ಅಮಲು ಪದಾರ್ಥದ ದಾಸರಾಗದಿರಿ

ಕಿನ್ನಿಗೋಳಿ : ಹದಿಹರೆಯದ ಯುವಕರು ಅಮಲು ಪದಾರ್ಥದ ದಾಸರಾಗಿ, ಕುಕೃತ್ಯಗಳಲ್ಲಿ ಭಾಗಿಗಳಾಗುತ್ತಿರುವುದು ದುರಂತ. ಪ್ರವಾದಿ ಮುಹಮ್ಮದ್ ಅವರ ಸಂದೇಶವನ್ನು ಯುವಜನತೆಗೆ ತಲುಪಿಸುವ ಕೆಲಸವಾಗಬೇಕಿದೆ ಎಂದು ಕಿನ್ನಿಗೋಳಿ ಜುಮ್ಮಾ ಮಸೀದಿ ಖತೀಬರಾದ ಅಬ್ದುಲ್ ಲತೀಫ್ ಸಖಾಫಿ ಹೇಳಿದರು.
ಮುಹಮ್ಮದಿಯ್ಯಾ ಜುಮ್ಮಾ ಮಸೀದಿ ಪುನರೂರು, ಮುಹಿಯುದ್ದೀನ್ ಯಂಗ್ ಮೆನ್ಸ್ ಎಸೋಸಿಯೇಶನ್ ಹಾಗೂ ಮುಹಮ್ಮದಿಯ್ಯಾ ಮದ್ರಸ ಇದರ ವತಿಯಿಂದ ಕಿನ್ನಿಗೋಳಿಯ ಗೋಳಿಜೋರ ಮದ್ರಸ ವಠಾರದಲ್ಲಿ ನಡೆದ ಮೀಲಾದ್ ಫೆಸ್ಟ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಮುಹಮ್ಮದಿಯ್ಯಾ ಜುಮ್ಮಾ ಮಸೀದಿ ಪುನರೂರು ಇದರ ಖತೀಬರಾದ ಪಿ.ಎಂ.ಎ. ಮುಹಮ್ಮದ್ ಅಶ್ರಫ್ ರಝಾ ಅಂಜದಿ ಕಾರ್ಯಕ್ರಮ ಉದ್ಘಾಟಿಸಿದರು. ಅಧ್ಯಕ್ಷ ಸಿದ್ದೀಕ್ ಪುನರೂರು ಅಧ್ಯಕ್ಷತೆ ವಹಿಸಿದ್ದರು.
ಅಸ್ಸಯ್ಯದ್ ಶಿಹಾಬುದ್ದೀನ್ ಅಲ್ ಹೈದ್ರೋಸ್ ಅಸ್ಸಖಾಫಿ ಕಿಲ್ಲೂರು ತಂಙಳ್ ದುವಾ ಆಶೀರ್ವಚನ ನೆರವೇರಿಸಿದರು.
ಮಿಸ್ಬಾಹುಲ್ ಮದೀನಾ ವಿದ್ಯಾಸಂಸ್ಥೆ ಮ್ಯಾನೇಜರ್ ಹಸನ್ ಸಖಾಫಿ, ಮುಅಲ್ಲಿಂ ಸಜ್ಜಾದ್ ಆಲಂ ನೂರಿ, ಕೆಜೆಎಂ ಅಧ್ಯಕ್ಷ ಅಬ್ದುಲ್ ರಹ್ಮಾನ್, ಕಿನ್ನಿಗೋಳಿ ಜುಮ್ಮಾ ಮಸೀದಿ ಅಧ್ಯಕ್ಷ ಅಬ್ದುಲ್ ರಝಾಕ್, ಯಂಗ್ ಮೆನ್ಸ್ ಅಧ್ಯಕ್ಷ ಉಮರುಲ್ ಫಾರೂಕ್, ಇಖ್ಲಾಸ್ ಮಸ್ಜಿದ್ ಅಧ್ಯಕ್ಷ ಅಬ್ದುಲ್ ಖಾದರ್, ಕೆ.ಎಂ.ಇಬ್ರಾಹಿಂ ರಿಝ್ವಿ,ಅಬ್ದುಲ್ ಖಾದರ್ ಮದನಿ, ಅಬ್ದುಲ್ ಹಮೀದ್ ಮಿಲನ್, ಕೆ,ಯು.ಮುಹಮ್ಮದ್ ನೂರಾನಿಯಾ ಮತ್ತಿತರರು ಉಪಸ್ಥಿತರಿದ್ದರು.
Kinnigoli-19121708

Comments

comments

Comments are closed.

Read previous post:
Kinnigoli-19121707
ಡಾ. ಎಂ. ರಾಮಣ್ಣ ಶೆಟ್ಟಿ ಪ್ರೌಢ ಶಾಲಾ ವಾರ್ಷಿಕೋತ್ಸವ

 ಕಿನ್ನಿಗೋಳಿ : ಶಿಕ್ಷಕರು ಮಕ್ಕಳ ಭವಿಷ್ಯ ರೂಪಕರು. ಧನಾತ್ಮಕ ಚಿಂತನೆಯ ಶಿಕ್ಷಣ ಹಾಗೂ ವೃತ್ತಿನಿಷ್ಠೆಯ ಜೀವನ ಅಳವಡಿಸಿದಾಗ ಭವಿಷ್ಯದಲ್ಲಿ ಸಂತೃಪ್ತಿಯ ಜೀವನ ಕಂಡುಕೊಳ್ಳಬಹುದು ಎಂದು ನಿಟ್ಟೆ ವಿಶ್ವವಿದ್ಯಾನಿಲಯದ ಉಪಕುಲಪತಿ...

Close