ಜನರ ಧ್ವನಿಯಾಗಿ ಹಿತರಕ್ಷಣಾ ವೇದಿಕೆ ನಿರ್ವಹಿಸಲಿ

ಮೂಲ್ಕಿ: ಜನ ಸಾಮಾನ್ಯರ ಧ್ವನಿಯಾಗಿ, ಮೂಲ್ಕಿಯಲ್ಲಿನ ಸಮಸ್ಯೆಗಳ ನಿವಾರಣೆಗೆ ಶ್ರಮಿಸಲು ಮೂಲ್ಕಿ ನಾಗರಿಕ ಹಿತರಕ್ಷಣಾ ವೇದಿಕೆ ಸನ್ನಧ್ಧರಾಗಬೇಕು, ಸಾಮರಸ್ಯದ ಬದುಕನ್ನು ಕಾಣಲು ಯುವ ಸಮುದಾಯವನ್ನು ಕಟ್ಟಿಕೊಂಡು ಮನಸ್ಸುಗಳನ್ನು ಬೆಸೆಯುವ ಕಾರ್ಯಕ್ರಮಗಳು ಸಹ ನಡೆಸಬೇಕು ಎಂದು ಕಿನ್ನಿಗೋಳಿ ಸ್ವಾಮಿ ವಿವೇಕಾನಂದ ಸೇವಾ ಸಂಸ್ಥೆಯ ಸಂಸ್ಥಾಪಕ ನಿಡ್ಡೋಡಿ ಚಾವಡಿ ಮನೆ ಜಗನ್ನಾಥ ಶೆಟ್ಟಿ ಹೇಳಿದರು.
ಅವರು ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ವಠಾರದಲ್ಲಿ ಮೂಲ್ಕಿ ನಾಗರಿಕ ಹಿತರಕ್ಷಣಾ ವೇದಿಕೆಯ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.
ದೇವಳದ ಆಡಳಿತ ಮೊಕ್ತೇಸರ ಎನ್.ಎಸ್.ಮನೋಹರ ಶೆಟ್ಟಿ ವೇದಿಕೆಯನ್ನು ಉದ್ಘಾಟಿಸಿ, ಶುಭ ಹಾರೈಸಿದರು.
ಕಾರ್ನಾಡು ಚರ್ಚ್‌ನ ಧರ್ಮಗುರು ಫಾ.ಝ್ಸೇವಿಯರ್ ಗೋಮ್ಸ್, ಬಪ್ಪನಾಡು ದೇವಳದ ಅರ್ಚಕ ಶ್ರೀಪತಿ ಉಪಾಧ್ಯಾಯ, ಕಾರ್ನಾಡು ಜುಮ್ಮಾ ಮಸೀದಿಯ ಮಹಮ್ಮದ್ ಶಾಫಿ ಮೌಲವಿ ಅವರು ಆಶೀರ್ವಚನ ನೀಡಿದರು.
ಕಸಾಪದ ಮಾಜಿ ರಾಜ್ಯಾಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು ಶುಭಾಶಂಸನೆ ಮಾಡಿ, ಮೂಲ್ಕಿ ತಾಲೂಕು ಅರ್ಹತೆ ಹೊಂದಿದ್ದರೂ ಮೂಲಬೂತ ಸೌಕರ್ಯದ ಅವಕಾಶ ಇದ್ದೂರ ಸಹ ಹೋರಾಟಕ್ಕೆ ಬೆಲೆ ಸಿಕ್ಕಿಲ್ಲ, ಒಂದೊಂದಾಗಿ ಸರಕಾತಿ ಇಲಾಖೆಗಳು ರದ್ದುಗೊಳ್ಳುತ್ತಿರುವ ಹಿನ್ನೆಲಯೂ ಬಹಿರಂವಾಗಬೇಕು, ಇಚ್ಚಾಶಕ್ತಿಯಿಂದ ವೇದಿಕೆ ಮೂಲ್ಕಿಯಲ್ಲಿ ಕಾರ್ಯನಿರ್ವಹಿಸಬೇಕು ಎಂದರು ಹೇಳಿದರು.
