ಕೆಮ್ರಾಲ್ ಮಕ್ಕಳ ಹಕ್ಕುಗಳ ಗ್ರಾಮ ಸಭೆ

ಕಿನ್ನಿಗೋಳಿ: ಒಂದು ವರ್ಷದಿಂದ ವಿಜ್ಞಾನ ಶಿಕ್ಷಕರ ಕೊರತೆ, ಕಂಪ್ಯೂಟರ್‌ಗಳಿಲ್ಲ, ಆಟವಾಡಲು ಕ್ರೀಡಾ ಸಾಮಾಗ್ರಿ ನೀಡಿಲ್ಲ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕಗಳನ್ನು ಕೊಟ್ಟಿಲ್ಲ, ತರಗತಿಯಲ್ಲಿ ಹೊಂಡಗಳಿವೆ ಹದಗೆಟ್ಟ ರಸ್ತೆಗಳು ಹಾಗೂ ಇಲಾಖಾಕಾರಿಗಳ ಗೈರುಹಾಜರಿ ಮುಂತಾದ ಸಮಸ್ಯೆಗಳ ಬೆಟ್ಟು ತೋರಿಸುತ್ತಾ ತಾವೂ ಹಿರಯರಿಗೆ ಸಾಟಿ ಇದ್ದಂತೆ ಹಲವಾರು ಪ್ರಶ್ನೆಗಳ ಸುರಿಮಳೆಯಿಂದ ಮಕ್ಕಳು ಪಂಚಾಯಿತಿ ಆಡಳಿತವನ್ನು ಪ್ರಶ್ನಿಸಿದರು.
ಕೆಮ್ರಾಲ್ ಗ್ರಾಮ ಪಂಚಾಯಿತಿಯ ಆಶ್ರಯದಲ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶಾಲೆಗಳಿಗೆ ಕೆಮ್ರಾಲ್ ಪ್ರೌಢ ಶಾಲೆಯಲ್ಲಿ ಸೋಮವಾರ ನಡೆದ ಮಕ್ಕಳ ಹಕ್ಕುಗಳ ಗ್ರಾಮ ಸಭೆಯಲ್ಲಿ ಪ್ರತಿಧ್ವನಿಸಿತು.
ಕೆಮ್ರಾಲ್ ಪ್ರೌಢ ಶಾಲೆಯಲ್ಲಿ ೨೦೧೬ ರಿಂದಲೇ ವಿಜ್ಞಾನ ಶಿಕ್ಷಕರಿಲ್ಲ ಕಳೇದ ಗ್ರಾಮ ಸಭೆಯಲ್ಲಿ ಶಿಕ್ಷಕರ ನಿಯುಕ್ತಿ ಬಗ್ಗೆ ಭರವಸೆ ದೊರಕಿದ್ದರೂ ಭರವಸೆ ಮಾತ್ರ ಈಡೇರಲಿಲ್ಲ. ಕಳೆದ ವರ್ಷ ಬೇರೆ ಶಾಲೆಯಿಂದ ಕೆಲವು ತರಗತಿ ಮಾಡಲು ಶಿಕ್ಷಕರು ಬಂದಿದ್ದರು ಆದರೇ ಈ ವರ್ಷ ಅದು ಕೂಡಾ ಆಗಿಲ್ಲ ಪಾಠಗಳು ಬಾಕಿ ಇವೆ. ಸೂಕ್ತ ತರಬೇತಿ ಇಲ್ಲದೆ ನಾವು ಹೇಗೆ ೧೦ನೇ ತರಗತಿಯ ಪರೀಕ್ಷೆ ಬರೆಯುವುದು ಎಂದು ಬೇಸರದಿಂದ ಕೆಮ್ರಾಲ್ ಪ್ರೌಢ ಶಾಲಾ ವಿದ್ಯಾರ್ಥಿನಿ ಮ್ಯೂರಲ್ ಸಿಕ್ವೇರಾ ಗದ್ಗದಿತರಾಗಿ ಕೇಳಿದರು. ಈ ಬಗ್ಗೆ ಶಿಕ್ಷಣ ಇಲಾಖೆಗೆ ಪುನ: ಮನವರಿಕೆ ಪತ್ರ ಕಳುಹಿಸುತ್ತೇವೆ ಎಂದು ಪಿಡಿಒ ರಮೇಶ್ ರಾಥೋಡ್ ತಿಳಿಸಿದರು ಆದರೆ ಗ್ರಾಮ ಪಂಚಾಯಿತಿ ಸದಸ್ಯ ಮಯ್ಯದ್ದಿ ಕೂಡಲೇ ಇಲಾಖಾಕಾರಿಗಳಿಗೆ ದೂರವಾಣಿ ಕರೆ ಮಾಡಿ ಮಕ್ಕಳ ಮುಂದೆಯೇ ಮೊಬೈಲ್ ಸಂಭಾಷಣೆಯನ್ನು ಕೇಳಿಸಿ ವಿಜ್ಞಾನ ಪಾಠ ಮಾಡಲು ಶಿಕ್ಷಕರನ್ನು ಕಳಿಸಿ ಕೊಡುವ ಏರ್ಪಾಡು ಮಾಡಲಾಗುವುದು ಎಂದು ತಿಳಿಸಲಾಯಿತು.
