ಕೆಮ್ರಾಲ್ ಗ್ರಾಮ ಪಂಚಾಯತ್ ಸಭೆ

ಕಿನ್ನಿಗೋಳಿ : ಕೆಮ್ರಾಲ್ ಗ್ರಾಮ ಪಂಚಾಯಿತಿಯ ೨೦೧೭-೧೮ ನೇ ಸಾಲಿನ ದ್ವಿತೀಯ ಹಂತದ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಸಾಮಾಜಿಕ ಪರಿಶೋಧನಾ ವಿಶೇಷ ಗ್ರಾಮ ಸಭೆ ಗುರುವಾರ ಗ್ರಾಮ ಪಂಚಾಯತ್ ಸಮುದಾಯ ಭವನದಲ್ಲಿ ನಡೆಯಿತು.
ಉದ್ಯೋಗ ಖಾತರಿ ಯೋಜನೆಯ ಉದ್ಯೋಗ ಖಾತರಿ ಕಾರ್ಡ್‌ದಾರರು ಹಾಗೂ ಪಹಣಿ ಪತ್ರಗಳ ಸಮಸ್ಯೆಯಿಂದ ತೊಂದರೆಯಾಗಿದೆ ಈ ಬಗ್ಗೆ ಶೀಘ್ರ ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಲೆಕ್ಕ ಪರಿಶೋಧನಾ ಸಭೆಯಲ್ಲಿ ಆಗ್ರಹಿಸಿದರು.
ತಾಲೂಕು ಸಂಯೋಜಕಿ ಪವಿತ್ರಾ ವರದಿ ಮಂಡಿಸಿ ಪ್ರಸ್ತುತ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 410 ಉದ್ಯೋಗ ಚೀಟಿಗಳಿದ್ದು ೨೫೦ ಹೆಚ್ಚು ಕುಟುಂಬಗಳು ನೊಂದಣಿ ಮಾಡಿಕೊಂಡಿವೆ. 46 ಕಾಮಗಾರಿಗಳು ನಡೆದಿವೆ. ಸಾಮಗ್ರಿ ಹಾಗೂ ಕೂಲಿ ವೆಚ್ಚ ಸೇರಿ ಒಟ್ಟು 1788707 ಖರ್ಚು ಆಗಿದೆ. 6 ಕಾಮಗಾರಿಗಳ ಹಣವು ಕೆಲವೊಂದು ತಾಂತ್ರಿಕ ಕಾರಣದಿಂದ ಮಂಜೂರು ಆಗಿಲ್ಲ ಎಂದು ತಿಳಿಸಿದರು.
ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಕಸ್ತೂರಿ ಪಂಜ ಮಾತನಾಡಿ ಕಟೀಲು ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಉದ್ಯೋಗ ಖಾತರಿ ಯೋಜನೆಯಲ್ಲಿ ಕೆಮ್ರಾಲ್ ಗಾಮ ಪಂಚಾಯಿತಿ ಒಂದನೇ ಸ್ಥಾನದಲ್ಲಿದ್ದು ಉತ್ತಮ ಸಾಧನೆ ಮಾಡಿದೆ. ಎಂದು ಹೇಳಿದರು. ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ಯಶೋಧರ್ ನೋಡಲ್ ಅಧಿಕಾರಿಯಾಗಿದ್ದರು.
ಕೆಮ್ರಾಲ್ ಗ್ರಾಮ ಪಂಚಾಯಿತಿ ಅಧ್ಯಕ್ಷ ನಾಗೇಶ್ ಎಂ. ಅಂಚನ್, ಉಪಾಧ್ಯಕ್ಷೆ ತುಳಸಿ ಶೆಟ್ಟಿಗಾರ್, ಮಂಗಳೂರು ತಾ. ಪಂ. ಸದಸ್ಯೆ ವಜ್ರಾಕ್ಷಿ ಶೆಟ್ಟಿ , ಗ್ರಾಮ ಪಂಚಾಯಿತಿ ಸದಸ್ಯರಾದ ಪ್ರಮೀಳಾ ಶೆಟ್ಟಿ, ಲೀಲಾ, ರೇವತಿ ಶೆಟ್ಟಿಗಾರ್, ಮಮತಾ ಅಮೀನ್, ಮಾಲತಿ ಆಚಾರ್ಯ, ಮಯ್ಯದ್ದಿ ಉಪಸ್ಥಿತರಿದ್ದರು.
ಪಿಡಿಒ ರೆಮಶ್ ರಾಥೋಡ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

Kinnigoli-15121701

Comments

comments

Comments are closed.

Read previous post:
Kinnigoli-14121703
ಯೌವನಸ್ಥರ ಜೀವನ ಸಮಾಜಕ್ಕೆಗೌರವ ತರಲಿ

ಕಿನ್ನಿಗೋಳಿ : ಯೌವನಸ್ಥರ ಜೀವನ ದೇವರಿಗೆ ಮತ್ತು ಸಮಾಜಕ್ಕೆ ಗೌರವ ತರಲಿ ಎಂದು ಹಳೆಯಂಗಡಿ ಸಿ.ಎಸ್.ಐ. ಅಮ್ಮನ್ ಮೆಮೋರಿಯಲ್‌ಚರ್ಚ್ ಸಭಾಪಾಲಕರಾದ ರೆವೆರೆಂಡ್ ಸೆಬೆಸ್ಟಿನ್ ಜತ್ತನ್ನ ಹೇಳಿದರು. ಹಳೆಯಂಗಡಿ ಚರ್ಚ್...

Close