ಕಿನ್ನಿಗೋಳಿ : ಧ್ಯಾನ ಶಿಬಿರ ಸಮಾರೋಪ

ಕಿನ್ನಿಗೋಳಿ : ಮಾನಸಿಕ ನೆಮ್ಮದಿ ಹಾಗೂ ಆರೋಗ್ಯವಂತರಾಗಿ ಬಾಳಲು ಧ್ಯಾನ ಶಿಬಿರ ಬಹಳಷ್ಟು ಪರಿಣಾಮಕಾರಿ ಎಂದು ಕಟೀಲು ದೇವಳ ಅರ್ಚಕ ಲಕ್ಷ್ಮೀನಾರಾಯಣ ಆಸ್ರಣ್ಣ ಹೇಳಿದರು.
ಕಿನ್ನಿಗೋಳಿಯ ಯುಗಪುರುಷ ಸಭಾಭವನದಲ್ಲಿ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಒಂದು ವಾರದ ಧ್ಯಾನ ಶಿಬಿರ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಈ ಸಂದರ್ಭ ಧ್ಯಾನ ಶಿಬಿರ ನಡೆಸಿಕೊಟ್ಟ ಬಿ.ಕೆ.ವಿಶ್ವೇಶ್ವರಿ ಅವರನ್ನು ಸನ್ಮಾನಿಸಲಾಯಿತು. ಯುಗಪುರುಷ ಪ್ರಧಾನ ಸಂಪಾದಕ ಕೊಡೆತ್ತೂರು ಭುವನಾಭಿರಾಮ ಉಡುಪ ಅಧ್ಯಕ್ಷತೆ ವಹಿಸಿದ್ದರು.
ಸಮಾಜ ಸೇವಕಿ ಸಾವಿತ್ರಿ ಶೆಟ್ಟಿ, ಜಯರಾಮ ಪೂಂಜ, ಮೆನ್ನಬೆಟ್ಟು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸರೋಜಿನಿ ಗುಜರನ್, ಉದ್ಯಮಿ ಪಿ.ಸತೀಶ್ ರಾವ್, ಕಿನ್ನಿಗೋಳಿ ಇನ್ನರ್‌ವೀಲ್ ಅಧ್ಯಕ್ಷೆ ರಾಧಾ ಶೆಣೈ, ಅನಿತಾ ರೈ ಮತ್ತಿತರರು ಉಪಸ್ಥಿತರಿದ್ದರು.

Kinnigoli-2012201701

Comments

comments

Comments are closed.

Read previous post:
Kinnigoli-19121713
ಕೊಕುಡೆ : ಯುವ ಕೇಸರಿ ವಾರ್ಷಿಕೋತ್ಸವ

ಕಿನ್ನಿಗೋಳಿ : ಸಾಮಾಜಿಕ ಚಿಂತನೆಯನ್ನು ಬೆಳೆಸಿಕೊಂಡು ಕ್ರಿಯಾ ಶಕ್ತಿ, ಜ್ಞಾನಶಕ್ತಿ, ಇಚ್ಛಾ ಶಕ್ತಿ, ಧನಶಕ್ತಿ, ಜನಶಕ್ತಿ ಬೆಳೆಸಿ ರಾಜಕೀಯ ರಹಿತವಾಗಿ ಮಾಡುವ ಸಮಾಜ ಸೇವೆ ಶ್ಲಾಘನೀಯ ಎಂದು ದಕ್ಷಿಣ...

Close