ಹಳೆಯಂಗಡಿ : ಕ್ರಿಸ್ಮಸ್ ಸೌಹಾರ್ದ ಕೂಟ

ಕಿನ್ನಿಗೋಳಿ: ಕದಡಿರುವ ಕೋಮು ಸಾಮರಸ್ಯ ಬೆಸೆಯುವ ಕೆಲಸವಾಗಬೇಕು. ಕ್ರಿಸ್‌ಮಸ್ ಹಬ್ಬದ ಸ್ನೇಹ ಸೌಹಾರ್ಧತೆಯ ಸಂದೇಶವನ್ನು ಎಲ್ಲರಿಗೂ ತಿಳಿಹೇಳಬೇಕು. ಸಾಮರಸ್ಯದ ಜೀವನ ನಮ್ಮದಾಗಲಿ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಮತ್ತು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಲ್ಲನ ಗೌಡ ಹೇಳಿದರು.
ಮಂಗಳೂರಿನ ಭಾರತದ ಕ್ರೈಸ್ತ ಚರ್ಚುಗಳ ಒಕ್ಕೂಟದ ಸಂಯೋಜನೆಯಲ್ಲಿ ಹಳೆಯಂಗಡಿಯ ಶ್ರೀನಿವಾಸ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ನಡೆದ ಕ್ರಿಸ್ಮಸ್ ಹಬ್ಬದ ಕ್ರಿಸ್ಮಸ್ ಸೌಹಾರ್ದ ಕೂಟ ಮತ್ತು ಕೋಮು ಸೌಹಾರ್ದ ಕಾನೂನು ಮಾಹಿತಿ 2017 ಹಾಗೂ ಅಂತರ ಚರ್ಚುಗಳ ಕ್ರಿಸ್ಮಸ್ ಗಾಡುಗಳ ಸ್ಪರ್ಧಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಭಾರತದ ಕ್ರೈಸ್ತ ಚರ್ಚುಗಳ ಒಕ್ಕೂಟ ಮಂಗಳೂರು ಇದರ ಅಧ್ಯಕ್ಷ ನ್ಯಾಯವಾದಿ ನೋಟರಿ ಡೇನಿಯಲ್ ದೇವರಾಜ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಕ್ರಿಸ್ಮಸ್ ಹಬ್ಬ ಕೊಡುಗೆ ನೀಡುವ ಸಂಭ್ರಮವಾದ್ದರಿಂದ ಜನರಿಗೆ ಸೇವೆಯ ಕೊಡುಗೆಯನ್ನು ನೀಡುವ ಪ್ರಯತ್ನ ನಿರಂತರವಾಗಿ ನಡೆಯಬೇಕು ಎಂದರು.
ನ್ಯಾಯಾಂಗ ಇಲಾಖೆಯ ಶಿರಸ್ತೇದಾರ ಪ್ರಕಾಶ್ ನಾಯಕ್ ಕಾನೂನು ಮಾಹಿತಿ ನೀಡಿದರು.
ಮೂಲ್ಕಿ ಕಾರ್ನಾಡು ಚರ್ಚ್ ಧರ್ಮಗುರು ಫಾ. ಫ್ರಾನ್ಸಿಸ್ ಝೇವಿಯರ್ ಗೋಮ್ಸ್, ಕದಿಕೆ ಜುಮ್ಮಾ ಮಸೀದಿ ಧರ್ಮಗುರು ಕೆ.ಹೆಚ್. ಅಬ್ದುಲ್ ರೆಹಮಾನ್ ಫೈಝಿ, ಧಾರ್ಮಿಕ ಚಿಂತಕ ಕೊಲಕಾಡಿ ವೇ.ಮೂ. ವಾದಿರಾಜ ಉಪಾಧ್ಯಾಯ ಆಶೀರ್ಚಚನ ನೀಡಿದರು.
