ಏಳಿಂಜೆ ಲಿಟ್ಲ್ ಫ್ಲವರ್ ಶಾಲಾ ವಾರ್ಷಿಕೋತ್ಸವ

ಕಿನ್ನಿಗೋಳಿ: ಅಂಕ ಗಳಿಸುವುದೇ ಶಿಕ್ಷಣವಲ್ಲ. ಸರಕಾರಿ ಹಾಗೂ ಕನ್ನಡ ಶಾಲೆಯ ಬಗ್ಗೆ ಕೀಳರಿಮೆ ಬೇಡ ಇಂತಹ ಶಾಲೆಗಳಲ್ಲಿ ಕಲಿತು ಸಾಧನೆ ಮಾಡಿದವರು ಹಲವಾರು ಮಂದಿ ಇದ್ದಾರೆ ಎಂದು ನಿವೃತ್ತ ಉಪ ತಹಶಿಲ್ದಾರ್ ವೈ. ಯೋಗೀಶ್ ರಾವ್ ಹೇಳಿದರು.
ಸೋಮವಾರ ಏಳಿಂಜೆ ಅನುದಾನಿತ ಲಿಟ್ಲ್ ಫ್ಲವರ್ ಹಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವ ಸಮಾರಂಭದಲ್ಲಿ ಮಾತನಾಡಿದರು.
ಈ ಸಂದರ್ಭ ದ. ಕ. ಜಿಲ್ಲಾ ರಾಜೋತ್ಸವ ಪ್ರಶಸ್ತಿ ಪುರಸ್ಕೃತ ವೈ. ಕೃಷ್ಣ ಸಾಲ್ಯಾನ್, ಶಾಯುಷಿ ಕಲ್ಯಾಣಿ ಶೆಟ್ಟಿ ಹೊಯಿಗೆ ಮಾರು ಅವರನ್ನು ಸನ್ಮಾನಿಸಲಾಯಿತು. ವಾಸುದೇವ ಭಟ್ ಅವರ ಪ್ರಾಯೋಜಕತ್ವದಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಯಾದ ಕೃತಿಕಾ ಅವರಿಗೆ ಚಿನ್ನದ ನಾಣ್ಯ ಹಾಗೂ ಪ್ರತಿಭಾನ್ವಿತ ವಿದ್ಯಾರ್ಥಿ ರೂಪೇಶ್ ಅವರಿಗೆ ಬೆಳ್ಳಿಯ ನಾಣ್ಯವನ್ನು ಲಕ್ಷ್ಮೀಶ್ ಭಟ್ ಹಾಗೂ ಗಣೇಶ್ ಭಟ್ ಅವರು ನೀಡಿದರು.
ಶಾಲಾ ಸಂಚಾಲಕ ಫಾ| ವಿಕ್ಟರ್ ಡಿಮೆಲ್ಲೊ ಅಧ್ಯಕ್ಷತೆ ವಹಿಸಿದ್ದರು.
ಕೌಶಲ್ಯ ಶೆಟ್ಟಿ ಎಳಿಂಜೆ ಭಂಡಶಾಲೆ, ಐಕಳ ಗ್ರಾಮ ಪಂಚಾಯತ್ ಅಧ್ಯಕ್ಷ ದಿವಾಕರ ಚೌಟ, ಶಾಲಾಭಿವೃದ್ಧಿ ಸಮಿತಿಯ ರಿಚರ್ಡ್ ಮಿರಾಂದ, ಏಳಿಂಜೆ ನವಚೇತನ ಯುವಕ ಮಂಡಲದ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ, ಕಿನ್ನಿಗೋಳಿ ರೋಟರಿಕ್ಲಬ್ ಅಧ್ಯಕ್ಷೆ ಸೆವ್ರಿನ್ ಲೋಬೋ, ಆಶಾ ಎಮ್ ಶೆಟ್ಟಿ ಉಪಸ್ಥಿತರಿದ್ದರು.
ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಲಕ್ಷ್ಮಣ್ ಬಿಬಿ ಸ್ವಾಗತಿಸಿದರು. ಶಾಲಾ ಮುಖ್ಯ ಶಿಕ್ಷಕಿ ಜೂಲಿಯಾನ ವರದಿ ವಾಚಿಸಿದರು. ಸಹಶಿಕ್ಷಕಿ ಸುರೇಖಾ ಬಹುಮಾನ ವಿಜೇತರ ಪಟ್ಟಿ ವಾಚಿಸಿದರು. ನೀತಾ ವಂದಿಸಿದರು. ಶರತ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Kinnigoli-23121705

 

Comments

comments

Comments are closed.

Read previous post:
Kinnigoli-23121704
ಹಳೆಯಂಗಡಿ ಪಂಚಾಯಿತಿ ಮಕ್ಕಳ ಗ್ರಾಮ ಸಭೆ

ಕಿನ್ನಿಗೋಳಿ: ಅಂಗನವಾಡಿ ಕೇಂದ್ರದ ಮಕ್ಕಳಿಗೆ ಹಾಲು ಮತ್ತು ಮೊಟ್ಟೆಗಳನ್ನು ನೀಡುತ್ತಾರೆ ಒಂದನೇಯಿಂದ ಏಳರವರೆಗಿನ ಶಾಲಾ ಮಕ್ಕಳಿಗೆ ಯಾಕೆ ಕೊಡುವುದಿಲ್ಲ ಇದು ತಾರತಮ್ಯವಲ್ಲವೇ. ನಮ್ಮದು ಸಹ ಸರಕಾರಿ ಶಾಲೆಯಲ್ಲವೇ? ಎಂದು...

Close