ಬಾಳಿಕೆಯ ಕಾಂಕ್ರಿಟ್ ರಸ್ತೆ ನಿರ್ಮಾಣ

ಕಿನ್ನಿಗೋಳಿ : ಗ್ರಾಮೀಣ ಪ್ರದೇಶಗಳನ್ನು ಅಭಿವೃದ್ಧಿ ಪಡಿಸಲು ರಾಜ್ಯ ಸರ್ಕಾರ ಹೆಚ್ಚು ಬಾಳಿಕೆಯ ಕಾಂಕ್ರಿಟ್ ರಸ್ತೆಗಳ ನಿರ್ಮಾಣ ಮಾಡುತ್ತಿದೆ ಎಂದು ಮುಲ್ಕಿ ಮೂಡಬಿದಿರೆ ಶಾಸಕ ಕೆ. ಅಭಯಚಂದ್ರ ಜೈನ್ ಹೇಳಿದರು.
ಹಳೆಯಂಗಡಿ ಸಾಗ್ ಮಸೀದಿಯ ಬಳಿ ನಬಾರ್ಡ್ ಯೋಜನೆಯ ರೂ ೫೦ಲಕ್ಷ ವೆಚ್ಚದ ಕಾಂಕ್ರೀಟ್ ರಸ್ತೆ ಕಾಮಗಾರಿಗೆ ಶನಿವಾರ ಗುದ್ದಲಿಪೂಜೆ ನೆರವೇರಿಸಿ ಮಾತನಾಡಿದರು.
ಮೂಲ್ಕಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಧನಂಜಯ ಮಟ್ಟು ಮಾತನಾಡಿ ನುಡಿದಂತೆ ನಡೆವ ನಮ್ಮ ಶಾಸಕರ ಸ್ಪಂದನೆಯಿಂದ ಬಹಳಷ್ಟು ಕಾiಗಾರಿಗಳು ಮೂಲ್ಕಿ ಹೋಬಳಿಯಲ್ಲಿ ನಡೆದಿವೆ. ಶಾಸಕರ ದಿಟ್ಟ ನಿಲುವಿನ ಕಾರ್ಯ ಅಭಿನಂದನೀಯ ಎಂದರು.
ಸಾಗ್ ಮಸೀದಿಯ ಧರ್ಮಗುರು ಇಬ್ರಾಹಿಂ ಮದನಿ ದುವಾ ಪ್ರಾರ್ಥನೆ ನಡೆಸಿದರು.
ಈ ಸಂದರ್ಭ ಹಳೆಯಂಗಡಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜಲಜಾ, ಉಪಾಧ್ಯಕ್ಷೆ ಪದ್ಮಾವತಿ ಶೆಟ್ಟಿ, ಕೆ.ಪಿ.ಸಿ.ಸಿ ಸದಸ್ಯ ಎಚ್. ವಸಂತ ಬೆರ್ನಾಡ್, ಜಿ.ಪಂ ಇಂಜಿನಿಯರ್ ಪ್ರಶಾಂತ್ ಆಳ್ವ್ವ, ಕಾಂಗ್ರೆಸ್ ನಾಯಕರಾದ ಮನ್ಸೂರ್ ಸಾಗ್, ಬಿಎಂ ಅಸಿಫ್, ಸಾಹುಲ್ ಹಮೀದ್ ಕದಿಕೆ, ಅಬ್ದುಲ್ ಖಾದರ್, ಅಬ್ದುಲ್ ಅಜೀಜ್, ಅಶೋಕ್ ಪೂಜಾರ್, ಅಬ್ದುಲ್ ರಜಾಕ್ ಕದಿಕೆ, ಧರ್ಮಾನಂದ ಶೆಟ್ಟಿಗಾರ್, ಮೈಯದ್ದಿ ಪಕ್ಷಿಕೆರೆ, ಗುತ್ತಿಗೆದಾರ ಹಾಜಿ ಅಬ್ಬಾಸ್ ಆಲಿ ಮತ್ತಿತರರು ಉಪಸ್ಥಿತರಿದ್ದರು.

Kinnigoli-15121706

Comments

comments

Comments are closed.

Read previous post:
Kinnigoli-15121705
ಮೂರುಕಾವೇರಿ ಪರಿಸರ ಸ್ವಚ್ಚತೆ

ಕಿನ್ನಿಗೋಳಿ : ಶುದ್ದ ಪರಿಸರ, ಸ್ವಚ್ಚತೆಗಾಗಿ ಸಂಘಟಿತರಾಗಿ ಕೆಲಸ ಮಾಡಿದಾಗ ಸಮಾಜದ ಸ್ವಾಸ್ಥತೆ ಹೆಚ್ಚಾಗುತ್ತದೆ ಎಂದು ಕಿನ್ನಿಗೋಳಿ ರೋಟರಿ ಕ್ಲಬ್ ಅಧ್ಯಕ್ಷೆ ಸೆವರಿನ್ ಲೋಬೊ ಹೇಳಿದರು. ಕಿನ್ನಿಗೋಳಿ ಸಮೀಪದ...

Close