ರೋಟರಿಯಿಂದ ಕ್ರಿಸ್‌ಮಸ್

ಕಿನ್ನಿಗೋಳಿ: ಸಾಮಾಜಿಕ ಸಂಬಂಧ ಮಾನವೀಯ ಮೌಲ್ಯಗಳು ಕುಸಿಯುತ್ತಿರುವ ಇಂದಿನ ಕಾಲದಲ್ಲಿ ಶಾಂತಿ, ನೆಮ್ಮದಿ ಸ್ನೇಹ ಸೌಹಾರ್ಧತೆಯನ್ನು ಸಾರುವ ಹಬ್ಬಗಳನ್ನು ಆಚರಿಸಿ ಸುದೃಢ ಸಮಾಜ ನಿರ್ಮಾಣ ಮಾಡುವಲ್ಲಿ ಎಲ್ಲರೂ ಕಾರ್ಯಚರಿಸಬೇಕು ಎಂದು ಎಂದು ತಾಳಿಪಾಡಿ ಪೊಂಪೈ ಪದವಿ ಪೂರ್ವ ಕಾಲೇಜು ಪ್ರಿನ್ಸಿಪಾಲ್ ಪ್ರೊ. ಎನ್. ಎಮ್. ಮಾಥ್ಯೂ ಹೇಳಿದರು.
ಕಿನ್ನಿಗೋಳಿ ರೋಟರಿ ಕ್ಲಬ್ ಆಶ್ರಯದಲ್ಲಿ ಕಿನ್ನಿಗೋಳಿ ರೋಟರಿ ರಜತ ಭವನದಲ್ಲಿ ಸೋಮವಾರ ನಡೆದ ಕಿಸ್‌ಮಸ್ ಆಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಈ ಸಂದರ್ಭ ಅಂತರಾಷ್ಟ್ರೀಯ ಪವರ್ ಲಿಪ್ಟರ್ ಹಾಗೂ ಇತ್ತಿಚೆಗೆ ಕೇರಳದಲ್ಲಿ ನಡೆದ ಏಶ್ಯನ್ ಪವರ್ ಲಿಪ್ಟಿಂಗ್ ಸ್ಪರ್ಧೆಯಲ್ಲಿ ಮೂರು ಚಿನ್ನದ ಪದಕ ಪಡೆದ ಕಿನ್ನಿಗೋಳಿ ರೋಟರಿ ಸದಸ್ಯ ಮಂಜುನಾಥ ಮಲ್ಯ ಅವರನ್ನು ಸನ್ಮಾನಿಸಲಾಯಿತು. ರೋಟರಿ ಸಹಾಯಕ ಗರ್ವನರ್ ಜೊಸ್ಸಿ ಪಿಂಟೋ, ರೋಟರಿ ಜಿಲ್ಲಾ ನಿರ್ದೇಶಕ ಡಾ| ಅರವಿಂದ ಭಟ್, ವಲಯ ಸೇನಾನಿ ಬಾಲಚಂದ್ರ ಸನಿಲ್, ಇನ್ನರ್‌ವೀಲ್ ಅಧ್ಯಕ್ಷೆ ರಾಧಾ ಶೆಣೈ, ಜೆರಾಲ್ದ್ ಮಿನೇಜಸ್, ರಮಾನಂದ ಪೂಜಾರಿ ಉಪಸ್ಥಿತರಿದ್ದರು.
ಹೆರಿಕ್ ಪಾಯಸ್ ಪರಿಚಯಿಸಿದರು. ಕಿನ್ನಿಗೋಳಿ ರೋಟರಿ ಕ್ಲಬ್ ಅಧ್ಯಕ್ಷೆ ಸೆವ್ರಿನ್ ಲೋಬೋ ಸ್ವಾಗತಿಸಿದರು. ಕಾರ್ಯದರ್ಶಿ ಸಂತೋಷ್ ಆಚಾರ್ಯ ವಂದಿಸಿದರು. ಶರತ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Kinnigoli-2012201702

Comments

comments

Comments are closed.

Read previous post:
Kinnigoli-2012201701
ಕಿನ್ನಿಗೋಳಿ : ಧ್ಯಾನ ಶಿಬಿರ ಸಮಾರೋಪ

ಕಿನ್ನಿಗೋಳಿ : ಮಾನಸಿಕ ನೆಮ್ಮದಿ ಹಾಗೂ ಆರೋಗ್ಯವಂತರಾಗಿ ಬಾಳಲು ಧ್ಯಾನ ಶಿಬಿರ ಬಹಳಷ್ಟು ಪರಿಣಾಮಕಾರಿ ಎಂದು ಕಟೀಲು ದೇವಳ ಅರ್ಚಕ ಲಕ್ಷ್ಮೀನಾರಾಯಣ ಆಸ್ರಣ್ಣ ಹೇಳಿದರು. ಕಿನ್ನಿಗೋಳಿಯ ಯುಗಪುರುಷ ಸಭಾಭವನದಲ್ಲಿ ಪ್ರಜಾಪಿತ...

Close