ಹಳೆಯಂಗಡಿ ಪಂಚಾಯಿತಿ ಮಕ್ಕಳ ಗ್ರಾಮ ಸಭೆ

ಕಿನ್ನಿಗೋಳಿ: ಅಂಗನವಾಡಿ ಕೇಂದ್ರದ ಮಕ್ಕಳಿಗೆ ಹಾಲು ಮತ್ತು ಮೊಟ್ಟೆಗಳನ್ನು ನೀಡುತ್ತಾರೆ ಒಂದನೇಯಿಂದ ಏಳರವರೆಗಿನ ಶಾಲಾ ಮಕ್ಕಳಿಗೆ ಯಾಕೆ ಕೊಡುವುದಿಲ್ಲ ಇದು ತಾರತಮ್ಯವಲ್ಲವೇ. ನಮ್ಮದು ಸಹ ಸರಕಾರಿ ಶಾಲೆಯಲ್ಲವೇ? ಎಂದು ಹಳೆಯಂಗಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶಾಲಾ ಮಕ್ಕಳ ಹಕ್ಕುಗಳ ಗ್ರಾಮ ಸಭೆಯಲ್ಲಿ ಮಕ್ಕಳು ಪ್ರಶ್ನೆ ಮಾಡಿದರು.
ಹಳೆಯಂಗಡಿ ಶ್ರೀ ನಾರಾಯಣ ಸನಿಲ್ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಹಳೆಯಂಗಡಿ ಪಂಚಾಯಿತಿ ವ್ಯಾಪ್ತಿಯ ಶಾಲಾ ಮಕ್ಕಳ ಹಕ್ಕುಗಳ ಗ್ರಾಮ ಸಭೆಯಲ್ಲಿ ನಾರಾಯಣ ಸನಿಲ್ ಫ್ರೌಢಶಾಲೆಯ ವಿದ್ಯಾರ್ಥಿ ಮಹಮ್ಮದ್ ಶಿಯಾನ್ ಪ್ರಶ್ನಿಸಿದರು.
ಪ್ರತಿಕ್ರಿಯಿಸಿದ ಅಂಗನವಾಡಿ ಕೇಂದ್ರದ ಮೇಲ್ವಿಚಾರಕಿ ಶೀಲಾವತಿ, ಅಂಗನವಾಡಿ ಕೇಂದ್ರ ಹಾಗೂ ಶಾಲೆಯ ಇಲಾಖೆಗಳು ಬೇರೆ ಬೇರೆಯಾಗಿದ್ದರೂ ಮಕ್ಕಳ ಬೇಡಿಕೆಯನ್ನು ಶಿಕ್ಷಣ ಇಲಾಖೆಗೆ ತಲುಪಿಸಲಾಗುವುದು ಎಂದರು.
ಶಾಲಾ ವಠಾರದಲ್ಲಿ ಸೂಚನಾ ಫಲಕ ಬೇಕು, ಶೌಚಾಲಯ ಹೆಚ್ಚು ಬೇಕು, ಶೌಚಾಲಯದ ಛಾವಣಿ ಸರಿಯಿಲ್ಲ, ಆಟದ ಮೈದಾನ ಸಮತಟ್ಟಿಲ್ಲ, ಶಾಲೆಗೆ ಆವರಣ ಗೋಡೆ ಬೇಕು ಎಂಬ ಹಲವಾರು ನೂನ್ಯತೆಗಳನ್ನು ಮಕ್ಕಳು ಹೇಳಿದರು.
ಶ್ರೀ ನಾರಾಯಣ ಸನಿಲ್ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿ ಬಶೀರ್ ಅಧ್ಯಕ್ಷತೆ ವಹಿಸಿದ್ದರು.
ನಂದಾ ಪಾಯಸ್ ಮಾಹಿತಿ ನೀಡಿದರು.
ಶಾಲಾ ಮುಂಖಡರಾದ ಮನ್ವಿತ್, ಸಪ್ತಮಿ, ರಕ್ಷಣ್, ಕಾರ್ತಿಕ್, ಹಳೆಯಂಗಡಿ ಗ್ರಾ.ಪಂ. ಅಧ್ಯಕ್ಷೆ ಜಲಜಾ, ಉಪಾಧ್ಯಕ್ಷೆ ಪದ್ಮಾವತಿ ಶೆಟ್ಟಿ, ಕಾರ್ಯದರ್ಶಿ ಕೇಶವ ದೇವಾಡಿಗ, ಅಂಗನವಾಡಿ ಮೇಲ್ವಿಚಾರಕಿ ಶೀಲಾವತಿ, ಆರೋಗ್ಯ ಇಲಾಖೆಯ ಪ್ರದೀಪ್‌ಕುಮಾರ್, ಸಿ.ಆರ್.ಪಿ. ಕುಸುಮಾ, ಮುಖ್ಯ ಶಿಕ್ಷಕ ಮೈಕಲ್ ಡಿಸೋಜಾ, ಪ್ರಿನ್ಸಿಪಾಲ್ ಜಯಶ್ರೀ ಉಪಸ್ಥಿತರಿದ್ದರು.
ಶ್ರೀ ನಾರಾಯಣ ಸನಿಲ್ ಪದವಿ ಪೂರ್ವ ಕಾಲೇಜಿನ ಅಶ್ವಿನ್ ಸ್ವಾಗತಿಸಿದರು, ದೀಪ್ತಿ ವಂದಿಸಿದರು, ನಮಿತ ಕಾರ್ಯಕ್ರಮ ನಿರೂಪಿಸಿದರು.

Kinnigoli-23121704

Comments

comments

Comments are closed.

Read previous post:
Kinnigoli-23121703
ಕಿನ್ನಿಗೋಳಿ : ಕ್ರಿಸ್‌ಮಸ್ ಸೌಹಾರ್ದ ಕೂಟ

ಕಿನ್ನಿಗೋಳಿ: ಭಾರತ ವಿವಿಧತೆಯಲ್ಲಿ ಏಕತೆ ಹೊಂದಿದ ದೇಶವಾಗಿದೆ. ಕ್ರಿಸ್‌ಮಸ್ ದಯೆ, ಪ್ರೀತಿ, ಅನುಕಂಪ, ಸೇವೆ ಮುಂತಾದ ಮಾನವೀಯತೆ ನೆಲೆಗಳನ್ನು ಸಾರುವ ಸಂಭ್ರಮ ಎಂದು ಮುಲ್ಕಿ ಮೂಡಬಿದಿರೆ ಶಾಸಕ ಕೆ....

Close