ಕೊಕುಡೆ : ಯುವ ಕೇಸರಿ ವಾರ್ಷಿಕೋತ್ಸವ

ಕಿನ್ನಿಗೋಳಿ : ಸಾಮಾಜಿಕ ಚಿಂತನೆಯನ್ನು ಬೆಳೆಸಿಕೊಂಡು ಕ್ರಿಯಾ ಶಕ್ತಿ, ಜ್ಞಾನಶಕ್ತಿ, ಇಚ್ಛಾ ಶಕ್ತಿ, ಧನಶಕ್ತಿ, ಜನಶಕ್ತಿ ಬೆಳೆಸಿ ರಾಜಕೀಯ ರಹಿತವಾಗಿ ಮಾಡುವ ಸಮಾಜ ಸೇವೆ ಶ್ಲಾಘನೀಯ ಎಂದು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಕಸ್ತೂರಿ ಪಂಜ ಹೇಲಿದರು.
ಪಕ್ಷಿಕೆರೆ ಸಮೀಪದ ಕೊಕುಡೆ ಪಡ್ಡಾಯಿ ಕರೆ ಮೈದಾನದಲ್ಲಿ ಭಾನುವಾರ ನಡೆದ ಯುವ ಕೇಸರಿ ಸಂಸ್ಥೆಯ ತೃತೀಯ ವರ್ಷದ ವಾರ್ಷಿಕೋತ್ಸವ ಉದ್ಘಾಟಿಸಿ ಮಾತನಾಡಿದರು.
ದ.ಕ.ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ಮಾತನಾಡಿ ಯುವ ಕೇಸರಿ ಸಂಘಟನೆ ಜನಪಯೋಗಿ ಕಾರ್ಯಕ್ರಮಗಳನ್ನು ಮಾಡಿಕೊಂಡು ಎಲ್ಲರಿಗೂ ಮಾದರಿಯಾಗಲಿ ಎಂದು ಶುಭ ಹಾರೈಸಿದರು.
ಕೆಮ್ರಾಲ್ ಗ್ರಾಮ ಪಂಚಾಯಿತಿ ಅಧ್ಯಕ್ಷ ನಾಗೇಶ್ ಬೊಳ್ಳೂರು ಅಧ್ಯಕ್ಷತೆ ವಹಿಸಿದ್ದರು.
ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ರಘುರಾಮ ಶೆಟ್ಟಿ(ಕೃಷಿ), ನೀಲನ್ ವಿನಿಲ್ ಮಿರಾಂಡಾ (ಶಿಕ್ಷಣ), ದಯಾನಂದ ಗುಜರನ್ (ಯಕ್ಷಗಾನ ಕಲೆ) ಅವರನ್ನು ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು
ದ.ಕ. ಜಿಲ್ಲಾ ಪಂಚಾಯಿತಿ ಸದಸ್ಯ ವಿನೋದ್ ಕುಮಾರ್ ಬೊಳ್ಳೂರು, ಉದ್ಯಮಿ ಪ್ರವೀಣ್ ಕುಮಾರ್, ಕೆಮ್ರಾಲ್ ಗ್ರಾ.ಪಂ. ಸದಸ್ಯರಾದ ಹರಿಪ್ರಸಾದ್ ಶೆಟ್ಟಿ, ಮಾಲತಿ ಜಗದೀಶ್ ಆಚಾರ‍್ಯ ಉಪಸ್ಥಿತರಿದ್ದರು.
ಯುವಕೇಸರಿ ಅಧ್ಯಕ್ಷ ಪ್ರಮೋದ್ ಕುಮಾರ್ ಸ್ವಾಗತಿಸಿದರು, ಅರ್ಪಿತಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
ಬಳಿಕ ಸ್ಥಳೀಯ ಪ್ರತಿಭೆಗಳಿಂದ ಸಾಂಸ್ಕ್ರತಿಕ ಕಾರ್ಯಕ್ರಮ ಹಾಗೂ ಸಸಿಹಿತ್ಲು ಶ್ರೀ ಭಗವತಿ ಯಕ್ಷಗಾನ ಮೇಳದವರಿಂದ ಯಕ್ಷಗಾನ ಬಯಲಾಟ ಪ್ರದರ್ಶನ ನಡೆಯಿತು.
Kinnigoli-19121713

Comments

comments

Comments are closed.

Read previous post:
Kinnigoli-19121712
ಕೆಮ್ರಾಲ್ ಮಕ್ಕಳ ಹಕ್ಕುಗಳ ಗ್ರಾಮ ಸಭೆ

ಕಿನ್ನಿಗೋಳಿ: ಒಂದು ವರ್ಷದಿಂದ ವಿಜ್ಞಾನ ಶಿಕ್ಷಕರ ಕೊರತೆ, ಕಂಪ್ಯೂಟರ್‌ಗಳಿಲ್ಲ, ಆಟವಾಡಲು ಕ್ರೀಡಾ ಸಾಮಾಗ್ರಿ ನೀಡಿಲ್ಲ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕಗಳನ್ನು ಕೊಟ್ಟಿಲ್ಲ, ತರಗತಿಯಲ್ಲಿ...

Close