ಮೂರುಕಾವೇರಿ ರಿಕ್ಷಾ ಪಾರ್ಕ್ ಉದ್ಘಾಟನೆ

ಕಿನ್ನಿಗೋಳಿ : ರಿಕ್ಷಾಚಾಲಕರು ಊರಿನ ರಾಯಬಾರಿಗಳು. ಪ್ರಾಮಾಣಿಕತೆಯ ದುಡಿಮೆ ಭವಿಷ್ಯದಲ್ಲಿ ಉತ್ತಮ ಫಲ ನೀಡುವುದು. ಸರಕಾರದ ಯೋಜನೆಗಳನ್ನು ಸದ್ವಿನಿಯೋಗಪಡಿಸಿ ತಮ್ಮ ಜೀವನದ ಭದ್ರತೆ ಮಾಡಿಕೊಳಬಹುದು. ಎಂದು ಕರ್ನಾಟಕ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಹೇಳಿದರು.
ಕಿನ್ನಿಗೋಳಿ ಸಮೀಪದ ಮೂರುಕಾವೇರಿಯ ರಿಕ್ಷಾ ಪಾರ್ಕ್‌ನಲ್ಲಿ ಐವನ್ ಡಿಸೋಜ ಅವರ 2 ಲಕ್ಷರೂ ಅನುದಾನದಲ್ಲಿ ಶುಕ್ರವಾರ ರಿಕ್ಷಾಪಾರ್ಕ್‌ಗೆ ತಗಡು ಚಪ್ಪರ ಹಾಗೂ ಇಂಟರ್‌ಲಾಕ್ ಉದ್ಘಾಟಿಸಿ ಮಾತನಾಡಿ ಮೂಲ್ಕಿ ಮೂಡಬಿದಿರೆ ಕ್ಷೇತ್ರದಲ್ಲಿ ಈಗಾಗಲೇ ಒಂಬತ್ತು ರಿಕ್ಷಾ ಪಾರ್ಕ್‌ಗೆ ತಗಡು ಚಪ್ಪರ ವ್ಯವಸ್ಥೆ ಆಗಿದೆ ಇನ್ನೂ ಹಲವು 10 ರಿಕ್ಷಾ ಪಾರ್ಕ್ ನಿರ್ಮಾಣ ಮಾಡಲಾಗುವುದು. ಮುಂದಿನ ದಿನಗಳಲ್ಲಿ ತಾಲೂಕಿಗೆ ಒಂದು ರಿಕ್ಷಾ ಭವನ, ರಿಕ್ಷಾ ಚಾಲಕರ ಭದ್ರತೆಯ ದೃಷ್ಠಿಯಲ್ಲಿ ಮುಂದಿನ ಬಜೆಟ್‌ನಲ್ಲಿ ರಿಕ್ಷಾ ಚಾಲಕರಿಗೆ ಪಿಂಚಣಿ ಯೋಜನೆ ಹಾಗೂ ಸ್ವಸಹಾಯ ಸಂಘ ರಚನೆ ಮಾಡಲಾಗುವುದು, ಅಶಕ್ತ ಅನಾರೋಗ್ಯ ರಿಕ್ಷಾಚಾಲಕರಿಗೆ ಈಗಾಲೇ ಮುಖ್ಯ ಮಂತ್ರಿ ಪರಿಹಾರ ನಿಧಿಯಿಂದ ಹಣ ಮಂಜೂರು ಆಗಿದೆ. ಕಾರ್ಮಿಕ ಇಲಾಖೆಯ ಮೂಲಕವಾಗಿ ವಿಮಾ ಯೋಜನೆ ಮಾಡಲಾಗುವುದು ಎಂದು ಹೇಳಿದರು.
ಮೆನ್ನ ಬೆಟ್ಟು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸರೋಜಿನಿ ಗುಜರನ್, ಉಪಾಧ್ಯಕ್ಷ ಮೋರ್ಗನ್ ವಿಲಿಯಂ ಸಾಲಿನ್ಸ್, ಎಪಿಎಂಸಿ ಅಧ್ಯಕ್ಷ ಪ್ರಮೋದ್ ಕುಮಾರ್, ರಿಕ್ಷಾ ಚಾಲಕರ ಸಂಘದ ಗೌರವಾಧ್ಯಕ್ಷ ಕೆ. ಭುವನಾಭಿರಾಮ ಉಡುಪ, ಕಾಂಗ್ರೆಸ್ ಮುಖಂಡ ಗುರುರಾಜ ಎಸ್ ಪೂಜಾರಿ, ಮಾಜಿ ತಾ. ಪಂ. ಸದಸ್ಯ ಪ್ರಕಾಶ್ ಉಪಸ್ಥಿತರಿದ್ದರು.
ರಿಕ್ಷಾ ಚಾಲಕರ ಸಂಘದ ಅಧ್ಯಕ್ಷ ಜೇಮ್ಸ್ ಮಾರ್ಟಿಸ್ ಪ್ರಸ್ತಾವನೆಗೈದರು. ಕಾರ್ಯದರ್ಶಿ ಶಶಿಕಾಂತ್ ರಾವ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.
Kinnigoli-15121703 Kinnigoli-15121704

Comments

comments

Comments are closed.

Read previous post:
Kinnigoli-15121702
ಶುದ್ದ ಕುಡಿಯುವ ನೀರಿನ ಘಟಕಕ್ಕೆ ಭೇಟಿ

ಕಿನ್ನಿಗೋಳಿ : ದ. ಕ ಜಿಲ್ಲೆಯಲ್ಲಿ 132 ಶುದ್ದ ಕುಡಿಯುವ ನೀರಿನ ಘಟಕ ಅನುಷ್ಟಾನವಾಗಲಿದ್ದು ಅದರಲ್ಲಿ 100 ಘಟಕಗಳು ಸ್ಥಾಪನೆಯಾಗಿದೆ, ತಾಂತ್ರಿಕ ತೊಂದರೆಗಳಿಂದ ಹಿನ್ನಡೆಯಾಗಿದ್ದು ಮುಂದಿನ ದಿನಗಳಲ್ಲಿ ಎಲ್ಲಾ ಘಟಕಗಳನ್ನು ಆರಂಭಿಸಲಾಗುವುದು...

Close