ವಾಣಿಜ್ಯ ಸಂಕೀರ್ಣ, ಬಸ್ ನಿಲ್ದಾಣ ಉದ್ಘಾಟನೆ

ಕಿನ್ನಿಗೋಳಿ: ಅತೀ ವೇಗವಾಗಿ ಬೆಳೆಯುತ್ತಿರುವ ಕಿನ್ನಿಗೋಳಿ ಪೇಟೆಯಲ್ಲಿ ಸುಮಾರು 2 ಕೋಟಿ ರೂ. ವೆಚ್ಚದಲ್ಲಿ ರಸ್ತೆ ಡಾಮರೀಕರಣ, ಡಿವೈಡರ್ ಹಾಗೂ ದಾರಿದೀಪ ಅಳವಡಿಸಿ ನಗರದ ಮಾದರಿಯಲ್ಲಿ ಅಭಿವೃದ್ಧಿ ಪಡಿಸಲಾಗುವುದು. ಕಿನ್ನಿಗೋಳಿ ಹಾಗೂ ಮೆನ್ನಬೆಟ್ಟು ಗ್ರಾಮ ಪಂಚಾಯಿತಿಗಳನ್ನು ಒಗ್ಗೂಡಿಸಿ ನಗರ ಪಂಚಾಯಿತಿ ಮಾಡುವ ಪ್ರಸ್ತಾವನೆ ಸರಕಾರ ಮಟ್ಟದಲ್ಲಿದೆ ಎಂದು ಮುಲ್ಕಿ ಮೂಡಬಿದಿರೆ ಶಾಸಕ ಕೆ. ಅಭಯಚಂದ್ರ ಜೈನ್ ಹೇಳಿದರು. ಕಿನ್ನಿಗೋಳಿ ಮಾರುಕಟ್ಟೆ ಕಟ್ಟಡದ ಅವರಣದಲ್ಲಿ ಕಿನ್ನಿಗೋಳಿ ಗ್ರಾಮ ಪಂಚಾಯಿತಿಯಿಂದ ನೂತನವಾಗಿ ನಿರ್ಮಾಣಗೊಂಡಿರುವ 49 ಲಕ್ಷರೂ ವೆಚ್ಚದ ಸುಸಜ್ಜಿತ ಎರಡನೇ ಹಂತದ ಪಂಚಾಯಿತಿ ವಾಣಿಜ್ಯ ಸಂಕೀರ್ಣ ಕಟ್ಟಡ, 15 ಲಕ್ಷರೂ ವೆಚ್ಚದ ಕೇಂದ್ರ ಬಸ್ಸು ನಿಲ್ದಾಣ, ಪೊಲೀಸ್ ಸಹಾಯ ಕೇಂದ್ರ, ರಿಕ್ಷಾ ನಿಲ್ದಾಣ ಹಾಗೂ 36 ಲಕ್ಷರೂ ವೆಚ್ಚದ ಬಿತ್ತುಲ್ ದ್ರವ ತ್ಯಾಜ್ಯ ಘಟಕ ಹಾಗೂ ಇತರ ಅಭಿವೃದ್ದಿ ಕಾಮಗಾರಿಗಳನ್ನು ಬುಧವಾರ ಉದ್ಘಾಟಿಸಿ ಮಾತನಾಡಿದರು.
ಕಿನ್ನಿಗೋಳಿ ಬಹು ಗ್ರಾಮ ಕುಡಿಯುವ ನೀರು ಯೋಜನೆಯಲ್ಲಿ ಗುತ್ತಿಗೆದಾರರ ತಾಂತ್ರಿಕ ಹಾಗೂ ವಿಳಂಬ ಕಾಮಗಾರಿಯಿಂದ ಕುಂಠಿತಗೊಂಡಿದೆ. ಯೋಜನಾ ವೆಚ್ಚ ಹೆಚ್ಚಾಗುವ ಕಾರಣ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಲ್ಲಿ ವಿನಂತಿ ಮಾಡಿಕೊಂಡು ಹೆಚ್ಚುವರಿ ಎರಡು ಕೋಟಿ ರೂ ಹಣ ಬಿಡುಗಡೆ ಮಾಡಲಾಗಿದೆ. ಮುಂದಿನ ವರ್ಷದ ಫೆಬ್ರವರಿ ತಿಂಗಳಿನಲ್ಲಿ ಲೋಕಾರ್ಪಣೆ ಮಾಡಲಾಗುವುದು ಎಂದು ಹೇಳಿದರು.
ಕಿನ್ನಿಗೋಳಿ ಪಂಚಾಯಿತಿ ಅಧ್ಯಕ್ಷೆ ಫಿಲೋಮಿನಾ ಸಿಕ್ವೇರಾ ಅಧ್ಯಕ್ಷತೆ ವಹಿಸಿ ಸ್ವಾಗತಿಸಿದರು,
ಮಂಗಳೂರು ತಾಲೂಕು ಪಂಚಾಯಿತಿ ಅಧ್ಯಕ್ಷ ಮಹಮ್ಮದ್ ಮೋನು, ಎಪಿಎಂಸಿ ಅಧ್ಯಕ್ಷ ಪ್ರಮೋದ್ ಕುಮಾರ್, ಕಿನ್ನಿಗೋಳಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಸುಜಾತಾ ಪೂಜಾರಿ, ಪಿಡಿಒ ಅರುಣ್ ಪ್ರದೀಪ್ ಡಿಸೋಜ, ದ.ಕ. ಜಿಲ್ಲಾ ಮಹಿಳಾ ಕಾಂಗ್ರೇಸ್ ಅಧ್ಯಕ್ಷೆ ಶಾಲೆಟ್ ಪಿಂಟೊ, ಮಾಜಿ ಜಿಲ್ಲಾ ಪಂಚಾಯತ್ ಅಧಕ್ಷೆ ಸುಗಂಧಿ ಕೋಂಡಾಣ, ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯೆ ಶೈಲಾ ಸಿಕ್ವೇರಾ, ಕಿನ್ನಿಗೋಳಿ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ಅಧ್ಯಕ್ಷ ಲವ ಶೆಟ್ಟಿ, ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರಾದ ಸುಜನ್ ಚಂದ್ರ, ಕಿರಿಯ ಅಭಿಯಂತರರು ವಿಶ್ವನಾಥ್ ಮತ್ತಿತರರರು ಉಪಸ್ಥಿತರಿದ್ದರು.
ಈ ಸಂಧರ್ಭ ಗುತ್ತಿಗೆದಾರರಾದ ಸಂತೋಷ್ ಕುಮಾರ್ ಹೆಗ್ಡೆ, ಸುಧಾಕರ ಶಿಬರೂರು, ಎಮ್ ಎಸ್ ಅಬ್ದುಲ್ ಹಮೀದ್, ಸುನೀಲ್ ಅಂಚನ್ ಅವರನ್ನು ಗೌರವಿಸಲಾಯಿತು.
ಕಿನ್ನಿಗೋಳಿ ಗ್ರಾಮ ಪಂಚಾಯಿತಿ ಸದಸ್ಯ ಸಂತೋಷ್ ಕುಮಾರ್ ವಂದಿಸಿದರು. ಶರತ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

