ಶುದ್ದ ಕುಡಿಯುವ ನೀರಿನ ಘಟಕಕ್ಕೆ ಭೇಟಿ

ಕಿನ್ನಿಗೋಳಿ : ದ. ಕ ಜಿಲ್ಲೆಯಲ್ಲಿ 132 ಶುದ್ದ ಕುಡಿಯುವ ನೀರಿನ ಘಟಕ ಅನುಷ್ಟಾನವಾಗಲಿದ್ದು ಅದರಲ್ಲಿ 100 ಘಟಕಗಳು ಸ್ಥಾಪನೆಯಾಗಿದೆ, ತಾಂತ್ರಿಕ ತೊಂದರೆಗಳಿಂದ ಹಿನ್ನಡೆಯಾಗಿದ್ದು ಮುಂದಿನ ದಿನಗಳಲ್ಲಿ ಎಲ್ಲಾ ಘಟಕಗಳನ್ನು ಆರಂಭಿಸಲಾಗುವುದು ಎಂದು ದ. ಕ. ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಗೋಪಾಲಕೃಷ್ಣ ಹೇಳಿದರು.
ಗುರುವಾರ ಕೆಮ್ರಾಲ್ ಗ್ರಾಮ ಪಂಚಾಯಿತಿಯ ರಾಷ್ಟ್ರೀಯ ಗ್ರಾಮೀಣ ಕುಡಿಯುವ ನೀರಿನ ಯೋಜನೆಯ ಗ್ರಾಮೀಣಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆ ಶುದ್ಧ ನೀರು ಘಟಕಕ್ಕೆ ಭೇಟಿ ನೀಡಿ ಮಾತನಾಡಿದರು.
ದ.ಕ. ಜಿಲ್ಲಾ ಪಂಚಾಯಿತಿ ಸದನ ಸಮಿತಿಯ ಅಧ್ಯಕ್ಷ ಜನಾರ್ದನ ಗೌಡ ಮಾತನಾಡಿ ಈ ಯೋಜನೆ ಎರಡು ವರ್ಷದಿಂದ ನನೆಗುದಿಗೆ ಬಿದ್ದಿದ್ದು ಹೆಚ್ಚಿನ ಕಡೆಗಳಲ್ಲಿ ಕೆಲಸ ನಡೆಯುತ್ತಿದ್ದು ಕಳೆದ ಮೂರು ದಿನಗಳಿಂದ ಜಿಲ್ಲೆಯಲ್ಲಿ ಸಂಚಾರ ಮಾಡಿ ಎಲ್ಲಾ ಘಟಕಗಳನ್ನು ಪರೀಶೀಲಾಗುತ್ತಿದೆ ಹಾಗೂ ಕುಂದು ಕೊರತೆಗಳನ್ನು ಸರಿಪಡಿಸಲಾಗುತ್ತಿದೆ ಎಂದು ಹೇಳಿದರು.
ದ.ಕ. ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಕಸ್ತೂರಿ ಪಂಜ, ಸಮಿತಿಯ ಸದಸ್ಯರಾದ ಸುಚರಿತ ಶೆಟ್ಟಿ, ಜಯಶ್ರೀ, ಶಯಾನ ಜಯಾನಂದ, ತಾ. ಪಂ, ಸದಸ್ಯೆ ವಜ್ರಾಕ್ಷಿ ಶೆಟ್ಟಿ, ಕೆಮ್ರಾಲ್ ಗ್ರಾಮ ಪಂಚಾಯಿತಿ ಅಧ್ಯಕ್ಷ ನಾಗೇಶ್ ಎಂ. ಬೊಳ್ಳೂರು, ಉಪಾಧ್ಯಕ್ಷೆ ತುಳಸಿ ಶೆಟ್ಟಿಗಾರ್, ಸದಸ್ಯರಾದ ಪ್ರಮೀಳಾ ಶೆಟ್ಟಿ, ರೇವತಿ ಶೆಟ್ಟಿಗಾರ್, ಮಮತಾ ಅಮೀನ್, ಮಾಲತಿ ಆಚಾರ್ಯ, ಮಯ್ಯದ್ದಿ, ಕೆಮ್ರಾಲ್ ಪಡಿಒ ರಮೇಶ ರಾಥೋಡ್, ಮಾಜಿ ತಾ. ಪಂ. ಸದಸ್ಯೆ ಬೇಬಿ ಕೋಟ್ಯಾನ್ ಹಾಗೂ ಜಿಲ್ಲಾ ಪಂಚಾಯತ್ ಅಧಿಕಾರಿಗಳು ಗುತ್ತಿಗೆದಾರರು ಉಪಸ್ಥಿತರಿದ್ದರು
Kinnigoli-15121702

Comments

comments

Comments are closed.

Read previous post:
Kinnigoli-15121701
ಕೆಮ್ರಾಲ್ ಗ್ರಾಮ ಪಂಚಾಯತ್ ಸಭೆ

ಕಿನ್ನಿಗೋಳಿ : ಕೆಮ್ರಾಲ್ ಗ್ರಾಮ ಪಂಚಾಯಿತಿಯ ೨೦೧೭-೧೮ ನೇ ಸಾಲಿನ ದ್ವಿತೀಯ ಹಂತದ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಸಾಮಾಜಿಕ ಪರಿಶೋಧನಾ ವಿಶೇಷ ಗ್ರಾಮ...

Close