ಸರಕಾರದ ಉತ್ತಮ ಯೋಜನೆಗಳಾದ ಅನ್ನಭಾಗ್ಯ ಕ್ಷೀರಭಾಗ್ಯ ಆರೋಗ್ಯ ಭಾಗ್ಯವಿದೆ ಮಕ್ಕಳಿಗೆ ಅನುಕೂಲವಾಗುವಂತೆ ಶಾಲೆಗೆ ಕಂಪ್ಯೂಟರ್ ಭಾಗ್ಯ ದೊರಕಿಸಿಕೊಡಿ ಎಂದು ಕೆಮ್ರಾಲ್ ಶಾಲೆಯ ಆದರ್ಶ್ ವಿನಂತಿಸಿಕೊಂಡರು.
ಕೊಯಿಕುಡೆ ಹೋಗುವ ರಸ್ತೆಯಲ್ಲಿ ದೊಡ್ಡ ಹೊಂಡ ಇದೆ ಮಳೆಗಾಲದಲ್ಲಿ ತುಂಬಾ ಸಮಸ್ಯೆಯಾಗಿದೆ ಈ ಬಗ್ಗೆ ಕ್ರಮ ಕೈಗೊಳ್ಳಿ ಎಂದು ಕೊಕುಡೆ ಶಾಲಾ ವಿದ್ಯಾರ್ಥಿ ವರ್ಷಿತ್ ಕೇಳಿದಾಗ ಪಿಡಿಒ ಈ ಬಗ್ಗೆ ಇಲಾಖೆಗೆ ಬರೆಯಲಾಗುವುದು ಎಂದು ಹೇಳಿದರು.
ಕೆಮ್ರಾಲ್ ಶಾಲೆಯಲ್ಲಿ ಪ್ರೊಜಕ್ಟರ್ ಇಲ್ಲ ಹಿಂದಿನ ಮಕ್ಕಳ ಗ್ರಾಮ ಸಭೆಯಲ್ಲಿಯೂ ಈ ಬಗ್ಗೆ ಕೇಳಿದ್ದರೂ ಕ್ರಮ ಮಾತ್ರ ಇನ್ನೂ ಕೈಗೊಂಡಿಲ್ಲ ಯಾಕೆ ಎಂದು ಕೆಮ್ರಾಲ್ ಶಾಲೆಯ ಅಭಿಲಾಷ್ ಕೇಳಿದಾಗ ದುರಸ್ತಿ ಮಾಡಿ ಕೊಡಲಾಗುವುದು ಎಂದು ಉತ್ತರ ಪಂಚಾಯಿತಿ ಆಡಳಿತ ತಿಳಿಸಿತು.
ಪಂಜ ಶಾಲಾ ವಿದ್ಯಾರ್ಥಿ ಕೀರ್ತನ್ ಕೋಣೆಯಲ್ಲಿ ಸಿಮೆಂಟ್ ಹೋಗಿ ಹೊಂಡ ಬಿದ್ದಿದೆ ಅದನ್ನು ಸರಿಪಡಿಸಿ ಎಂದಾಗ ಕೇಳಿದಾಗ ನಮ್ಮಲ್ಲಿ ಅನುದಾನ ಇಲ್ಲ ಇಲಾಖೆಗೆ ಬರೆಯಲಾಗುವುದು ಎಂದು ತಿಳಿಸಿದರು
ವಿದ್ಯಾರ್ಥಿ ಅಮೀತೇಷ್ ಪರಿಶಿಷ್ಟ ಜಾತಿ ಹಾಗೂ ಪಂಗಡದ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ಯಾಕೇ ನೀಡಿಲ್ಲ, ಶಾಲೆಗೆ ಆಟದ ಸಾಮಗ್ರಿ ನೀಡಿ ಎಂದು ಕೇಳಿದಾಗ ಶಾಲೆಯಿಂದ ಅರ್ಜಿ ನೀಡಬೇಕು, ಶಾಲೆಯಿಂದ ಅರ್ಜಿ ಬಂದರೇ ಪರೀಶೀಲಿಸಲಾಗುವುದು ಆಟದ ಸಾಮಗ್ರಿಗಳನ್ನು ಇಲಾಖೆಗೆ ಬರೆದು ತರಿಸಿ ಕೊಡಲಾಗುವುದು.
ಕೊಕುಡೆ ಶಾಲೆಗೆ ವನಮಹೋತ್ಸವಕ್ಕೆ ಗಿಡಗಳನ್ನು ನೀಡಿ ಎಂದು ವಿದ್ಯಾರ್ಥಿ ಮನಿಷ್ ಕೇಳಿದಾಗ ಅರ್ಜಿ ನೀಡಿದಾಗ ಗಿಡಗಳ ವಿತರಣೆ ಮಾಡಲಾಗುವುದು ಎಂದು ಪಂಚಾಯಿತಿ ಆಡಳಿತ ತಿಳಿಸಿತು.
