ಪದ್ಮನೂರು : ಈದ್ ಮಿಲಾದ್

ಕಿನ್ನಿಗೋಳಿ : ಪ್ರವಾದಿಯವರ ಸಂದೇಶಗಳನ್ನು ಪಾಲಿಸಿ ಸೌಹಾರ್ಧಯುತ ಜೀವನ ನಡೆಸಲು ಮನ ಮಾಡಬೇಕು ಎಂದು ಚೊಕ್ಕಬೆಟ್ಟು ಜುಮ್ಮಾ ಮಸೀದಿಯ ಖತೀಬರಾದ ಮೌಲಾನಾ ಅಬ್ದುಲ್ ಅಝೀಜ್ ದಾರಿಮಿ ಹೇಳಿದರು.
ಕಿನ್ನಿಗೋಳಿ ಸಮೀಪದ ಪದ್ಮನೂರು ಸಾರ್ವಜನಿಕ ಯಕ್ಷಗಾನ ಬಯಲಾಟ ಸಭಾಂಗಣದಲ್ಲಿ ಸಾರ್ವಜನಿಕ ಯಕ್ಷಗಾನ ಬಯಲಾಟ ಸಮಿತಿ ಪದ್ಮನೂರು- ಕಿನ್ನಿಗೋಳಿ ಇದರ ಆಶ್ರಯದಲ್ಲಿ ಇತ್ತೀಚೆಗೆ ನಡೆದ ಈದ್ ಮಿಲಾದ್ ಕಾರ್ಯಕ್ರಮದಲ್ಲಿ ಮಾತನಾಡಿದರು. ಯಕ್ಷಗಾನ ಕಲಾವಿದ ಉಪನ್ಯಾಸಕ ವಾದಿರಾಜ ಕಲ್ಲೂರಾಯ ಮಾತನಾಡಿ ಎಲ್ಲಾ ಧರ್ಮಗಳ ಸಾರ ಒಂದೇ ಆಗಿದ್ದು ಹಾಗಾಗಿ ಸ್ನೇಹ ಶಾಂತಿ ನೆಮ್ಮದಿಯ ಸಮಾಜ ನಮ್ಮ ದೇಶದಲ್ಲಿದೆ ಎಂದು ಹೇಳಿದರು.
ಈ ಸಂದರ್ಭ ಅಂಗನವಾಡಿ ಶಿಕ್ಷಕಿ ಜಯಂತಿ ಅವರನ್ನು ಸನ್ಮಾನಿಸಲಾಯಿತು. ಸಾರ್ವಜನಿಕ ಯಕ್ಷಗಾನ ಬಯಲಾಟ ಸಮಿತಿ ಅಧ್ಯಕ್ಷ ಜೋಸೆಫ್ ಕ್ವಾಡ್ರಸ್ ಅಧ್ಯಕ್ಷತೆ ವಹಿಸಿದ್ದರು. ಪಕ್ಷಿಕೆರೆ ಸಂತಜೂದರ ಕೇಂದ್ರದ ಸಹಾಯಕ ಧರ್ಮಗುರು ಫಾ. ಕ್ಲಿಫರ್ಡ್ ಪಿಂಟೋ ಉಪಸ್ಥಿತರಿದ್ದರು.
ಅಶೋಕ್ ಕುಮಾರ್ ಶೆಟ್ಟಿ ಸ್ವಾಗತಿಸಿದರು. ಕೆ. ಎ. ಅಬ್ದುಲ್ಲಾ ಕಾರ್ಯಕ್ರಮ ನಿರೂಪಿಸಿದರು.

Kinnigoli-19121709

Comments

comments

Comments are closed.

Read previous post:
Kinnigoli-19121708
ಅಮಲು ಪದಾರ್ಥದ ದಾಸರಾಗದಿರಿ

ಕಿನ್ನಿಗೋಳಿ : ಹದಿಹರೆಯದ ಯುವಕರು ಅಮಲು ಪದಾರ್ಥದ ದಾಸರಾಗಿ, ಕುಕೃತ್ಯಗಳಲ್ಲಿ ಭಾಗಿಗಳಾಗುತ್ತಿರುವುದು ದುರಂತ. ಪ್ರವಾದಿ ಮುಹಮ್ಮದ್ ಅವರ ಸಂದೇಶವನ್ನು ಯುವಜನತೆಗೆ ತಲುಪಿಸುವ ಕೆಲಸವಾಗಬೇಕಿದೆ ಎಂದು ಕಿನ್ನಿಗೋಳಿ ಜುಮ್ಮಾ ಮಸೀದಿ...

Close