ಗುತ್ತಕಾಡು ಶಾಲಾ ವಾರ್ಷಿಕೋತ್ಸವ

ಕಿನ್ನಿಗೋಳಿ : ವಿದ್ಯಾರ್ಥಿಗಳ ಸರ್ವೊತೋಮುಖ ಬೆಳವಣಿಗೆಗೆ ಶಿಕ್ಷಣ ಸಂಸ್ಥೆಗಳು ಶ್ರಮಿಸಬೇಕು ಎಂದು ದ.ಕ. ಜಿಲ್ಲಾ ಪಂಚಾಯಿತಿ ಸದಸ್ಯ ವಿನೋದ್ ಕುಮಾರ್ ಬೊಳ್ಳೂರು ಹೇಳಿದರು.
ಗುತ್ತಕಾಡು ದ. ಕ. ಜಿಲ್ಲಾ ಪಂಚಾಯಿತಿ ಸರಕಾರಿ ಶಾಲೆಯಲ್ಲಿ ಶುಕ್ರವಾರ ನಡೆದ ವಾರ್ಷಿಕೋತ್ಸವ ಸಮಾರಂಭದಲ್ಲಿ ಮಾತನಾಡಿದರು.
ಕಿನ್ನಿಗೋಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಫಿಲೋಮಿನಾ ಸಿಕ್ವೇರಾ ಅಧ್ಯಕ್ಷತೆ ವಹಿಸಿದ್ದರು.
ಮಂಗಳೂರು ತಾ. ಪಂ. ಸದಸ್ಯ ದಿವಾಕರ ಕರ್ಕೇರಾ ಬಹುಮಾನ ವಿತರಿಸಿದರು. ಗುತ್ತಕಾಡು ಶಾಂತಿನಗರ ಮೂಕಾಂಬಿಕಾ ದೇವಳದ ಧರ್ಮದರ್ಶಿ ವಿವೇಕಾನಂದ, ಟಿ. ಎಚ್ . ಮಯ್ಯದ್ದಿ, ಶ್ಯಾಮಲ ಪಿ. ಹೆಗ್ಡೆ, ವಾಣಿ, ಶಿಕ್ಷಣ ಸಂಯೋಜಕ ಜಿ. ಉಸ್ಮಾನ್, ಶಾಲಾ ಸಮಿತಿಯ ಚಂದ್ರ ಶೇಖರ್, ಗ್ರೀನ್ ಸ್ಟಾರ್ ಕ್ರಿಕೆಟರ‍್ಸ್ ಅಧ್ಯಕ್ಷ ಗುಲಾಂ ಹುಸೇನ್ ಉಪಸ್ಥಿತರಿದ್ದರು. ಶಾಲಾ ಮುಖ್ಯ ಶಿಕ್ಷಕಿ ರೀಟಾ ಡೇಸಾ ಸ್ವಾಗತಿಸಿದರು. ಸಹಶಿಕ್ಷಕಿ ಗೀತಾ ವರದಿ ವಾಚಿಸಿದರು. ಸುಶ್ಮಿತಾ ಬಹುಮಾನ ವಿಜೇತರ ವಿವರ ತಿಳಿಸಿದರು. ಯಶೋದಾ ಕಾರ್ಯಕ್ರಮ ನಿರೂಪಿಸಿದರು.

Kinnigoli-23121707

Comments

comments

Comments are closed.