ಈ ಸಂದರ್ಭದಲ್ಲಿ ಮೂಲ್ಕಿಯ ಹಿರಿಯ ಸಾಹಿತಿ ಹರಿಶ್ಚಂದ್ರ ಪಿ. ಸಾಲ್ಯಾನ್, ತೋಕೂರು ಐಟಿಐನ ಪ್ರಾಂಶುಪಾಲ ವೈ.ಎನ್.ಸಾಲಿಯಾನ್, ಯೋಗಗುರು ಜಯ ಎಂ.ಶೆಟ್ಟಿ ಕೆಂಚನಕೆರೆ, ಸಾಮಾಜಿಕ ನೇತಾರ ಭಾಸ್ಕರ ಶೆಟ್ಟಿಗಾರ್ ಕೆಂಚನಕೆರೆ ಅವರನ್ನು ವಿಶೇಷವಾಗಿ ಸನ್ಮಾನಿಸಲಾಯಿತು.
ಮೂಲ್ಕಿ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಗೋಪಿನಾಥ ಪಡಂಗ, ಜಿಎಸ್‌ಬಿ ಸಭಾದ ಅಧ್ಯಕ್ಷ ಸತ್ಯೇಂದ್ರ ಶೆಣೈ, ವೇದಿಕೆಯ ಕೋಶಾಧಿಕಾರಿ ಮೋಹನ್ ಶೆಟ್ಟಿ, ಸಹ ಕಾರ್ಯದರ್ಶಿ ರಮೇಶ್ ಶೆಟ್ಟಿ ಉಪಸ್ಥಿತರಿದ್ದರು.
ವೇದಿಕೆಯ ಅಧ್ಯಕ್ಷ ಎನ್.ಪಿ.ಶೆಟ್ಟಿ ಸ್ವಾಗತಿಸಿ, ಪ್ರಸ್ತಾವನೆಗೈದರು, ಉಪಾಧ್ಯಕ್ಷರಾದ ವಿಜಯಕುಮಾರ್ ಕುಬೆವೂರು, ರವಿಚಂದ್ರ, ನಿರ್ದೇಶಕರಾದ ಅಶೋಕ್‌ಕುಮಾರ್ ಚಿತ್ರಾಪು, ಶರತ್ ಶೆಟ್ಟಿ, ರತ್ನಾಕರ ಶೆಟ್ಟಿ ಅವರು ಸನ್ಮಾನಿತರನ್ನು ಪರಿಚಯಿಸಿದರು. ಕಾರ್ಯದರ್ಶಿ ಸತೀಶ್ ಕಿಲ್ಪಾಡಿ ವಂದಿಸಿದರು, ನರೇಂದ್ರ ಕೆರೆಕಾಡು ನಿರೂಪಿಸಿದರು.
ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಕಿನ್ನಿಗೋಳಿಯ ವಿಜಯಾ ಕಲಾವಿದರಿಂದ ಬಿಲೆಕಟ್ಟರೆ ಆವಂದಿನ ತುಳು ನಾಟಕ ಪ್ರದರ್ಶನಗೊಂಡಿತು.

Mulki-18121701

Comments

comments

Comments are closed.

Read previous post:
Kinnigoli-2012201708
ವಾಣಿಜ್ಯ ಸಂಕೀರ್ಣ, ಬಸ್ ನಿಲ್ದಾಣ ಉದ್ಘಾಟನೆ

ಕಿನ್ನಿಗೋಳಿ: ಅತೀ ವೇಗವಾಗಿ ಬೆಳೆಯುತ್ತಿರುವ ಕಿನ್ನಿಗೋಳಿ ಪೇಟೆಯಲ್ಲಿ ಸುಮಾರು 2 ಕೋಟಿ ರೂ. ವೆಚ್ಚದಲ್ಲಿ ರಸ್ತೆ ಡಾಮರೀಕರಣ, ಡಿವೈಡರ್ ಹಾಗೂ ದಾರಿದೀಪ ಅಳವಡಿಸಿ ನಗರದ ಮಾದರಿಯಲ್ಲಿ ಅಭಿವೃದ್ಧಿ ಪಡಿಸಲಾಗುವುದು....

Close