ಹೆಣ್ಣು ಮಕ್ಕಳಿಗೆ ಮಹಿಳೆಯರಿಗೆ, ಹಿರಿಯರಿಗೆ, ಅಂಗವಿಕಲರಿಗೆ ಸಹಾಯವಾಣಿ ಇದೆ ಆದರೇ ೧೬ ವರ್ಷ ಮೇಲಿನ ಗಂಡು ಮಕ್ಕಳಿಗೆ ದೌರ್ಜನ್ಯವಾದಾಗ ಯಾವ ಸಹಾಯವಾಣಿ ಇಲ್ಲ ಯಾಕೇ ಎಂದು ಕೆಮ್ರಾಲ್ ಶಾಲಾ ವಿದ್ಯಾರ್ಥಿ ರತನ್ ಕೇಳಿದರು.
ಕೆಮ್ರಾಲ್ ಶಾಲೆಯಲ್ಲಿ ಹೊ ತೋಟ ಇಲ್ಲ ಎಂದು ಇಲಾಖೆಯ ಅಕಾರಿಗಳು ಭೆಟಿ ನೀಡಿದಾಗ ಪ್ರಶ್ನೆ ಹಾಕುತ್ತಾರೆ ನಾವು ಗಿಡ ನೆಟ್ಟರೂ ಆಡು ದನಗಳು ತಿನ್ನುತ್ತಿವೆ ಹಾಗೂ ಶಾಲಾ ಮಕ್ಕಳಿಗೆ ಉಪಯೋಗವಾಗುವ ನಳ್ಳಿ ನೀರಿನ ಪೈಪುಗಳನ್ನು ಯಾರೋ ಕಡಿದು ಹಾಕುತ್ತಾರೆ ಇದಕ್ಕೇನು ಮಾಡುವುದು ಎಂದು ಕೆಮ್ರಾಲ್ ಶಾಲೆಯ ಸೋನಿಕಾ ಕೇಳಿದಾಗ ಈ ಬಗ್ಗೆ ಪೋಲಿಸ್ ಇಲಾಖೆಗೆ ದೂರು ನೀಡಲಾಗುವುದು ಎಂದು ಪಿಡಿಒ ರಮೇಶ್ ರಾಥೋಡ್ ತಿಳಿಸಿದರು.
ಕೆಮ್ರಾಲ್ ಶಾಲಾ ನಾಯಕ ಶಿವಾನಂದ ಮಕ್ಕಳ ಗ್ರಾಮ ಸಭೆಯ ಅಧ್ಯಕ್ಷತೆ ವಹಿಸಿದ್ದರು.
ಮಕ್ಕಳ ಕಲ್ಯಾಣ ಸಮಿತಿಯ ಇಲಾಖೆಯ ಅಧ್ಯಕ್ಷ ರೆನ್ನಿ ಡಿಸೋಜ ಹಾಗೂ ಸಂಪನ್ಮೂಲ ವ್ಯಕ್ತಿ ನಂದಾ ಪಾಯಸ್ ಮಾಹಿತಿ ನೀಡಿದರು.
ಕೆಮ್ರಾಲ್ ಗ್ರಾಮ ಪಂಚಾಯಿತಿ ಅಧ್ಯಕ್ಷ ನಾಗೇಶ್ ಅಂಚನ್, ಶಾಲಾ ಮುಖ್ಯ ಶಿಕ್ಷಕಿ ಶರ್ಲಿ ಸುಮಾಲಿನಿ, ವಿದ್ಯಾರ್ಥಿ ಮುಖಂಡರಾದ ಧನುಷ್, ದ್ವಿಶಾ ಉಪಸ್ಥಿತರಿದ್ದರು. ದಿಕ್ಷೀತಾ ಶೆಟ್ಟಿ ಸ್ವಾಗತಿಸಿದರು. ಕೊಕುಡೆ ಶಾಲೆಯ ಮೇಘನಾ ವಂದಿಸಿದರು, ದಿಕ್ಷಿತಾ ಕೆ ಕಾರ್ಯಕ್ರಮ ನಿರೂಪಿಸಿದರು.

Kinnigoli-19121712

Comments

comments

Comments are closed.

Read previous post:
ಡಿ. ೨೦ ಕಿನ್ನಿಗೋಳಿ ವಾಣಿಜ್ಯ ಸಂಕೀರ್ಣ ಮತ್ತು ಬಸ್ ನಿಲ್ದಾಣ ಉದ್ಘಾಟನೆ

ಕಿನ್ನಿಗೋಳಿ : ಕಿನ್ನಿಗೋಳಿ ಗ್ರಾಮ ಪಂಚಾಯಿತಿಯಿಂದ ನೂತನವಾಗಿ ನಿರ್ಮಾಣಗೊಂಡ ೪೯ ಲಕ್ಷ ರೂ ವೆಚ್ಚದಲ್ಲಿ ಸುಸಜ್ಜಿತ ಎರಡನೇ ಹಂತದ ಪಂಚಾಯಿತಿ ವಾಣಿಜ್ಯ ಸಂಕೀರ್ಣ ಕಟ್ಟಡ, 15 ಲಕ್ಷರೂ ವೆಚ್ಚದ ಕೇಂದ್ರ...

Close