ಕಂಬಳಬೆಟ್ಟು ಭಟ್ರೆನ ಮಗಲ್ ತುಳು ಸಿನಿಮಾ ಮೂಹೂರ್ತ

ಕಟೀಲು : ಕಂಬಳಬೆಟ್ಟು ಭಟ್ರೆನ ಮಗಲ್ ತುಳು ಸಿನಿಮಾ ಕಾಮೆಡಿಯೊಂದಿಗೆ ಧನಾತ್ಮಕ ಚಿಂತನೆಯ ಕಥಾವಸ್ತು ಹೊಂದಿದೆ. ಎಂದು ಚಿತ್ರದ ನಿರ್ದೇಶಕ ಶರತ್ ಹೇಳಿದರು.
ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳದಲ್ಲಿ ಗುರುವಾರ ನಡೆದ ಕಂಬಳಬೆಟ್ಟು ಭಟ್ರೆನ ಮಗಲ್ ಚಿತ್ರದ ಮೂಹೂರ್ತ ಕಾರ್ಯಕ್ರಮದಲ್ಲಿ ಮಾತನಾಡಿದರು.
ತುಳು ನಾಡಿನ ಸಂಸ್ಕ್ರತಿ ಸಂಸ್ಕಾರ ಆಚಾರ ವಿಚಾರಗಳು ಸಿನಿಮಾದಲ್ಲಿ ಮೂಡಿಸಲಾಗಿದೆ. ಮಂಗಳೂರು, ಮೈಸೂರು ಬೆಂಗಳೂರು, ಪಾಂಡವಪುರ, ಕಳಸ, ಚಿಕ್ಕಮಂಗಳೂರು ಮುಂತಾದ ಕಡೆಗಳಲ್ಲಿ ಸಿನಿಮಾ ಚಿತ್ರೀಕರಣ ನಡೆಯಲ್ಲಿದ್ದು, ಪಮುಖ ನಾಯಕಿ ಪಾತ್ರದಲ್ಲಿ ಐಶ್ವರ್ಯ ಎಂಬ ಯುವತಿ ಪ್ರಥಮ ಬಾರಿಗೆ ಕ್ಯಾಮಾರ ಎದುರಿಸಲಿದ್ದಾಳೆ.
ಅರವಿಂದ ಬೋಳಾರ್, ಬೋಜರಾಜ ವಾಮಂಜೂರು, ರಮೇಶ್ ರೈ ಕುಕ್ಕುವಳ್ಳಿ, ಶಂಕರ್ ಭಟ್ ಮತ್ತಿತರರು ಅಭಿನಯಿಸಲಿದ್ದಾರೆ. ಸಿನಿಮಾದಲ್ಲಿ ಒಟ್ಟು 5 ಹಾಡುಗಳಿದ್ದು ಸುಂದರ ತಾಣಗಳಲ್ಲಿ ಚಿತ್ರೀಕರಣಗೊಳ್ಳಲಿದೆ. ಸುಮಾರು 65 ಲಕ್ಷ ರೂಪಾಯಿ ವೆಚ್ಚದಲ್ಲಿ ಸಿನೆಮಾ ನಿರ್ಮಾಣಗೊಳ್ಳಲಿದೆ, ಚಿತ್ರಕ್ಕೆ ಸಂಗೀತ ಶಿನಾಯಿ ಜೋಸೆಪ್, ಸಹ ನಿರ್ದೇಶನ ಎಲ್ದೂಸ್, ಕಲಾ ನಿರ್ದೇಶನ ಯೋಗೀಶ್ ಉಪ್ಪೂರು, ಸಂಪೂರ್ಣ ನಿರ್ವಹಣೆ ಪ್ರಕಾಶ್ ಗಟ್ಟಿ ಮಾಡಲಿದ್ದಾರೆ. 2018 ರ ಎಪ್ರಿಲ್ ಅಥವಾ ಮೇ ಯಲ್ಲಿ ಸಿನಿಮಾ ಬಿಡುಗಡೆ ಆಗಲಿದೆ ಎಂದರು.
ಕಟೀಲು ವಿವಿದ್ದೋದೇಶ ಸಹಕಾರಿ ಸಂಘದ ಅಧ್ಯಕ್ಷ ಸಂಜೀವ ಮಡಿವಾಳ ಮಾತನಾಡಿ ತುಳು ಚಿತ್ರರಂಗ ಪ್ರವರ್ಧಮನಕ್ಕೆ ಬರುತ್ತಿದ್ದು ಸುಸೂತ್ರವಾಗಿ ಚಿತ್ರೀಕರಣಗೊಂಡು ಯಶಸ್ಸು ಕಾಣಲಿ ಎಂದು ಶುಭ ಹಾರೈಸಿದರು.
ಕಟೀಲು ದೇವಳದ ಅರ್ಚಕ ಅನಂತಪದ್ಮನಾಭ ಆಸ್ರಣ್ಣ ಕ್ಲಾಪ್ ತೋರಿಸಿ ಶುಭಾಶಂಸನೆಗೈದರು. ದ.ಕ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಕಸ್ತೂರಿ ಪಂಜ ಕ್ಯಾಮಾರ ಚಾಲನೆ ಮಾಡಿದರು.
ತುಳು ಲಿಪಿಯಲ್ಲಿದ್ದ ಚಿತ್ರದ ಟೈಟಲ್ ಕನ್ನಡಕ್ಕೆ ಅನುವಾದಿಸಿದ ವಿಂದ್ಯಾ ಶೆಟ್ಟಿ ಹಾಗೂ ಗುರು ಪ್ರಸಾದ್ ಅವರಿಗೆ ಬಹುಮಾನವನ್ನು ವಿತರಿಸಲಾಯಿತು.
ಈ ಸಂದರ್ಭ ನಿರ್ಮಾಪಕ ಸುಬ್ರಮಣ್ಯ ಸಾಲಿಯಾನ್, ನಿರ್ದೇಶಕ ಶರತ್, ದೇವಪ್ಪ ಗಟ್ಟಿ ರಮೆಶ್ ರೈ ಕುಕ್ಕುವಳ್ಳಿ, ಪ್ರಕಾಶ್ ಪೂಂಜ, ಚಿದಾನಂದ, ಶಂಕರ್ ಭಟ್, ವಿಕ್ರಮ್ ಮಾಡ, ಮತ್ತಿತರರು ಉಪಸ್ಥಿತರಿದ್ದರು.
Kinnigoli-19121704

Comments

comments

Comments are closed.

Read previous post:
Kinnigoli-19121703
ಕಿನ್ನಿಗೋಳಿ : ಸಹಿ ಸಂಗ್ರಹ ಅಭಿಯಾನ

ಕಿನ್ನಿಗೋಳಿ : ವಿಶ್ವ ತುಳುವೆರೆ ಆಯನೊ ಕೂಟ ಹಾಗೂ ಡಾ| ಶಿವರಾಮ ಕಾರಂತ ಪಿಲಿಕುಳ ನಿಸರ್ಗ ಧಾಮದಲ್ಲಿ ಡಿಸೆಂಬರ್ 23,24 ರಂದು ನಡೆಯುವ ತುಳುನಾಡೋಚ್ಚಯ-2017ರ ಪೂರ್ವಭಾವಿಯಾಗಿ ತುಳು ಭಾಷೆಯನ್ನು ೮ನೇ...

Close