ಕಾರ್ಯಕ್ರಮದಿಂದ ಹಿಂದೆ ಸರಿದ ಬಿಜೆಪಿ ಸದಸ್ಯರು
ಕಿನ್ನಿಗೋಳಿ ಗ್ರಾಮ ಪಂಚಾಯಿತಿಯ ಬಿತ್ತುಲ್ ದ್ರವ ತ್ಯಾಜ್ಯ ಘಟಕಕ್ಕೆ ಕೇಂದ್ರ ಸರಕಾರದ ಸ್ವಚ್ಚಭಾರತ್ ಮಿಷನ್ ಯೋಜನೆಯಡಿ ಜಿಲ್ಲಾ ಪಂಚಾಯಿತಿ ಮೂಲಕ 20 ಲಕ್ಷ ಅನುದಾನ ಹಾಗೂ ಕಿನ್ನಿಗೋಳಿ ಬಸ್ ನಿಲ್ದಾಣದ ಶೌಚಾಲಯಕ್ಕೆ 1.80 ಲಕ್ಷ ರೂ ಜಿಲ್ಲಾ ಪಂಚಾಯಿತಿಯಿಂದ ಅನುದಾನ ಮಂಜೂರಾಗಿದ್ದರೂ ಅನುದಾನದ ವಿಷಯವನ್ನು ನೇಪಥ್ಯದಲ್ಲಿಡಲಾಗಿದೆ ಈ ಹಿನ್ನಲೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಹಲವರು ಭಾಗಿಯಾಗಿಲ್ಲ ಎಂದು ಕಿನ್ನಿಗೋಳಿ ಜಿಲ್ಲಾ ಪಂಚಾಯಿತಿ ಸದಸ್ಯ ವಿನೋದ್ ಕುಮಾರ್ ಬೊಳ್ಳೂರು ಪತ್ರಿಕೆಗೆ ತಿಳಿಸಿದ್ದಾರೆ.

Kinnigoli-2012201704 Kinnigoli-2012201705 Kinnigoli-2012201706 Kinnigoli-2012201707 Kinnigoli-2012201708

Comments

comments

Comments are closed.

Read previous post:
Kinnigoli-2012201703
ಸಾರ್ವಜನಿಕ ಉದ್ಯಾನವನದ ಪುನರುಜ್ಜೀವ

ಕಿನ್ನಿಗೋಳಿ: ಐಕಳ ಪೊಂಪೈ ಕಾಲೇಜು ರಾ.ಸೇವಾ ಯೋಜನಾ ಘಟಕದ ವತಿಯಿಂದ ಮೂರುಕಾವೇರಿಯ ಲಯನ್ಸ್ ಕ್ಲಬ್ ಸಾರ್ವಜನಿಕ ಉದ್ಯಾನವನದ ಪುನರುಜ್ಜೀವನ ಕಾರ್ಯವನ್ನು ನಡೆಸಲಾಯಿತು. ಕಿನ್ನಿಗೋಳಿ ಲಯನ್ಸ್ ಕ್ಲಬ್ ಅಧ್ಯಕ್ಷೆ ಶಾಂಭವಿ...

Close