ಕಿನ್ನಿಗೋಳಿ : ಕ್ರಿಸ್‌ಮಸ್ ಸೌಹಾರ್ದ ಕೂಟ

ಕಿನ್ನಿಗೋಳಿ: ಭಾರತ ವಿವಿಧತೆಯಲ್ಲಿ ಏಕತೆ ಹೊಂದಿದ ದೇಶವಾಗಿದೆ. ಕ್ರಿಸ್‌ಮಸ್ ದಯೆ, ಪ್ರೀತಿ, ಅನುಕಂಪ, ಸೇವೆ ಮುಂತಾದ ಮಾನವೀಯತೆ ನೆಲೆಗಳನ್ನು ಸಾರುವ ಸಂಭ್ರಮ ಎಂದು ಮುಲ್ಕಿ ಮೂಡಬಿದಿರೆ ಶಾಸಕ ಕೆ. ಅಭಯಚಂದ್ರ ಜೈನ್ ಹೇಳಿದರು.
ಕಿನ್ನಿಗೋಳಿ ವಲಯದ ಚರ್ಚ್‌ಗಳ ಆಶ್ರಯದಲ್ಲಿ ಗುರುವಾರ ಕಿನ್ನಿಗೋಳಿ ಚರ್ಚ್ ಸಭಾ ಭವನದಲ್ಲಿ ನಡೆದ ಕ್ರಿಸ್‌ಮಸ್ ಸೌಹಾರ್ದ ಕೂಟದಲ್ಲಿ ಮಾತನಾಡಿದರು.
ಕಿನ್ನಿಗೋಳಿ ಚರ್ಚ್ ಪ್ರಧಾನ ಧರ್ಮಗುರು ಫಾ. ವಿನ್ಸೆಂಟ್ ಎಫ್. ಮೊಂತೆರೂ ಅಧ್ಯಕ್ಷತೆ ವಹಿಸಿ ಮಾತನಾಡಿ ಮಾನವೀಯ ಮೌಲ್ಯಗಳಿಗೆ ಹೆಚ್ಚಿನ ಒತ್ತು ಕೊಟ್ಟು ಎಲ್ಲರೂ ಶಾಂತಿ ಸೌಹಾರ್ಧತೆಯ ಜೀವನ ಸಾಗಿಸಬೇಕು ಹಾಗಾದಾಗ ಸಮಾಜದ ಅಭಿವೃದ್ಧಿ ಸಾಧ್ಯ ಎಂದು ಹೇಳಿದರು.
ಐಕಳ ಪೊಂಪೈ ಕಾಲೇಜು ಪ್ರಾಧ್ಯಾಪಕ ಪ್ರೊ. ಜಗದೀಶ ಹೊಳ್ಳ, ಮೂಲ್ಕಿ ವಿಜಯ ಪದವಿ ಪೂರ್ವ ಕಾಲೇಜು ಪ್ರಿನಿಪಾಲ್ ಫಮೀದಾ ಬೇಗಂ ಉಪಸ್ಥಿತರಿದ್ದರು.
ಕಿರೆಂ ಚರ್ಚ್ ಧರ್ಮಗುರು ಫಾ. ವಿಕ್ಕರ್ ಡಿಮೆಲ್ಲೊ ಸ್ವಾಗತಿಸಿದರು. ವಲೇರಿಯನ್ ಸಿಕ್ವೇರಾ ವಂದಿಸಿದರು. ಲೋನಾ ಡಿಸೋಜ ಕಾರ್ಯಕ್ರಮ ನಿರೂಪಿಸಿದರು.
ಕಿರೆಂ ಹಾಗೂ ಕಿನ್ನಿಗೋಳಿ ಚರ್ಚ್ ಗಾಯನ ಮಂಡಳಿಯಿಂದ ಕ್ರಿಸ್‌ಮಸ್ ಕ್ಯಾರಲ್ಸ್ ಹಾಡಲಾಯಿತು. ಸೈಂಟ್ ಮೇರಿಸ್ ಸೆಂಟ್ರಲ್ ಶಾಲಾ ವಿದ್ಯಾರ್ಥಿಗಳಿಂದ ನೃತ್ಯ ಕಾರ್ಯಕ್ರಮ ನಡೆಯಿತು.

Kinnigoli-23121703

Comments

comments

Comments are closed.

Read previous post:
Kinnigoli-23121702
ಉಲ್ಲಂಜೆ ಶಾಲಾ ವಾರ್ಷಿಕೋತ್ಸವ

ಕಿನ್ನಿಗೋಳಿ: ಕನ್ನಡ ಶಾಲೆ- ಸರಕಾರಿ ಶಾಲೆ ಎಂಬ ಬೇಧಭಾವ ಮಾಡದೆ ಗ್ರಾಮಸ್ಥರು ನಮ್ಮ ಶಾಲೆ ಎಂಬ ಕಾಳಜಿಯಿಂದ ಶಾಲೆಯ ಬಗ್ಗೆ ಅಭಿಮಾನ ಗೌರವ ಇಟ್ಟಿರುವುದು ಎಲ್ಲರಿಗೂ ಮಾದರಿಯಾಗಿದೆ ಎಂದು...

Close