ಹಳೆಯಂಗಡಿ : ನರೇಗಾ ಗ್ರಾಮ ಸಭೆ

ಕಿನ್ನಿಗೋಳಿ: ಅಧಿಕಾರಿಗಳು ಹಾಗೂ ಇಂಜಿನಿಯರ್‌ಗಳ ಕೊರತೆಯಿಂದ ಬಿಲ್ಲುಗಳು ಸಮಯಕ್ಕೆ ಸರಿಯಾಗಿ ಆಗುವುದಿಲ್ಲ. ಪಂಚಾಯಿತಿಗೆ ಖಾಯಂ ಆಗಿ ಅಧಿಕಾರಿಗಳನ್ನು ನೇಮಿಸಬೇಕು ಆಗ ಮಾತ್ರ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ (ನರೇಗಾ) ಯೋಜನೆ ಯಶಸ್ವಿಯಾಗುವುದು ಎಂದು ಹಳೆಯಂಗಡಿ ಗ್ರಾಮಸ್ಥ ಕೃಷಿಕರಾದ ರವಿ ಕೊಳುವೈಲು ಅವರು ಮಂಗಳವಾರ ನಡೆದ ಹಳೆಯಂಗಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನರೇಗಾ ಯೋಜನೆಯ ಸಾಮಾಜಿಕ ಪರಿಶೋಧನಾ ಗ್ರಾಮ ಸಭೆಯಲ್ಲಿ ಆಗ್ರಹಿಸಿದರು.
ಅನುದಾನದಲ್ಲಿರುವ 60:40 ಅನುಪಾತವನ್ನು ಬದಲಾಯಿಸಿ ಇದರಿಂದ ಯೋಜನೆಯಲ್ಲಿ ನಿರ್ದಿಷ್ಟವಾಗಿ ಸಾರ್ವಜನಿಕ ಕಾಮಗಾರಿಗೆ ತೊಂದರೆ ಆಗುತ್ತಿದೆ ಎಂದು ಗ್ರಾಮಸ್ಥರು ಹೇಳಿದರು. ಇದಕ್ಕೆ ಪಂ.ಸದಸ್ಯರಾದ ವಿನೋದ್‌ಕುಮಾರ್ ಕೊಳುವೈಲು, ಅಬ್ದುಲ್ ಖಾದರ್, ತಾ.ಪಂ. ಸದಸ್ಯ ಜೀವನ್‌ಪ್ರಕಾಶ್ ಕಾಮೆರೊಟ್ಟು ಧ್ವನಿಗೂಡಿಸಿದರು.
ತೋಟಗಾರಿಕಾ ಇಲಾಖೆಯ ಅಧಿಕಾರಿಗಳ ಅಸಹಕಾರದಿಂದ ಹಣವನ್ನು ಪಡೆಯಲು ಬಹಳಷ್ಟು ತೊಂದರೆಯಾಗಿದೆ. ಈ ಬಗ್ಗೆ ಹಲವು ಬಾರಿ ಮಂಗಳೂರಿನ ಕಚೇರಿಗೆ ಅಲೆದಾಡಿದ್ದೇನೆ ಯೋಜನೆಯ ಬಗ್ಗೆಯೇ ಜನರಿಗೆ ಸಂಶಯ ಮೂಡುವಂತಾಗಿದೆ. ಎಂದು ತಮ್ಮ ಖಾತೆಗೆ ಹಣ ಜಮೆಯ ವಿಳಂಬದ ಬಗ್ಗೆ ಗ್ರಾಮಸ್ಥ ಮೋಹನ್ ಬಂಗೇರ ಪ್ರಶ್ನಿಸಿದರು.
ಮಂಗಳೂರು ನೀರು ಮತ್ತು ನೈರ್ಮಲ್ಯ ಉಪ ವಿಭಾಗದ ಸಹಾಯಕ ಇಂಜಿನಿಯರ್ ಪ್ರಭಾಕರ್ ನೋಡೆಲ್ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದರು.
ಹಳೆಯಂಗಡಿ ಗ್ರಾ.ಪಂ. ಅಧ್ಯಕ್ಷೆ ಜಲಜಾ, ಉಪಾಧ್ಯಕ್ಷೆ ಪದ್ಮಾವತಿ ಶೆಟ್ಟಿ, ಸದಸ್ಯರಾದ ಎಚ್.ವಸಂತ ಬೆರ್ನಾಡ್, ಅಬ್ದುಲ್ ಖಾದರ್, ವಿನೋದ್‌ಕುಮಾರ್ ಕೊಳುವೈಲು, ಅಬ್ದುಲ್ ಅಜೀಜ್, ಜಯಂತಿ, ಬೇಬಿ ಸುಲೋಚನಾ, ಶರ್ಮಿಳಾ ಕೋಟ್ಯಾನ್, ಸುಗಂಽ, ಚಂದ್ರಕುಮಾರ್ ಸಸಹಿತ್ಲು, ಅಬ್ದುಲ್ ಬಶೀರ್, ಅಬ್ದುಲ್ ಹಮೀದ್, ಕಾರ್ಯದರ್ಶಿ ಕೇಶವ ದೇವಾಡಿಗ, ಯೋಜನೆಯ ಇಂಜಿನಿಯರ್ ರಕ್ಷಿತ್‌ಕುಮಾರ್, ಸಂಪನ್ಮೂಲ ವ್ಯಕ್ತಿ ಮಂಗಳಶ್ರೀ ಉಪಸ್ಥಿತರಿದ್ದರು.
ಯೋಜನೆಯ ತಾಲೂಕು ಸಂಯೋಜಕಿ ಪವಿತ್ರಾ ಶೆಟ್ಟಿ ವರದಿ ವಾಚಿಸಿದರು. ಪಂಚಾಯತ್‌ನ ಪಿಡಿಒ ಅಬೂಬಕ್ಕರ್ ಸ್ವಾಗತಿಸಿ, ವರದಿ ಮಂಡಿಸಿದರು, ಯೋಜನೆಯ ಉಷಾರಾಣಿ ಕಾರ್ಯಕ್ರಮ ನಿರೂಪಿಸಿದರು.

Kinnigoli-19121702

Comments

comments

Comments are closed.

Read previous post:
Kinnigoli-19121701
ಕಿಲೆಂಜೂರು ವಾರ್ಷಿಕ ನೇಮೋತ್ಸವ

ಕಿನ್ನಿಗೋಳಿ ಸಮೀಪದ ಕಿಲೆಂಜೂರು ಸರಳ ಧೂಮಾವತಿ ದೈವದ ವಾರ್ಷಿಕ ನೇಮೋತ್ಸವವು ಶನಿವಾರ ನಡೆಯಿತು.

Close