ್ಸವದ ಅಂಗವಾಗಿ ಶನಿವಾರ ನಡೆದ ಧಾರ್ಮಿಕ ಸಭೆಯಲ್ಲಿ ಮಾತನಾಡಿದರು.
ಧಾರ್ಮಿಕ ಚಿಂತಕ ವಾದಿರಾಜ ಉಪಾಧ್ಯಾಯ ಕೊಲಕಾಡಿ ಮಾತನಾಡಿ ಗ್ರಾಮೀಣ ಪ್ರದೇಶದಲ್ಲಿ ಭಜನೆಯ ಮೂಲಕವಾಗಿ ಧಾರ್ಮಿಕತೆ ಹಾಗೂ ಸಂಸ್ಕೃತಿಯ ಸನಾತನ ಧರ್ಮವನ್ನು ಉಳಿಸಿ ಬೆಳಸುವ ಕೆಲಸ ಮಾಡುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.
ಈ ಸಂದರ್ಭ ಭಜನಾ ಮಂಡಳಿಯ ಹಿರಿಯ ಅರ್ಚಕ ಪುರುಷೋತ್ತಮ ಕೋಟ್ಯಾನ್, ಸಾಧಕಿ ಗ್ರೀಷ್ಮಾ ಅವರನ್ನು ಗೌರವಿಸಲಾಯಿತು.
ಮೂಲ್ಕಿ ಸೀಮೆಯ ಅರಸರಾದ ದುಗ್ಗಣ್ಣ ಸಾವಂತರು ಅರಸರು ಅಧ್ಯಕ್ಷತೆ ವಹಿಸಿದ್ದರು.
ಮುಲ್ಕಿ ಮೂಡಬಿದ್ರೆ ಶಾಸಕ ಕೆ. ಅಭಯಚಂದ್ರ ಜೈನ್, ಸುರಗಿರಿ ದೇವಳದ ಅರ್ಚಕ ವಿಶ್ವೇಶ ಭಟ್, ಮಾಜಿ ಶಾಸಕ ಕೆ. ಅಮರನಾಥ ಶೆಟ್ಟಿ, ಸುರಗಿರಿ ದೇವಳದ ಆಡಳಿತ ಮೊಕ್ತೇಸರ ಕೆ. ಸೀತಾರಾಮ ಶೆಟ್ಟಿ, ದ.ಕ. ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಕಸ್ತೂರಿ ಪಂಜ, ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯೆ ಶೈಲಾ ಸಿಕ್ವೇರಾ, ಬಿಜೆಪಿ ಮುಖಂಡ ಉಮನಾಥ ಕೋಟ್ಯಾನ್, ಕಾಂಗ್ರೇಸ್ ಮುಖಂಡ ಮಿಥುನ್ ರೈ, ಉದ್ಯಮಿಗಳಾದ ಪ್ರಥ್ವಿರಾಜ ಆಚಾರ್ಯ, ಗಣೇಶ್ ಶೆಟ್ಟಿ, ಭಜನಾ ಮಂಡಳಿ ಅಧ್ಯಕ್ಷ ಕಿಶೋರ್ ಕುಮಾರ್, ಗೌರವಾಧ್ಯಕ್ಷ ಸುರೇಶ್ ಶೆಟ್ಟಿಗಾರ್, ಪ್ರಧಾನ ಕಾರ್ಯದರ್ಶಿ ಹರೀಶ್ ಜೆ. ಸಾಲ್ಯಾನ್, ಪ್ರಕಾಶ್ ಕುಲಾಲ್ ಉಪಸ್ಥಿತರಿದ್ದರು.
ಮಂಡಳಿಯ ಗೌರವ ಸಲಹೆಗಾರ ಧನಂಜಯ ಶೆಟ್ಟಿಗಾರ್ ಸ್ವಾಗತಿಸಿದರು. ಭಾಸ್ಕರ ಬಂಗೇರ ಬಹುಮಾನಿತರ ವಿವರ ತಿಳಿಸಿದರು. ಜಯಾನಂದ ಕಾರ್ಯಕ್ರಮ ನಿರೂಪಿಸಿದರು.

Kinnigoli-15121707

Comments

comments

Comments are closed.

Read previous post:
Kinnigoli-15121706
ಬಾಳಿಕೆಯ ಕಾಂಕ್ರಿಟ್ ರಸ್ತೆ ನಿರ್ಮಾಣ

ಕಿನ್ನಿಗೋಳಿ : ಗ್ರಾಮೀಣ ಪ್ರದೇಶಗಳನ್ನು ಅಭಿವೃದ್ಧಿ ಪಡಿಸಲು ರಾಜ್ಯ ಸರ್ಕಾರ ಹೆಚ್ಚು ಬಾಳಿಕೆಯ ಕಾಂಕ್ರಿಟ್ ರಸ್ತೆಗಳ ನಿರ್ಮಾಣ ಮಾಡುತ್ತಿದೆ ಎಂದು ಮುಲ್ಕಿ ಮೂಡಬಿದಿರೆ ಶಾಸಕ ಕೆ. ಅಭಯಚಂದ್ರ ಜೈನ್...

Close