ಕಟೀಲು ಪ್ರಾಥಮಿಕ ಶಾಲಾ ವಾರ್ಷಿಕೋತ್ಸವ

ಕಿನ್ನಿಗೋಳಿ : ವಿದ್ಯಾರ್ಥಿಗಳು ಬುದ್ದಿವಂತಿಕೆಯೊಂದಿಗೆ ಹೃದಯವಂತಿಕೆ ಕೂಡಾ ಬೆಳೆಸಿಕೊಳ್ಳಬೇಕು ವಾಟ್ಸಪ್ ಬಳಕೆಯಿಂದ ಒಳಿತಾಗಲಿ ಹಾಳಾಗುವುದು ಬೇಡ, ರಾಷ್ಟ್ರ ಪ್ರೇಮ ನೀರಿನ ಮಿತ ಬಳಕೆ ಬಗ್ಗೆ ಜಾಗೃತಿಯನ್ನು ಮಕ್ಕಳಲ್ಲಿ ಬೆಳೆಸೋಣ ಎಂದು ಪೆರ್ಮನ್ನೂರು ಸರಕಾರಿ ಪ್ರೌಢಶಾಲಾ ಶಿಕ್ಷಕಿ ವಿಜಯಲಕ್ಷ್ಮೀ ಹೇಳಿದರು.
ಕಟೀಲು ಶ್ರೀದುರ್ಗಾಪರಮೇಶ್ವರೀ ಪದವಿ ಪೂರ್ವ ಕಾಲೇಜಿನ ಶ್ರೀ ವಿದ್ಯಾ ಸದನದಲ್ಲಿ ಭಾನುವರ ನಡೆದ ಕಟೀಲು ಅನುದಾನಿತ ಶ್ರೀ ದುರ್ಗಾಪರಮೇಶ್ವರೀ ಹಿರಿಯ ಪ್ರಾಥಮಿಕ ಶಾಲೆ ಮತ್ತು ಶ್ರೀ ದುರ್ಗಾಪರಮೇಶ್ವರೀ ಆಂಗ್ಲ ಮಾಧ್ಯಮ ಪೂರ್ವ ಪ್ರಾಥಮಿಕ – ಕಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವ ಸಮಾರಂಭದಲ್ಲಿ ಮಾತನಾಡಿದರು.
ಈ ಸಂದರ್ಭ ರಾಷ್ಟ್ರ ಮಟ್ಟದ ಯೋಗ ಸಾಧಕಿ ಯಾ, ಹಾಗೂ ಯೋಗ ಶಿಕ್ಷಕ ಹರಿರಾಜ ಶೆಟ್ಟಿಗಾರ್ ಅವರನ್ನು ಸನ್ಮಾನಿಸಲಾಯಿತು.
ಕಟೀಲು ದೇವಳ ಅನುವಂಶಿಕ ಮೊಕ್ತೇಸರ ವಾಸುದೇವ ಆಸ್ರಣ್ಣ ಶುಭಾಶಂಸನೆಗೈದರು.
ಕಟೀಲು ದೇವಳ ಅರ್ಚಕ ಶ್ರೀ ಹರಿನಾರಾಯಣದಾಸ ಆಸ್ರಣ್ಣ, ಉದ್ಯಮಿ ಜೆ. ಸಿ. ಕುಮಾರ್, ಉದ್ಯಮಿ ಗೀರೀಶ್ ಎಂ. ಶೆಟ್ಟಿ , ಸುಧೀರ್ ಶೆಟ್ಟಿ ಕೊಡೆತ್ತೂರು ಗುತ್ತು, ಕಟೀಲು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗೀತಾ ಸುವರ್ಣ, ಉಪಾಧ್ಯಕ್ಷ ಕಿರಣ್ ಕುಮಾರ್ ಶೆಟ್ಟಿ, ದ.ಕ. ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಕಸ್ತೂರಿ ಪಂಜ, ತಾ. ಪಂ. ಸದಸ್ಯ ಸುಕುಮಾರ ಸನಿಲ್, ಮಾಜಿ ಜಿ. ಪಂ. ಸದಸ್ಯ ಈಶ್ವರ್ ಕಟೀಲು, ಉದ್ಯಮಿಗಳಾದ ದೊಡ್ಡಯ್ಯ ಮೂಲ್ಯ, ಅಭಿಲಾಷ್ ಶೆಟ್ಟಿ, ಕಟೀಲು ಸ್ಪೋಟ್ಸ್ ಕ್ಲಬ್ ಅಧ್ಯಕ್ಷ ಕೇಶವ ಕಟೀಲು, ಪ್ರವೀಣ್ ಕುಮಾರ್ ಕಟೀಲು, ಸಿಆರ್‌ಪಿ ಅನಿತಾ ಪಿಂಟೋ, ಶಿಕ್ಷ ರಕ್ಷಕ ಸಂಘದ ಅಧ್ಯಕ್ಷ ವೆಂಕಟರಮಣ ಹೆಗಡೆ, ಪ್ರಸನ್ನ ರಾವ್, ಧನ್ಯ ಶ್ರೀ ಉಪಸ್ಥಿತರಿದ್ದರು.
ಆಂಗ್ಲ ಮಾಧ್ಯಮ ಶಾಲಾ ಮುಖ್ಯ ಶಿಕ್ಷಕಿ ವಿಜಯಲಕ್ಷ್ಮೀ ರಾವ್ ಸ್ವಾಗತಿಸಿದರು. ಕನ್ನಡ ಮಾಧ್ಯi ಶಾಲಾ ಮುಖ್ಯ ಶಿಕ್ಷಕಿ ಸರೋಜಿನಿ ವರದಿ ವಾಚಿಸಿದರು. ಚಂದ್ರಶೇಖರ್ ಕಾರ್ಯಕ್ರಮ ನಿರೂಪಿಸಿದರು.

Kinnigoli-15121711

ಫೋಟೋ-೧೦ಕಿನ್ನಿಕಟೀಲುಶ್ರೇಯಾ

Comments

comments

Comments are closed.

Read previous post:
Kinnigoli-15121710
ಕೆಮ್ರಾಲ್ ಆರ್‌ಎಸ್‌ಎಸ್ ಪಥಸಂಚಲನ

ಕಿನ್ನಿಗೋಳಿ : ಪಕ್ಷಿಕೆರೆ ಹೊಸಕಾಡು ಪೆಟ್ರೋಲ್ ಪಂಪ್ ಬಳಿಯಿಂದ ಕೆಮ್ರಾಲ್ ತನಕ ಆರ್‌ಎಸ್‌ಎಸ್ ಘಟಕದ ವತಿಯಿಂದ ಗಣ ವೇಷಧಾರಿಗಳ ಪಥಸಂಚಲನ ನಡೆಯಿತು.  

Close