ಈ ಸಂದರ್ಭ ಪಕ್ಷಿಕೆರೆ ಸಂತ ಜ್ಯೂಡ್ ಚರ್ಚ್ ಪ್ರಧಾನ ಧರ್ಮಗುರು ಫಾ. ಆಂಡ್ರ್ಯೂ ಲಿಯೋ ಡಿಸೋಜಾ, ಕೃಷ್ಣಾಪುರ ಸಿ.ಎಸ್.ಐ. ಚರ್ಚ್‌ನ ಸಭಾಪಾಲಕ ರೆ. ಐಸನ್ ಪಾಲನ್ನ, ಕರಾವಳಿ ಪ್ರಾಧಿಕಾರ ಸದಸ್ಯ ಕೆ.ಸಾಹುಲ್ ಹಮೀದ್ ಕದಿಕೆ, ಹಳೆಯಂಗಡಿ ಜಾರಂದಾಯ ದೈವಸ್ಥಾನದ ಆಡಳಿತ ಮೊಕ್ತೇಸರ ರಂಗನಾಥ್ ಭಟ್, ಉಡುಪಿ ಜಿಲ್ಲೆಯ ಭಾರತೀಯ ಕ್ರಿಸ್ತ ಒಕ್ಕೂಟದ ಅಧ್ಯಕ್ಷ ಚಾರ್ಲ್ಸ್ ಅಂಬ್ಲರ್, ನಿವೃತ್ತ ಬ್ಯಾಂಕ್ ಅಧಿಕಾರಿ, ವಕೀಲ ಎಚ್. ಭೋಜ ಅಮೀನ್ ಅವರನ್ನು ಸಿಎಸ್‌ಐನ ಬಿಷಪ್‌ರಾದ ರೆ. ಮೋಹನ್ ಮನೋರಾಜ್ ಸಾಧಕರ ನೆಲೆಯಲ್ಲಿ ಸನ್ಮಾನಿಸಿದರು.
ಮೂಲ್ಕಿ ಸಿಎಸ್‌ಐ ಯೂನಿಟ್ ಚರ್ಚ್‌ನ ಸಭಾ ಪಾಲಕ ರೆ .ಎಡ್ವರ್ಡ್ ಎಸ್. ಕರ್ಕಡ, ಸಿಎಸ್‌ಐ ಜಿಲ್ಲಾ ಸಮಿತಿಯ ರೆ. ಎಮ್.ಪ್ರಭುರಾಜ್, ಹಳೆಯಂಗಡಿ ಹೆಬ್ರೋನ್ ಗಾಸ್ಪೆಲ್ ಎಸೆಂಬ್ಲಿಯ ರೆ. ಪ್ರಸನ್ನ ಪಾಸ್ಟರ್ ಉಪಸ್ಥಿತರಿದ್ದರು.
ಶಕ್ತಿನಗರ ಎಮೇಜಿಂಗ್ ಗ್ರೇಸ್ ಮಿನಿಷ್ಟ್ರಿಸ್‌ನ ಸಭಾಪಾಲಕ ರೆ. ಡಾ.ಪ್ರಮೋದ್ ಗೋಣಿ ಸ್ವಾಗತಿಸಿದರು, ಹರೀಶ್ ನಾಯಕ್ ವಂದಿಸಿದರು, ಜೋಶುವಾ ಕಾರ್ಯಕ್ರಮ ನಿರೂಪಿಸಿದರು.

Kinnigoli-23121708

 

Comments

comments

Comments are closed.

Read previous post:
Kinnigoli-23121707
ಗುತ್ತಕಾಡು ಶಾಲಾ ವಾರ್ಷಿಕೋತ್ಸವ

ಕಿನ್ನಿಗೋಳಿ : ವಿದ್ಯಾರ್ಥಿಗಳ ಸರ್ವೊತೋಮುಖ ಬೆಳವಣಿಗೆಗೆ ಶಿಕ್ಷಣ ಸಂಸ್ಥೆಗಳು ಶ್ರಮಿಸಬೇಕು ಎಂದು ದ.ಕ. ಜಿಲ್ಲಾ ಪಂಚಾಯಿತಿ ಸದಸ್ಯ ವಿನೋದ್ ಕುಮಾರ್ ಬೊಳ್ಳೂರು ಹೇಳಿದರು. ಗುತ್ತಕಾಡು ದ. ಕ. ಜಿಲ್ಲಾ ಪಂಚಾಯಿತಿ...

Close